ವ್ಯಕ್ತಿಯೋರ್ವರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಟಾಸ್ಕ್ ಗೆ ಸೇರುವಂತೆ ಒಪ್ಪಿಸಿ 15 ಲಕ್ಷ ದೋಚಿರುವ ಘಟನೆ ನಡೆದಿದೆ.
ಮಂಗಳೂರಿನ ಸಸಿಹಿತ್ಲು ಮೂಲದ ಅಶ್ವಿತ್ ಎಂಬವರಿಗೆ ಮೀನಾ ಸಕ್ಪಾಲ್ ಎಂಬ ಹೆಸರಿನ +918433053932 ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ, ಟೆಲಿಗ್ರಾಂ ಆಪ್ ನಲ್ಲಿ ಎಸ್ -ಕಾಯಿನ್ ಇನ್ವೆಸ್ಟಮ್ನೆಟ್ ಎಂಬ ಟಾಸ್ಕ್ ಗೆ ಸೇರುವಂತೆ ತಿಳಿಸಿದ್ದಾರೆ. ಅದರಂತೆ ಅಶ್ವಿತ್ ಅವರು ಟಾಸ್ಕ್ ಗೆ ಸೇರಿದ್ದಾರೆ. ಹೆಚ್ಚು ಹಣ ಹಾಕಿದರೆ ಹೆಚ್ಚು ಕಮಿಷನ್ ಸಿಗುವುದು ಎಂದು ವಂಚಕರು ಅಶ್ವಿತ್ ಅವರನ್ನು ನಂಬಿಸಿ, ಯುಪಿಐ ಮೂಲಕ 15 ಲಕ್ಷ ಹಣವನ್ನು ಪಡೆದಿದ್ದಾರೆ. ಅದಲ್ಲದೆ ಇನ್ನೂ ಅಧಿಕ ಹಣಕ್ಕಾಗಿ ಬೇಡಿಕೆ ಇಟ್ಟಾಗ ವಂಚನೆಗೊಳಪಟ್ಟ ವ್ಯಕ್ತಿ ಹಣವಿಲ್ಲ, ಪಡೆದ ಹಣ ಹಿಂದಿರುಗಿಸುವಂತೆ ತಿಳಿಸಿದ್ದಾರೆ. ಅದಕ್ಕೆ ತೆರಿಗೆ ಕಟ್ಟುವಂತೆ ಹೇಳಿ ಹಣ ನೀಡದೆ ವಂಚಕರು ವಂಚಿಸಿದ್ದಾರೆ.
ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿ ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.