ಇಂದು ಸಂಜೆ ಗಾಂಧಿ ಮೈದಾನದಲ್ಲಿ ಛತ್ರಪತಿ ಶಿವಾಜಿ ನಾಟಕ ಉಚಿತ ಪ್ರದರ್ಶನ
ತುಳು ನಾಟಕ ರಂಗಭೂಮಿಯಲ್ಲಿ ದಾಖಲೆಯ 750 ಪ್ರದರ್ಶನದೊಂದಿಗೆ ಪ್ರದರ್ಶನಗೊಳ್ಳುತ್ತಿರುವ ಶಿವದೂತೆ ಗುಳಿಗೆ ಎನ್ನುವ ಅದ್ದೂರಿ ನಾಟಕವನ್ನು ರಚಿಸಿದ ಅಕ್ಷರ ಬ್ರಹ್ಮ ಬಿರುದಾಂಕಿತ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದ ಛತ್ರಪತಿ ಶಿವಾಜಿ ತುಳು ನಾಟಕವು ಇಂದು ಸಂಜೆ 7 ಗಂಟೆಗೆ ಕಾರ್ಕಳ ಗಾಂಧಿ ಮೈದಾನದಲ್ಲಿ ಉಚಿತ ಪ್ರದರ್ಶನಗೊಳ್ಳಲಿದೆ,
ಕ್ಷತ್ರೀಯ ಮರಾಠ ಸಮಾಜ ರಿ. ಕಾರ್ಕಳ ಇವರ ಆಶ್ರಯದಲ್ಲಿ ನಾಟಕವು ನಡೆಯಲಿದ್ದು, ಕಲಾಸಂಗಮ ಕಲಾವಿದರ ಅದ್ಭುತ ನಟನೆ, ಮನಸೂರೆಗೊಳ್ಳುವ ರಂಗ ವಿನ್ಯಾಸ, ಮತ್ತು ಖ್ಯಾತ ಗಾಯಕರ ದ್ವನಿಯಲ್ಲಿ ಹಿನ್ನಲೆ ಗಾಯನದೊಂದಿಗೆ ಈ ನಾಟಕವು ಮೂಡಿ ಬಂದಿದೆ ಒಂದು ಉತ್ತಮ ನಾಟಕವನ್ನು ಊರಿನ ಕಲಾಬಿಮಾನಿಗಳಿಗೆ ತೋರಿಸುವ ನಿಟ್ಟಿನಲ್ಲಿ ನಾಟಕವನ್ನು ಆಯೋಜನೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶುಭದರಾವ್ ತಿಳಿಸಿದ್ದಾರೆ.