ತಮಿಳು ನಟ ಕಮಲ್ ಹಾಸನ್ ವಿರುದ್ಧ ಉಡುಪಿಯಲ್ಲಿಯೂ ದೂರು ದಾಖಲು

0

ತಮಿಳು ನಟ ಕಮಲ್ ಹಾಸನ್ ವಿರುದ್ಧ ಉಡುಪಿಯಲ್ಲಿಯೂ ದೂರು ದಾಖಲು

ಥಗ್ ಲೈಫ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಭಾಷೆಗೆ ಅವಮಾನವಾಗುವಂತೆ ಮಾತನಾಡಿದರು ಎಂದು ಕಮಲ್ ಹಾಸನ್ ಅವರ ಮೇಲೆ ರಾಜ್ಯದ ಜನತೆ ತೀವ್ರ ಆರೋಪವನ್ನು ಮಾಡುತ್ತಿದ್ದು, ಇದೀಗ ಉಡುಪಿಯಲ್ಲಿಯೂ ಕಮಲಾ ಹಾಸನ್ ವಿರುದ್ಧ ಪ್ರಕರಣ ದಾಖಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷರಾದ ಅನ್ಸಾರ್ ಅಹಮದ್, ಈ ಹಿಂದೆ ಬಾಹುಬಲಿ ಚಿತ್ರದಲ್ಲಿ ನಟಿಸಿದ ಸತ್ಯರಾಜ್ ರವರು ಕನ್ನಡ ವಿರೋಧಿ ಹೇಳಿಕೆಯನ್ನು ನೀಡಿದ್ದರಿಂದ ಬಾಹುಬಲಿ ಚಿತ್ರವನ್ನು ಪ್ರದರ್ಶಿಸಲು ವಿರೋಧಿಸಿದ್ದನ್ನು ಹಾಗೂ ಮುತ್ತಿಗೆ ಹಾಕಿದ ವಿಚಾರವನ್ನು ನೆನಪಿಸಿದರು. ಒಂದು ವೇಳೆ ಕಮಲ ಹಾಸನ್ ಕನ್ನಡಿಗರಲ್ಲಿ ಕ್ಷಮೆ ಯಾಚಿಸದಿದ್ದರೆ, ಅವರ ತಗ್ ಲೈಫ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿಉಗ್ರವಾದ ಹೋರಾಟವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಉಪಾಧ್ಯಕ್ಷರಾದ ಅಲ್ಫಾನ್ಸೋ, ಎಮ್‌ ಎಸ್‌.ಸೈಯ್ಯದ್ ನಿಝಾಮುದ್ದೀನ್, ಕಾಪು ತಾಲೂಕು ಅಧ್ಯಕ್ಷ ಚೇತನ್ ಪಡುಬಿದ್ರಿ, ಮಹಿಳಾ ಜಿಲ್ಲಾಧ್ಯಕ್ಷ ಜ್ಯೋತಿ ಶೇರಿಗಾರ್ ಪದಾಧಿಕಾರಿಗಳಾದ ನಾಗರಾಜ್ ವಿಜಯ ಪೂಜಾರಿ, ಖಾದರ್ ಮಂಚಕಲ್, ಶಾಹಿಲ್ ರಹಮತುಲ್ಲಾ , ದೇವಕಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

   

LEAVE A REPLY

Please enter your comment!
Please enter your name here