ಕಾರ್ಕಳ:ಪರಶುರಾಮ ಥೀಮ್ ಪಾರ್ಕ್ ತಿರುವು ಬಳಿ ಅಪಘಾತ
ಬೈಲೂರು ಪರಶುರಾಮ್ ಥೀಮ್ ಪಾರ್ಕ್ ತಿರುವು ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.ಫೆ.25ರಂದು ಬೆಳಿಗ್ಗೆ 05:00ಗಂಟೆಗೆ ಘಟನೆ ನಡೆದಿದೆ.ಸುಬ್ರಹ್ಮಣ್ಯ ದೇವಸ್ಥಾನದಿಂದ ಹಿರಿಯಡ್ಕಕ್ಕೆ ವಾಪಸ್ಸಾಗುತ್ತಿದ್ದ ಕಾರು ರಸ್ತೆಯ ಬದಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.