
ಕೆ. ಎಮ್. ಇ. ಎಸ್. ಪ. ಪೂ. ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಕಳದ ಸಹಾಯಕ ಸಬ್ ಇನ್ಸ್ಪೆಕ್ಟರ್ “ಇಂದಿನ ಕಾಲೇಜು ವಿದ್ಯಾರ್ಥಿಗಳು ಸಂಚಾರ ನಿಯಮ ಪಾಲಿಸದೆ ವೇಗವಾಗಿ ವಾಹನ ಚಲಾಯಿಸಿ ರಸ್ತೆ ಅಪಘಾತಕ್ಕೆ ಕಾರಣರಾಗುತ್ತಾರೆ. ಹೆಲ್ಮೆಟ್ ಹಾಕದೆ ಮೂರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ದ್ವಿಚಕ್ರದಲ್ಲಿ ಸವಾರಿಸಿ ಆಫಘಾತವನ್ನು ತಂದುಕೊಳ್ಳುತಾರೆ. 18 ವರ್ಷದೊಳಗೆ ವಾಹನಗಳನ್ನು ಚಲಾಯಿಸಲು ಯಾರಿಗೂ ಪರವಾನಿಗೆ ಸಿಗುವುದಿಲ್ಲ. ಒಂದು ವೇಳೆ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದರೆ ದಂಡವನ್ನು ಹೆತ್ತವರು ತೆರಬೇಕಾಗುತ್ತದೆ.” ಎಂದು ರಸ್ತೆ ಸುರಕ್ಷತೆ ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಫೋಕ್ಸೋ ಕಾಯಿದೆ, ಮಕ್ಕಳ ಹೆಲ್ತ್ ಲೈನ್, ಮಕ್ಕಳ ಗ್ರಾಮಸಭೆ, ಬಾಲ ಕಾರ್ಮಿಕರ ಬಗ್ಗೆ, ಬಾಲಾಪರಾಧಿ ಕಾಯಿದೆ, ಮಾದಕ ವಸ್ತುಗಳ ಸೇವನೆಯಿಂದ ಆಗುವ ಅನಾಹುತಗಳು, ಮೊಬೈಲ್ನಿಂದ ಆಗುವ ಆವಾಂತರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಏಕಮುಖ ಸಂಚಾರವಿರುವ ರಸ್ತೆಗೆ ವಿರುದ್ದವಾಗಿ ವಾಹನಗಳನ್ನು ಓಡಿಸುವವರಿಗೆ ಕಿವಿಮಾತನ್ನು ಹೇಳಿದರು. ಎ. ಎಸ್. ಐ. ಜಯಂತ್ ವಿದ್ಯಾರ್ಥಿಗಳು ವೇಗವಾಗಿ ವಾಹನ ಚಲಾಯಿಸುವಾಗ ಆಗುವ ಅನಾಹುತಗಳ ಬಗ್ಗೆ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ಮಾತನಾಡಿ ಆಧುನಿಕಗೊಳ್ಳುತಿರುವ ಈ ಪ್ರಪಂಚದಲ್ಲಿ ಮಾದಕವಸ್ತುಗಳನ್ನು ಸೇವಿಸುವುದರಿಂದ ವಿದ್ಯಾರ್ಥಿಗಳ ಅಭಿವೃದ್ಧಿ ಹೇಗೆ ಕುಂಟಿತವಾಗುವುದು ಮತ್ತು ಕುಡಿತ, ಸಿಗರೇಟು ಸೇದುವುದು, ಅಮಲು ಪದಾರ್ಥಗಳ ಸೇವನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹೇಗೆ ಕೆಡುವುದು ಎಂಬುವುದರ ಬಗ್ಗೆ ಮಾಹಿತಿ ನೀಡಿದರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮಾತನಾಡಿ ” 18 ವರ್ಷವಾಗದೆ, ಪರವಾನಿಗೆ ಇಲ್ಲದೆ ಮಕ್ಕಳು ದ್ವಿಚಕ್ರ ಓಡಿಸುವಂತಿಲ್ಲ, ಅಂತಹ ಕೆಲಸ ಮಾಡುವವರು ದಂಡ ತೆರ ಬೇಕಾಗುತ್ತದೆ. ” ಎಂದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಲೋಳಿಟ ಡಿ’ ಸಿಲ್ವ, ಬೀಟ್ ಪೊಲೀಸ್ ಎ. ಎಸ್. ಐ. ಶಿವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ಶಿಕ್ಷಕಿ ಸಂಗೀತಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.













