ಗ್ಯಾರಂಟಿ ಯೋಜನೆಗಳ ವಿರೋದಿ ಮನಸ್ಥಿಯ ಬೋಳ ಗ್ರಾಮ ಪಂಚಾಯತಿನ ವಿರುದ್ದ ಮತ್ತು ಬಿಜೆಪಿ ಬೆಂಬಲಿತ ಸದಸ್ಯನ ದುಂಡಾವರ್ತನೆಯ ವಿರುದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಿಂದ ವಿಚಲಿತರಾದ ಕಾರ್ಕಳ ಬಿಜೆಪಿಯ ಒಂದು ತಂಡ ಕಾಂಗ್ರೆಸ್ ವಿರುದ್ದ ಮತ್ತೆ ಸುಳ್ಳು ಆರೋಪಗಳನ್ನು ನಡೆಸಿ ಜನರ ಹಾದಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಬೋಳ ಕಾಂಗ್ರೆಸ್ ಮುಖಂಡರಾದ ಚಂದ್ರಹಾಸ ಪುತ್ರನ್ ಹೇಳಿದ್ದಾರೆ.
ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಗ್ರಾಮ ಸಭೆಯಲ್ಲಿ ಪ್ರಶ್ನೆ ಮಾಡಿದ ಗ್ರಾಮಸ್ಥರನ್ನು ಪದೇ ಪದೇ ಅಸಂವಿಧಾನಿಕ ಪದಗಳಿಂದ ಏಕವಚನದಲ್ಲಿ ಗದರಿಸುವ ದ್ವನಿಯಲ್ಲಿ ಮಾತನಾಡುತ್ತುದ್ದರು. ತಮ್ಮದೇ ಸದಸ್ಯನ ಈ ಉದ್ದಟತನದ ವರ್ತನೆಯನ್ನು ನೋಡಿಯು ಸುಮ್ಮನೆ ಕುಳಿತಿದ್ದ ಪಂಚಾಯತ್ ಅಧ್ಯಕ್ಷರಿಂದ ಕಾರ್ಕಳ ಕಾಂಗ್ರೆಸ್ ನವರು ನೈತಿಕ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ.
ಕಾರ್ಕಳ ಬಿಜೆಪಿಯ ಒಂದು ತಂಡದ ಕೈಗೊಂಬೆಯಾಗಿರುವ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಸಭೆಯಲ್ಲಿ ಅಸಹಾಯಕರಾಗಿದ್ದಾರೆ, ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ನಾಮಕಾವಸ್ಥೆ ಗೆ ಎಂಬುದಕ್ಕೆ ಸಾಕ್ಷಿ ಗ್ರಾಮ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರು ಮಾತನಾಡಲು ಎದ್ದು ನಿಂತಾಗ ಪದೇ ಪದೇ ಅವರ ಕೈಯಿಂದ ಮೈಕ್ ಕಿತ್ತು ಕೊಂಡಾಗಲೇ ಜನರಿಗೆ ಸತ್ಯ ಅರ್ಥವಾಗಿದೆ, ಪಂಚಾಯತ್ ಅಧ್ಯಕ್ಷರು ಕಾರ್ಕಳ ಬಿಜೆಪಿಯ ಒಂದು ತಂಡದ ಒತ್ತಡಕ್ಕೆ ಒಳಗಾಗಿ ಆನೆಯ ಕಾಲಿನೆಡೆಗೆ ಸಿಲುಕಿದ ಬಾಳೆ ಹಣ್ಣಿನಂತಾಗಿದ್ದಾರೆ, ಇವರ ಪರಿಸ್ಥಿತಿಯ ಬಗ್ಗೆ ನಮಗೆ ಅನುಕಂಪವಿದೆ. ಬೋಳ ಗ್ರಾಮ ಪಂಚಾಯತಿನಲ್ಲಿ ಪ್ರಜಾಪ್ರಭುತ್ವ ಮಾಯವಾಗಿದ್ದು ಇದು ಶಾಸಕರ ಬೇನಾಮಿ ಮುಖಂಡನ ಆಡಂಬೋಲವಾಗಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.
ಬೋಳ ಗ್ರಾಮದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂದು ನಿಮ್ಮ ಶಾಸಕರು ಮಾಡಿದ ಗುದ್ದಲಿ ಪೂಜೆ ಯನ್ನು ಲೆಕ್ಕ ಹಾಕಿದರೆ ನಿಮಗೆ ತಿಳಿಯುತ್ತದೆ, ಬಿಜೆಪಿಯ ಇಂತಾ ಹೇಳಿಕೆಗಳಿಂದ ಬೋಳದ ಪ್ರಜ್ಞಾವಂತ ನಾಗರಿಕರನ್ನು ಮೋಸಗೊಳಿಸಲಾಗದು ಎಂದರು.
ಬೋಳ ಗ್ರಾಮ ಪಂಚಾಯತಿನ ಆದಾಯದ ಮೂಲಗಳನ್ನು ಬಿಜೆಪಿ ಬೆಂಬಲಿತ ಪಂಚಾಯತ್ ಆಡಳಿತ ಸರಿಯಾಗಿ ಉಪಯೋಗಿಸುತ್ತಿಲ್ಲ, ಪಂಚಾಯತ್ ಕಚೇರಿ ಮುಂಬಾಗದಲ್ಲಿಯೇ ಇರುವ ಅಂಗಡಿ ಕೋಣೆಗಳನ್ನು ಸಾರ್ವಜನಿಕರಿಗೆ ಅನುಭೋಗಿಸಲು ಏಲಾಂ ಪ್ರಕ್ರಿಯೆ ನಡೆಸದೆ ರಾತ್ರಿ ಸಮಯದಲ್ಲಿ ಬಿಜೆಪಿ ಪಕ್ಷದವರು ಎಣ್ಣೆ ಪಾರ್ಟಿ, ಅಕ್ರಮ ಚಟುವಟಿಕೆಯ ತಾಣಗಳನ್ನಾಗಿಸಿರುವುದು ಖೇದಕರ.
ಬೋಳ ಗ್ರಾಮಕ್ಕೆ ಕಾಂಗ್ರೆಸ್ ನೀಡಿದ ಅನುದಾನದ ಲೆಕ್ಕ ಕೊಡಲು ನಾವು ಬಹಿರಂಗ ಚರ್ಚೆಗೆ ಸಿದ್ದರಿದ್ದೇವೆ, ಸ್ಥಳ ಮತ್ತು ಸಮಯವನ್ನು ನಿಗದಿ ಪಡಿಸಿ ಎಂದು ಬೋಳ ಕಾಂಗ್ರೆಸ್ ಮುಖಂಡ ಚಂದ್ರಹಾಸ ಪುತ್ರನ್ ಸವಾಲು ಎಸೆದಿದ್ದಾರೆ.