ದಸ್ಕತ್ ಸಿನಿಮಾದ ನಾಯಕ ನಟ ದೀಕ್ಷಿತ್ ಕೆ. ಅಂಡಿಂಜೆರವರಿಗೆ ಉತ್ತಮ ನಟ ಪ್ರಶಸ್ತಿ

0

ದಸ್ಕತ್ ಸಿನಿಮಾದ ನಾಯಕ ನಟ ದೀಕ್ಷಿತ್ ಕೆ. ಅಂಡಿಂಜೆರವರಿಗೆ ಉತ್ತಮ ನಟ ಪ್ರಶಸ್ತಿ

ರೋಹನ್ ಕಾರ್ಪರೇಷನ್ ಸಾರಥ್ಯದ ೫ನೇ ವರ್ಷದ ರೆಡ್ ಎಫ್. ಎಂ. ತುಳು ಪ್ರಶಸ್ತಿ ಸಿನಿಮಾ ಪ್ರಧಾನ ಕಾರ್ಯಕ್ರಮದಲ್ಲಿ ದಸ್ಕತ್ ಚಿತ್ರದ ನಾಯಕ ನಟ ದೀಕ್ಷಿತ್ ಕೆ. ಅಂಡಿಂಜೆ ಅವರಿಗೆ ಉತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಹಂಚಿಕೊಂಡಿರುವ ನಟ ದೀಕ್ಷಿತ್ ಕೆ. ಅವರು ಹಿರೋ ಆಗುವುದೇ ಕನಸು ಎಂದುಕೊಂಡಿದ್ದ ನನಗೆ ಉತ್ತಮ ನಾಯಕ ನಟ ಅವಾರ್ಡ್ ಪಡೆಯುವುದು ಎಂದರೆ ಹೇಳಲಾಗದ ಖುಷಿಯ ವಿಚಾರ. ಕೈಯಲ್ಲಿ ಬಾಚಣಿಗೆ ಹಿಡಿದು, ಕನ್ನಡಿ ಮುಂದೆ ಮಾತು ಕಲಿತ ನಿರೂಪಕ ನಾನು. ನನ್ನನ್ನು ಇಲ್ಲಿಯವರೆಗೆ ಬೆಳೆಸಿದ ನನ್ನ ತಂಡಕ್ಕೆ, ಶೇಖರ ಪಾತ್ರವನ್ನು ನನ್ನ ಮೂಲಕ ಜೀವಂತಿಸಲು ಕಾರಣರಾದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಇವರಿಗೆ ನನ್ನ ಕೃತಜ್ಞತೆಗಳು. ನನ್ನ ಶೇಖರ ಪಾತ್ರವನ್ನು ಮೊದಲನೆಯದಾಗಿ ಮನಸಾರೆ ಹೊಗಳಿ ಆನಂದಿಸಿದ ಸ್ನೇಹಿತ, ನಮ್ಮೊಂದಿಗೆ ನಿಂತು ಎಲ್ಲಾ ರೀತಿಯ ಸಿನೆಮಾ ಪ್ರಚಾರ ಕಾರ್ಯದಲ್ಲೂ ಕೈಜೋಡಿಸಿದಾತ, ನಮ್ಮ ಗೆಲುವಿನಲ್ಲಿ ತಾನು ಸಂತಸ ಪಡುತ್ತಿದ್ದ ನಮ್ಮ ರಾಕಿ, ರಾಕೇಶ್ ಪೂಜಾರಿ ಇವರಿಗೆ ಈ ಅವಾರ್ಡ್ ಅರ್ಪಿಸುತ್ತೇನೆ ಎಂದು ತಮ್ಮ ಸವಿನಯ ಕೃತಜ್ಞತೆಗಳನ್ನು ತಿಳಿಸಿದರು.

   

LEAVE A REPLY

Please enter your comment!
Please enter your name here