
ಕಾರ್ಕಳ:ಶೆಡ್ ನಲ್ಲಿದ್ದ ಆಡಿಕೆಯೊಂದಿಗೆ ಸಿಸಿಟಿವಿಯನ್ನೂ ಕದ್ದೊಯ್ದ ಕಳ್ಳರು!
ಶೆಡ್ ನಲ್ಲಿದ್ದ ಅಡಿಕೆಯೊಂದಿಗೆ ಸಿಸಿಟಿವಿಯನ್ನೂ ಕಳ್ಳತನಗೈದ ಘಟನೆ ನಡೆದಿದೆ.
ಮುಲ್ಲಡ್ಕ ಗ್ರಾಮದ ರವೀಂದ್ರ ಎಂಬುವವರ ಅಡಿಕೆ ತೋಟದಲ್ಲಿರುವ ಶೆಡ್‌ನ ಬೀಗವನ್ನು ಮುರಿದು ಶೆಡ್‌ನಲ್ಲಿ ಇಟ್ಟಿದ್ದ 5 ಲಕ್ಷ ರೂಪಾಯಿ ಮೌಲ್ಯದ ಸುಲಿದ ಒಣ ಅಡಿಕೆ ಇರುವ 34 ಪ್ಲಾಸ್ಟಿಕ್ ಗೋಣಿಗಳನ್ನು ಹಾಗೂ ಶೆಡ್‌ಗೆ ಅಳವಡಿಸಿದ 6,000/- ರೂಪಾಯಿ ಮೌಲ್ಯದ ಸಿಸಿ ಕ್ಯಾಮರ ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












