
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ಯ ಅಭಿಮಾನ್ ಶೆಟ್ಟಿ 50ಮೀ ಬ್ಯಾಕ್‍ಸ್ಟ್ರೋಕ್ ಮತ್ತು 50ಮೀ ಬ್ರೆಸ್ಟ್‍ಸ್ಟ್ರೋಕ್‍ಲ್ಲಿ ಪ್ರಥಮ, 100ಮೀ ಬಟರ್ ಫ್ಲೈಲ್ಲಿ ದ್ವೀತೀಯ ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸೆಡ್ರಿಕ್ ಸೋನಿ 100ಮೀ ಬ್ಯಾಕ್‍ಸ್ಟ್ರೋಕ್‍ಲ್ಲಿ ದ್ವೀತೀಯ ಮತ್ತು 200ಮೀ ಬ್ರೆಸ್ಟ್‍ಸ್ಟ್ರೋಕ್‍ಲ್ಲಿ ತೃತೀಯ, ರೌನಕ್ ಮೋಹನ್ ಅಂಬೆರ್ಕರ್ 50ಮೀ ಫ್ರೀ ಸ್ಟೈಲ್‍ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 4×100ಮೀ ರಿಲೇಯಲ್ಲಿ ಅಭಿಮಾನ್ ಶೆಟ್ಟಿ, ಸೆಡ್ರಿಕ್ ಸೋನಿ, ರೌನಕ್ ಮೋಹನ್ ಅಂಬೆರ್ಕರ್, ಸುಘೋಶ್ ಭಾರಧ್ವಾಜ್ ಇವರು ತೃತೀಯ ಸ್ಥಾನಿಗಳಾಗಿದ್ದಾರೆ. ಇವರನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಕ್ಷಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.












