
ಕಾರ್ಕಳದ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ, ಕಾರ್ಕಳ ಶಾಲೆಯ ವಿದ್ಯಾರ್ಥಿ ಕೆ.ಸಿ. ಸಾಯಿ ನಿಹಾರ್ ಅವರು ಅಂತರಾಷ್ಟ್ರೀಯ ಮಟ್ಟದ ಟೆಕ್ವ್ಯಾಂಡೋ ಸ್ಪರ್ಧೆಗಳಲ್ಲಿ ಶ್ರೇಷ್ಠತೆ ಸಾಧಿಸಿದ್ದಾರೆ.
ಇತ್ತೀಚೆಗೆ ನಡೆದ “ಪ್ರಥಮ ಏಷಿಯನ್ ಓಪನ್ ಅಂತಾರಾಷ್ಟ್ರೀಯ ಟೆಕ್ವ್ಯಾಂಡೋ ಚಾಂಪಿಯನ್‌ಶಿಪ್” ನಲ್ಲಿ ಸ್ಪರ್ಧೆಯಲ್ಲಿ ಅಡಿಕಟ್ಟೆ 60 ಕೆ.ಜಿ ಮತ್ತು 17 ವರ್ಷದೊಳಗಿನ ವಿಭಾಗದಲ್ಲಿ ಸಾಯಿ ನಿಹಾರ್ ಅವರು ಶ್ರೇಷ್ಠ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಇದರೊಂದಿಗೆ, ಇವರು ಇದಕ್ಕೂ ಮುನ್ನ, 2022ರ ಡಿಸೆಂಬರ್ 28 ರಿಂದ 30ರ ವರೆಗೆ, ಬೆಂಗಳೂರು ಯಲಹಂಕದಲ್ಲಿ ನಡೆದ “ಮೂರನೇ ಅಂತಾರಾಷ್ಟ್ರೀಯ ಟೆಕ್ವ್ಯಾಂಡೋ ಚಾಂಪಿಯನ್‌ಶಿಪ್” ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಸಹ ಗೆದ್ದ ಇತಿಹಾಸವಿದೆ. ಈ ಸಾಧನೆಗಳು ಈತನ ಪರಿಶ್ರಮ, ಕಠಿಣ ಅಭ್ಯಾಸ ಹಾಗೂ ಉತ್ತಮ ತರಬೇತಿಯ ಸ್ಪಷ್ಟ ಸಂಕೇತವಾಗಿದೆ ಎಂದು ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಮತ್ತು ಸಹಪಾಠಿಗಳು ಸಾಯಿ ನಿಹಾರ್ ಅವರ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕಾರ್ಕಳ ಬೈಪಾಸ್ ರಸ್ತೆಯ, ಅವಿನಾಶ್ ಕಾಂಪೌಂಡ್ ನಿವಾಸಿ ಕೆ.ಸಿ. ಪಾಂಡು ಎನ್. ಮತ್ತು ದೀಪ ಅವರ ಮಗನಾಗಿರುವ ಸಾಯಿ ನಿಹಾರ್ ಟೆಕ್ವ್ಯಾಂಡೋ ಕೌಶಲ್ಯದಲ್ಲಿ ಈತನು ತರಬೇತುದಾರರಾದ ಸುರೇಶ್ ನಿಟ್ಟೆ ಅವರಿಂದ ಮಾರ್ಗದರ್ಶನ ಪಡೆದಿದ್ದಾನೆ.













