ಕಾರ್ಕಳ ಮೊಬೈಲ್ ಯೂನಿಯನ್ ವತಿಯಿಂದ ಕ್ರೀಡಾಕೂಟ-ಟ್ರೋಫಿ ಅನಾವರಣ

0

ಕಾರ್ಕಳ ಮೊಬೈಲ್ ಯೂನಿಯನ್ ವತಿಯಿಂದ 21-12-2025 ರಂದು ಕ್ರೀಡಾಕೂಟ ಆಯೋಜಿಸಲಾಗಿದ್ದು ಇದರ ಅಂಗವಾಗಿ 19-12-2025 ರಂದು ಕಾರ್ಕಳದ ಸುಹಾಗ್ ಹೋಟೆಲಿನಲ್ಲಿ ಜರ್ಸಿ ಬಿಡುಗಡೆ ಹಾಗೂ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಸಲಾಯಿತು.

ಕ್ರಿಕೆಟ್ ಆಟದಲ್ಲಿ ಐದು ತಂಡಗಳು ಇರಲಿದ್ದು ತಂಡದ ಮಾಲಕರು, ನಾಯಕರು ಹಾಗೂ ಇತರ ಸದಸ್ಯರು ಸೇರಿ ತಮ್ಮ ತಂಡಗಳ ಜರ್ಸಿಯನ್ನು ಬಿಡುಗಡೆ ಗೊಳಿಸಿ ಟ್ರೋಫಿ ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಯೂನಿಯನಿನ ಅಧ್ಯಕ್ಷರಾದ ಅಜಿತ್, ಕಾರ್ಯದರ್ಶಿ ಅಬ್ದುಲ್ ಖಾದರ್, ಖಜಾಂಚಿ ರಾಜೇಶ್, ಹಾಗೂ ಕ್ರೀಡಾಕೂಟದ ಆಯೋಜನೆಯ ರೂವಾರಿಗಳಾದ ಅಬ್ದುಲ್ ಹಮೀದ್, ಶಿವರಾಜ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here