
ಕುಂದಾಪುರದಲ್ಲಿ ಗಿರೀಜಾ ಸರ್ಜಿಕಲ್ಸ್ & ಹೆಲ್ತ್‌ಕೇರ್ ಸಂಕೀರ್ಣದಲ್ಲಿ ನೂತನವಾಗಿ ಪ್ರಖ್ಯಾತ ಎಲುಬು ಮತ್ತು ಮೂಲೆ ತಜ್ಞರಾದ ರಂಜಿತ್ ಕುಮಾರ್ ರವರ ಆರ್.ಕೆ. ಆರ್ಥೋ & ಹ್ಯಾಂಡ್ ಕ್ಲಿನಿಕ್ ಸೇವೆಗೆ ಚಾಲನೆ ದೊರಕಿದೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೋಡಗಿ ಕ್ಲಿನಿಕ್ ಉದ್ಘಾಟಿಸಿ ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಯುಷ್ ಫೆಡರೇಷನ್ ಒಫ್ ಇಂಡಿಯಾ ಉಡುಪಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ, ಹೆಲ್ಪಿಂಗ್ ಹ್ಯಾಂಡ್ಸ್ ನ ಪ್ರದೀಪ್ ಕೋಟೇಶ್ವರ, ಮೂರ್ತೆದಾರರ ಕೋ ಆಪರೇಟಿವ್ ಸೊಸೈಟಿಯ ಸಿಇಓ ಜಗದೀಶ್ ಕೆಮ್ಮಣ್ಣು, ಸಮಾಜ ಸೇವಕ ಹುಸೈನ್ ಹೈಕಾಡಿ ಭಾಗವಹಿಸಿದರು.
ಕ್ಲಿನಿಕ್ ಪ್ರತಿದಿನ ಬೆಳಗ್ಗೆ 9.30 ರಿಂದ ಮದ್ಯಾಹ್ನ 1.30 ವರೆಗೆ ಸೇವೆಗೆ ಲಭ್ಯವಿರಲಿದೆ.
ಗಿರಿಜಾ ಸರ್ಜಿಕಲ್ಸ್ ನ ಮಾಲಕ ರವೀಂದ್ರ ಶೆಟ್ಟಿಯವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿ, ವಂದನೆಗಳನ್ನು ಅರ್ಪಿಸಿದರು.












