ಉಡುಪಿ : ಪ್ರಸಾದ್ ರಾಜ್ ಕಾಂಚನ್ ಹಟ್ಟು ಹಬ್ಬ ಪ್ರಯುಕ್ತ ನೇತ್ರದಾನ ಮತ್ತು ನೇತ್ರದಾನ ಮಾಹಿತಿ ಶಿಬಿರ

0

ಉಡುಪಿ : ಪ್ರಸಾದ್ ರಾಜ್ ಕಾಂಚನ್ ಹಟ್ಟು ಹಬ್ಬ ಪ್ರಯುಕ್ತ ನೇತ್ರದಾನ ಮತ್ತು ನೇತ್ರದಾನ ಮಾಹಿತಿ ಶಿಬಿರ

ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಹುಟ್ಟು ಹಬ್ಬ ಪ್ರಯುಕ್ತ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಸೇರಿದಂತೆ ಮೂರು ಕಡೆಗಳಲ್ಲಿ ಬೃಹತ್ ನೇತ್ರ ದಾನ ಶಿಬಿರ ಹಾಗೂ ನೇತ್ರದಾನ ಮಾಹಿತಿ ಶಿಬಿರವನ್ನು ಅಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಸಚಿವರು ವಿನಯ್ ಕುಮಾರ್ ಸೊರಕೆ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.

ಬಳಿಕ ಮಾತನಾಡಿದ ವಿನಯ್ ಕುಮಾರ್ ಸೊರಕೆ, ‘ಇವತ್ತು ನಮ್ಮನ್ನೆಲ್ಲ ಸ್ಫೂರ್ತಿ ಗೊಳಿಸುವ ಕಾರ್ಯಕ್ರಮ ನಡೆದಿದೆ.ಇವತ್ತು ಯುವಕರನ್ನೆಲ್ಲಾ ಒಟ್ಟು ಸೇರಿಸಿ ಸಮಾಜಮುಖಿ ಕೆಲಸ ಮಾಡಲು ಮುಂದಾಗಿರುವುದು ಶ್ಲಾಘನೀಯ,ನಮ್ಮ ನಂತರ ನಮ್ಮ ಕಣ್ಣನ್ನ ದಾನ ಮಾಡುವುದರ ಮೂಲಕ ದೃಷ್ಟಿ ಇಲ್ಲದವರಿಗೆ ಬೆಳಕಾಗುವಂತಹ ಈ ಅಮೂಲ್ಯ ಕಾರ್ಯಕ್ರಮದ ಹಮ್ಮಿಕೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ನೇತ್ರದಾನ ಮಾಡಲು ಸೇರಿರುವ ಯುವಕರ ದಂಡು ಕಂಡು ಹರ್ಷ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಮನುಷ್ಯ ಸಾಧನೆಗಳ ಶಿಖರ ಏರಬೇಕಾದರೆ ಕಣ್ಣುಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ. ಇವತ್ತು ಕಣ್ಣುಗಳ ದಾನಕ್ಕೆ ಯುವ ಸಮೂಹ ಮುಂದೆ ಬಂದಿರುವುದು ಕಂಡು ಬರುತ್ತಿದೆ. ಯಾವತ್ತು ಹೊಸ ಮುಖಗಳಿಗೆ ಕಣ್ಣಿನ ಬಗ್ಗೆ ಕಾಳಜಿ ಹಾಗೂ ಸಮಾಜದ ಬಗ್ಗೆ ಚಿಂತನೆ ಬಂತು ಅವಾಗ ಕಾಂಗ್ರೆಸ್ ಪಕ್ಷದ ಭವಿಷ್ಯ ಹತ್ತು ವರ್ಷ ಮುಂದೆ ಹೊದಂತೆ ಎಂದರು.

ಹುಟ್ಟು ಹಬ್ಬ ಅಚರಿಸಿಕೊಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಈ ಬಾರಿ ಯುವ ಕಾಂಗ್ರೆಸ್ ಕಾರ್ಯಕರ್ತರು ನೇತ್ರದಾನದ ಹೆಸರಲ್ಲಿ ಯುವಕರನ್ನು ಸಂಘಟಿಸುವ ಮಹತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಾವು ರಾಜಕೀಯದಲ್ಲಿ ಸಮಾಜ ಸೇವೆಯ ಮೂಲಕ ಬೆಳೆಯಬೇಕಾಗಿದೆ. ಇವತ್ತು ಮೂವತ್ತು ಲಕ್ಷ ಜನರಿಗೆ ಕಣ್ಣಿನ ಸಮಸ್ಯೆ ಇದ್ದು, ಕಾಂಗ್ರೆಸ್ ಪಕ್ಷದ ಯುವಕರು ತಮ್ಮ ನೇತ್ರದಾನದ ಮೂಲಕ ದೃಷ್ಟಿ ಇಲ್ಲದವರಿಗೆ ದೃಷ್ಟಿ ನೀಡಲು ಸಹಕಾರಿಯಾಗಲಿದ್ದಾರೆ ಎಂದರು. ಇವತ್ತು ಹೊಸದಾದ ಯುವಕರ ತಂಡ ಕಾಂಗ್ರೆಸ್ ನಲ್ಲಿದೆ. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬಾವುಟ ರಾರಾಜಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಸರಳ ಕಾಂಚನ್ , ಐವನ್ ಡಿಸೋಜಾ, ದಿನಕರ್ ಹೇರೂರು
ಫಾದರ್ ವಿಲಿಯಂ ಮಾರ್ಟಿಸ್, ಗೀತಾ ವಾಗ್ಲೆ, ಜ್ಯೋತಿ ಹೆಬ್ಬಾರ್, ಬ್ರಹ್ಮವರ ಬ್ಲಾಕ್ ಪ್ರೆಸಿಡೆಂಟ್ ರಾಘವೇಂದ್ರ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಎಮ್ ಎ ಗಪುರ್, ರೆವೆರೆಂಡ್ ಫಾದರ್ ಸಂತೋಷ್ , ಹರಿಪ್ರಸಾದ್ ರೈ, ಬ್ರಹ್ಮವರ ಭುಜಂಗ ಶೆಟ್ಟಿ, ಪ್ರಸಾದ್ ನೇತ್ರಾಲಯ ಡಾಕ್ಟರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here