
ಶಾಸಕ ಸುನಿಲ್ ಕುಮಾರ್ ಅವರು ಶುಕ್ರವಾರ 50ನೇ ಹುಟ್ಟುಹಬ್ಬದ ಪ್ರಯುಕ್ತ 50 ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.
ಪುಲ್ಕೇರಿಯಲ್ಲಿರುವ ಸುಂದರಿಯವರ ಅಶಕ್ತ ಬಡ ಕುಟುಂಬಕ್ಕೆ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಿದರು. ತಮ್ಮ ಪತ್ನಿ ಪ್ರಿಯಾಂಕಾ, ಪುರಸಭೆ ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಜೊತೆ ಮನೆಗೆ ಭೇಟಿ ನೀಡಿ ದೀಪ ಬೆಳಗಿಸಿದರು. ಇನ್ನೆರಡು ಬಡಕುಟುಂಬಗಳಿಗೆ ಹೆಬ್ರಿ ಮತ್ತು ಸಾಣೂರಿನಲ್ಲಿಯೂ ವ್ಯವಸ್ಥಿತವಾಗಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೀಘ್ರ ಹಸ್ತಾಂತರಿಸಲಾಗುವುದು ಎಂದರು.
ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡಕ್ಕೆ 35 ಸಾವಿರ ಮೌಲ್ಯದ ಸ್ವಚ್ಛತಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು. ಅರೋಗ್ಯ ಸಹಾಯಾರ್ಥವಾಗಿ ಹಣಕಾಸು ನೆರವು, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಸಹಿತ ವಿವಿಧ ಸೇವೆ ಕೈಗೊಂಡರು.
ಜಾಹೀರಾತು




































