ಕಾರ್ಕಳ: ರೋಟರಿ ಕ್ಲಬ್ ವತಿಯಿಂದ ಆಮ್ಲಜನಕ ಸಾಂದ್ರೀಕರಣ ಘಟಕ ಕೊಡುಗೆ

0

 

ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ಕ್ರಿಸ್ತ ಸೇವಕಿ ಆಶ್ರಮ ಪರ್ಪಲೆ ಕಾರ್ಕಳ ಇಲ್ಲಿನ ಆಶ್ರಮದ ವಾಸಿಗಳಾದ ಹಿರಿಯ ನಾಗರಿಕರಿಗೆ ಆಮ್ಲಜನಕ ಸಾಂದ್ರೀಕರಣ ಘಟಕ ಹಸ್ತಾಂತರ ಕಾರ್ಯಕ್ರಮವು ಆಶ್ರಮದ ಸಭಾಂಗಣದಲ್ಲಿ ನಡೆಯಿತು.

ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ಭರತೇಶ್ ಆದಿರಾಜ್ ಮಾತನಾಡುತ್ತಾ ಈ ಆಶ್ರಮಕ್ಕೆ ಪ್ರತಿ ವರ್ಷ ನಮ್ಮ ಸಂಸ್ಥೆ ಭೇಟಿ ನೀಡಿ ಹಿರಿಯರಿಗೆ ಸಹಕಾರ ನೀಡುತ್ತಾ ಬಂದಿದೆ. ಅದರಂತೆ ಈ ಬಾರಿ ಅವರ ಉಪಯೋಗಕ್ಕಾಗಿ ರೂ.40,000 ವೆಚ್ಚದ ಆಮ್ಲಜನಕ ಸಾಂದ್ರೀಕರಣ ಘಟಕ ನೀಡುತ್ತಿದ್ದೇವೆ. ಇದರ ಸದುಪಯೋಗ ಅವರಿಗಾಗಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಸಮುದಾಯ ಸೇವೆಗಾಗಿ ಇರುವ ಕ್ಲಬ್ಬಿನ ಆದ್ಯ ಕರ್ತವ್ಯವೂ ಆಗಿದೆ ಎಂದರು.

ಕ್ಲಬ್ಬಿನ ಮಾಜಿ ಕಾರ್ಯದರ್ಶಿ ಗಣೇಶ್ ಸಾಲಿಯನ್ ಅವರು ಅವರ ತಾಯಿ ಜಯಂತಿ ಸಾಲಿಯಾನ್ ಅವರ ಹೆಸರಿನಲ್ಲಿ ಹಣ್ಣು ಹಂಪಲನ್ನು ಕೊಡುಗೆಯಾಗಿ ನೀಡಿದರು.

ಆಶ್ರಮದ ರೇವರೆಂಡ್ ಫಾದರ್ ಪ್ರಭುರಾಜ್ ಕ್ಲಬ್ಬಿನ ವತಿಯಿಂದ ಮಾಡುತ್ತಿರುವ ಈ ಸೇವಾ ಕಾರ್ಯವು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿಯ ಮಾಜಿ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ಮಾಜಿ ವಲಯ ಸೇನಾನಿ ಸುರೇಶ್ ನಾಯಕ್, ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ, ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ ವಿಜೇಂದ್ರ ಕುಮಾರ್, ಮೇಜರ್ ಡೋನರ್ ಸುವರ್ಣ ನಾಯಕ್, ಸದಸ್ಯರಾದ ಡಯಾಸ್ ಚೆರಿಯನ್ , ಬಾಲಕೃಷ್ಣ ದೇವಾಡಿಗ, ಹರ್ಷಿಣಿ ವಿಜಯರಾಜ್ ,ಮಮತಾ ಶೆಟ್ಟಿ, ಅಲೆನ್ ಡಿ ಸೋಜಾ ಉಪಸ್ಥಿತರಿದ್ದರು .ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.

   

LEAVE A REPLY

Please enter your comment!
Please enter your name here