Wednesday, July 17, 2024

ಎಸ್.ವಿ.ಟಿ ಕಾಲೇಜು:ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ

Homeಕಾರ್ಕಳಎಸ್.ವಿ.ಟಿ ಕಾಲೇಜು:ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ

ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಆಶ್ರಯದಲ್ಲಿ ಸುವರ್ಣ ಸಂಭ್ರಮದ ಅಂಗವಾಗಿ ಜಾನಪದ ಕ್ರೀಡೆಗಳ ಅಳಿವು ಮತ್ತು ಹೊಳವು ಯುವ ಪೀಳಿಗೆಯ ಕೈಯಲ್ಲಿ ಆಟಿ ತಿಂಗಳ ವಿಶೇಷ ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ ನಡೆಯಿತು.

ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕರಾದ ಬಾಲಕೃಷ್ಣ ನಾಯಕ್ ಉದ್ಘಾಟಿಸಿ ಮಾತನಾಡುತ್ತಾ ಜಾನಪದ ಕ್ರೀಡೆಗಳ ಉಳಿವಿಗಾಗಿ ಹಮ್ಮಿಕೊಂಡಿರುವ ಇಂತಹ ಸ್ಪರ್ಧೆ ಅಪರೂಪದ ಸ್ಪರ್ಧೆಯಾಗಿದೆ. ಇಂತಹ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಪಡೆಯುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ವಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ ಪಿ ಶೆಣೈ ಮಾತನಾಡುತ್ತಾ ಅಳಿವಿನ ಅಂಚಿನಲ್ಲಿರುವ ಚೆನ್ನೆಮಣೆಯಂತಹ ಜಾನಪದ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಕಾಲೇಜಿನ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ ಇಂತಹ ಸ್ಪರ್ಧೆಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವುದು ಸಂತೋಷವನ್ನು ನೀಡಿದೆ. ಈ ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ ಎಲ್ಲರಿಗೂ ಸ್ಫೂರ್ತಿ, ಪ್ರೇರಣೆಯನ್ನು ನೀಡಲಿ ಎಂದರು.

ಸಂಪನ್ಮೂಲ ವ್ಯಕ್ತಿ ಚಂದ್ರನಾಥ ಬಜಗೋಳಿ ಮಾತನಾಡಿ ಚೆನ್ನೆಮಣೆ ಆಟ ಅದ್ಭುತವಾದ ಏಕಾಗ್ರತೆಯನ್ನು,ಸೃಜನಶೀಲ ವ್ಯಕ್ತಿತ್ವವನ್ನು, ಗಣಿತ ಶಾಸ್ತ್ರದ ಪರಿಜ್ಞಾನವನ್ನೂ, ವೈಚಾರಿಕ ಮಹತ್ವವನ್ನೂ, ಧಾರ್ಮಿಕ ಮನೋಭಾವವನ್ನು, ಜಾನಪದ ಕ್ರೀಡೆ ಮತ್ತು ಅದರ ಮಹತ್ವವನ್ನೂ, ಜಾನಪದ ಕಥೆಗಳನ್ನೂ, ಮಾತ್ರವಲ್ಲದೆ ಕೌಟುಂಬಿಕ ಸಂಬಂಧಗಳನ್ನೂ, ಹಳೆ ತಲೆಮಾರಿನಿಂದ ಇಂದಿನ ಯುವ ಪೀಳಿಗೆಗೆ ವರ್ಗಾಯಿಸುವುದು ಮಾತ್ರವಲ್ಲದೆ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಯೂ ಇದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀ ರಾಮದಾಸ ಪ್ರಭು, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್,ತೀರ್ಪುಗಾರರಾದ ಯಶೋಧರ ಶೆಟ್ಟಿ ಮಾಳ ಉಪಸ್ಥಿತರಿದ್ದರು.

ಚೆನ್ನೆಮಣೆ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಎಪ್ಪತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ ಹದಿನೆಂಟು ಚೆನ್ನೆಮಣೆ ಸ್ಪರ್ಧೆಗೆ ಬಳಸಿರುವುದು ವಿಶೇಷವಾಗಿತ್ತು.ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ಸುವೀಕ್ಷಾ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ಮನೀಕ್ಷಾ ವಂದಿಸಿದರು.ಸಂದರ್ಶಿನಿ ನಿರೂಪಿಸಿದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add