ಕಾರ್ಕಳ : ಕ್ರಿಯೇಟಿವ್ ಕಾಲೇಜಿನ 26 ವಿದ್ಯಾರ್ಥಿಗಳಿಗೆ ಐಐಎಸ್‌ಇಆರ್‌ನಲ್ಲಿ ಅರ್ಹತೆ

0

ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರವೇಶ ಪರೀಕ್ಷೆಯಾದ IISER Aptitude Test (IAT–2025) ಫಲಿತಾಂಶವನ್ನು ಜೂನ್ 24, 2025 ರಂದು ಪ್ರಕಟಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ವಿಜ್ಞಾನ ಕ್ಷೇತ್ರದ ಈ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ.

ಸಂಸ್ಥೆಯ ವಿದ್ಯಾರ್ಥಿ ಮೋಹಿತ್ ಎಂ ರಾಷ್ಟ್ರಮಟ್ಟದಲ್ಲಿ 4ನೇ ರ‍್ಯಾಂಕ್ (ಕೆಟಗರಿ ವಿಭಾಗದಲ್ಲಿ) ಜನರಲ್ ಮೆರಿಟ್ ನಲ್ಲಿ 1845ನೇ ರ್‍ಯಾಂಕ್ ಗಳಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ (IISER) ಪ್ರವೇಶ ಪರೀಕ್ಷೆಯಲ್ಲಿ ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಮೋಹಿತ್ ಅವರ ಸಾಧನೆ ಸಂತೋಷದ ಸಂಗತಿಯಾಗಿದೆ.
ಉಳಿದಂತೆ ಎಂ. ಮಂಜುನಾಥ್ 1457, ಚೇತನ್ ಗೌಡ ಎನ್.ಎಸ್ 1718 ( ಕೆಟಗರಿ ರ್‍ಯಾಂಕ್ 314 ), ತೇಜಸ್ ವಿ ನಾಯಕ್ 2423 ( ಕೆಟಗರಿ ರ್‍ಯಾಂಕ್ 460), ಶ್ರೀರಕ್ಷಾ 3127, ವೀರೇಂದ್ರ ಮುಟ್ಟೂರು 3960, ಹರ್ಷಿತ್ ರಾಜು ಎಚ್. ಎಂ 6961, ಎನ್. ಸುದರ್ಶನ್ ಕಾಮತ್ 7322, ತ್ರಿಶ್ಲಾ ಗಾಂಧಿ 9190 ( ಕೆಟಗರಿ ರ್‍ಯಾಂಕ್ 667), ಮೋನಿಕಾ ಕೆ.ಪಿ 9470 (ಕೆಟಗರಿ ರ್‍ಯಾಂಕ್ 30), ಸ್ನೇಹ ಬಸವರಾಜ್ ಬಿ. 10209 (ಕೆಟಗರಿ ರ್‍ಯಾಂಕ್ 2495), ಪ್ರೇರಣಾ ಶೆಣೈ 14939 (ಕೆಟಗರಿ ರ್‍ಯಾಂಕ್ 1177), ಭಗತ್. ಟಿ 16972, ಚಿನ್ಮಯ್ ಯು.ಎಂ 21508 ( ಕೆಟಗರಿ ರ‍್ಯಾಂಕ್ 5799), ವಿ.ಆರ್ ಗಣೇಶ್ 27491 ( ಕೆಟಗರಿ ರ್‍ಯಾಂಕ್ 7537), ಸ್ನೇಹ ಎಸ್. ಕೊಡೇರಿ 28172 ( ಕೆಟಗರಿ ರ್‍ಯಾಂಕ್ 1544), ಸಚಿತ್.ಎಂ 34538 ( ಕೆಟಗರಿ ರ್‍ಯಾಂಕ್ 2899), ಶಶಿ. ಕೆ 26339, ಸಿಂಚನ ಶೆಣೈ 36715 ( ಕೆಟಗರಿ ರ‍್ಯಾಂಕ್ 3061), ಅರ್ಚಿತ ಎ. ಎಸ್ 36869, ಪ್ರಕೃತಿ. ವಿ 46620, ವಿನೀತಾ ಪ್ರದೀಪ್ ಹೆಗ್ಡೆ 66668, ಶ್ರಾವಣಿ ಸಿ.ಎಂ 72841, ಹರ್ಷಿತ ಎಸ್. ಕೆ 90105, ಪ್ರಜ್ವಲ್ ಎಚ್. ಜಿ ರ‍್ಯಾಂಕ್ ಗಳಿಸಿ ಸಂಸ್ಥೆಯ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (IISER) ಭಾರತ ಸರ್ಕಾರದ ಮಾನ್ಯತೆ ಹೊಂದಿರುವ ಪ್ರಖ್ಯಾತ ವಿಜ್ಞಾನ ಸಂಸ್ಥೆಗಳಾಗಿದ್ದು, ಇಲ್ಲಿ ಪ್ರವೇಶ ಪಡೆಯುವುದು ಬಹಳ ಗೌರವದ ವಿಷಯ. IISER Aptitude Test (IAT) ಅನ್ನು ಪ್ರತಿವರ್ಷ ನಡೆಸಲಾಗುತ್ತಿದ್ದು, ವಿಜ್ಞಾನ ಅಧ್ಯಯನದಲ್ಲಿ ಉತ್ಸಾಹ ಹಾಗೂ ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಪರೀಕ್ಷೆ ಮಹತ್ವದ್ದಾಗಿದೆ.

ಕ್ರಿಯೇಟಿವ್ ನ ವಿದ್ಯಾರ್ಥಿ ಪೃಥ್ವಿ ಭಟ್ IISER ತಿರುವನಂತಪುರಂನಲ್ಲಿ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತೀ ಬಾರಿಯೂ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವುದು ಶಿಕ್ಷಣ ಸಂಸ್ಥೆ ಹೆಗ್ಗಳಿಕೆಯ ವಿಚಾರವಾಗಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

N SUDHARSHAN KAMATH

 

MOHITH M

 

CHETHAN GOWDA N S

 

HARSHITH RAJU H M

 

M MANJUNATH

 

SHREERAKSHA

 

MONIKA K P

 

TRISHLA GANDHI

 

TEJAS V NAYAK

 

VEERENDRA MUTTUR
   

LEAVE A REPLY

Please enter your comment!
Please enter your name here