ಕಾರ್ಕಳ: ಕೆ.ಎಂ.ಇ.ಎಸ್. ಪ್ರಾಂಶುಪಾಲರಾಗಿ ಕೆ. ಬಾಲಕೃಷ್ಣರಾವ್ ನೇಮಕ

0

ಕಾರ್ಕಳ: ಕೆ.ಎಂ.ಇ.ಎಸ್. ಪ್ರಾಂಶುಪಾಲರಾಗಿ ಕೆ. ಬಾಲಕೃಷ್ಣರಾವ್ ನೇಮಕ

ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆ ಕೆ.ಎಂ.ಇ.ಎಸ್ ನ ಪ್ರಾಂಶುಪಾಲರಾಗಿ ಕೆ.ಬಾಲಕೃಷ್ಣರಾವ್ ನೇಮಕಗೊಂಡಿದ್ದಾರೆ.

ಇವರು ಆಂಗ್ಲಭಾಷೆ ಹಾಗೂ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 40 ವರ್ಷ ದೀರ್ಘಕಾಲ ವಿಜ್ಞಾನ ಶಿಕ್ಷಕರಾಗಿ, ಆಂಗ್ಲಭಾಷಾ ಮತ್ತು ಗಣಿತ ಉಪನ್ಯಾಸಕರಾಗಿ ಶೈಕ್ಷಣಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, ಎನ್.ಸಿ.ಸಿ. ನೇವಲ್ ವಿಂಗ್ ಕಮಿಶನ್ಸ್ ಆಫೀಸರ್ ಆಗಿ ಹದಿನೈದು ವರ್ಷಗಳ ಸೇವೆ ಸಲ್ಲಿಸಿದ ಇವರು ಕೊಚ್ಚಿನ್, ವಿಶಾಖಪಟ್ಟಣ ನೇವಲ್ ಬೇಸ್ ಗಳಲ್ಲಿಎನ್.ಸಿ.ಸಿ ತರಬೇತಿ ಪಡೆದಿದ್ದಾರೆ. ಉತ್ತರ ಭಾರತದ ಮನ್ಸೂರಿ, ಗೋವಾ ಇತ್ಯಾದಿ ಸ್ಥಳಗಳಲ್ಲಿ ರಾಷ್ಟ್ರೀಯ ಟ್ರಕ್ಕಿಂಗ್ ಎಕ್ಸ್‌ ಪೆಡಿಶನ್‌ನಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಸೋಮನ ಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಸಾಹಿತ್ಯದ ಅಭಿರುಚಿ ಹೊಂದಿರುವ ಇವರು ಕಾರ್ಕಳ ಸಾಹಿತ್ಯ ಸಂಘ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಕಳ ಇವುಗಳಲ್ಲಿ ಸಕ್ರೀಯರಾಗಿದ್ದಾರೆ. ನಾಟಕ, ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿದ್ದು, ಹಲವಾರು ಕನ್ನಡ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚಿಸಿದ್ದಾರೆ. ಕಾರ್ಕಳ ಇಂಟರ್ಯಾಕ್ಟ್ ಕ್ಲಬ್‌ನ ಸಂಯೋಜಕರಾಗಿಯೂ, ಕಾರ್ಕಳ ಜೇಸೀಸ್ ಸಂಸ್ಥೆ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಇವರು ಬರೆದ ಕನ್ನಡ ಕಾದಂಬರಿ ‘ಪಥ’ ಬಿಡುಗಡೆಯಾಗಿದೆ. ಇವರು ಈ ವಿದ್ಯಾಸಂಸ್ಥೆಗೆ ಪ್ರಾಂಶುಪಾಲರಾಗಿ ನೇಮಕಗೊಂಡಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಕೆ.ಎಸ್ ಇಮ್ಮಿಯಾಜ್ ಅಹಮ್ಮದ್ ಅಭಿನಂದಿಸಿದ್ದಾರೆ.

 

   

LEAVE A REPLY

Please enter your comment!
Please enter your name here