ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಉಸಿರಾಟದ ತೊಂದರೆ ಇರುವ ವ್ಯಕ್ತಿಗೆ ಆಮ್ಲಜನಕ ಸಾಂದ್ರೀಕರಣ ಯಂತ್ರವನ್ನು ಹಸ್ತಾಂತರಿಸಿ ಮಾತನಾಡಿದ ರೋಟರಿ ಸಂಸ್ಥೆಯ ಮುಖ್ಯ ಧ್ಯೇಯ ಸಮುದಾಯ ಸೇವೆಯೇ ಆಗಿರುತ್ತದೆ. ಸಮಾಜದ ಅಶಕ್ತರಿಗೆ ಸಹಾಯ ಮಾಡುವುದರಲ್ಲಿ ತೃಪ್ತಿ ಕಾಣುವ ಸಂಸ್ಥೆಯೇ ರೋಟರಿ ಎಂದು ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿಯ ಮೇಜರ್ ಡೋನರ್ ತುಕಾರಾಮ ನಾಯಕ್ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ರೊ.ಸುವರ್ಣ ನಾಯಕ್, ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ಭರತೇಶ್ ಆಧಿರಾಜ್, ಮೋಹನ್ ಶೆಣೈ ಎರ್ಮಾಳು, ಶೈಲೇಂದ್ರ ರಾವ್, ಇಕ್ಬಾಲ್ ಅಹಮದ್, ಶೇಖರ್ ಹೆಚ್. ಅರುಣ್ ಕುಮಾರ್ ಶೆಟ್ಟಿ, ಸುರೇಶ್ ನಾಯಕ್, ಬಾಲಕೃಷ್ಣ ದೇವಾಡಿಗ, ಶ್ರೀಶ ಭಟ್, ಗಣೇಶ್ ಸಾಲಿಯಾನ್, ಕಾರ್ಯದರ್ಶಿ ಚೇತನ್ ನಾಯಕ್, ಚೇತನ್ ಕುಮಾರ್,ವಸಂತ್ ಎಂ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.