ಕಾರ್ಕಳ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನಗೈದಿರುವ ಘಟನೆ ಜೂನ್ 13 ರಂದು ನಡೆದಿದೆ.
ದ್ವಿಚಕ್ರ ವಾಹನ ಮಾಲೀಕ ಗಣೇಶ್ ತಮ್ಮ KA20EK8722 ನಂಬರಿನ ಸ್ಕೂಟಿಯನ್ನು ಬಸ್ ನಿಲ್ದಾಣದ ಬಳಿ ನಿಲ್ಲಿಸಿ, ಅಂಗಡಿಗೆ ತೆರಳಿದ್ದರು. ಅರ್ಧ ಗಂಟೆ ಕಳೆದು ಹಿಂತಿರುಗುವಾಗ ವಾಹನ ಕಳವಾಗಿದೆ.
ಸದ್ಯ ಈ ಬಗ್ಗೆ ವಾಹನ ಮಾಲೀಕರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.