
ಕಾರ್ಕಳ:ಅಕ್ರಮ ಮರಳು ಸಾಗಾಟ
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಾರ್ಕಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ನಗರ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಸಿಬ್ಬಂದಿಯವರೊಂದಿಗೆ ಕಾರ್ಕಳ ಕಾಬೆಟ್ಟು ಎಸಿಸಿ ಸಿಮೆಂಟ್ ಗೋಡೌನ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಟಿಪ್ಪರ ಲಾರಿಯಲ್ಲಿ ಲಾರಿಯ ಚಾಲಕ ಹಾಗೂ ಮಾಲೀಕ ಸೇರಿಕೊಂಡು ಅಕ್ರಮವಾಗಿ 2 ಯುನಿಟ್ ಮರಳನ್ನು ಪುಲ್ಕೆರಿ ಕಡೆಯಿಂದ ಜೋಡು ರಸ್ತೆಯ ಕಡೆಗೆ ಸಾಗಿಸುತ್ತಿದ್ದು, ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












