
ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಯುತ್ ರೆಡ್‍ಕ್ರಾಸ್‍ನ ಉದ್ಘಾಟನಾ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‍ಕ್ರಾಸ್‍ನ ಉಡುಪಿ ಜಿಲ್ಲೆ ಕಾರ್ಯದರ್ಶಿ ಡಾ| ಗಣನಾಥ ಶೆಟ್ಟಿ ಎಕ್ಕಾರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ರೆಡ್‍ಕ್ರಾಸ್ ಸಂಸ್ಥೆಯ ಹುಟ್ಟು ಬೆಳವಣಿಗೆಗೆ ಗುರಿ, ಮಹತ್ವದ ಬಗ್ಗೆ ತಿಳಿಸಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗೀತಾ. ಜಿ. ವಹಿಸಿದ್ದರು. ರೆಡ್‍ಕ್ರಾಸ್ ಯೋಜನಾಧಿಕಾರಿ ಕು.ಸೋನಾ ಇವರು ಸ್ವಾಗತಿಸಿದರು. ವೇದಿಕೆಯಲ್ಲಿ ರೆಡ್‍ಕ್ರಾಸ್ ನಾಯಕಿಯರಾದ ಅನನ್ಯ, ಲಾವಣ್ಯ ಉಪಸ್ಥಿತರಿದ್ದರು. ಲಾವಣ್ಯ, ತೃತೀಯ ಬಿ.ಎ ವಂದಿಸಿದರು. ಸ್ವಾತಿ, ದ್ವಿತೀಯ ಬಿ.ಎ ಕಾರ್ಯಕ್ರಮ ನಿರೂಪಿಸಿದರು.












