ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಶನಲ್ ಸ್ಕೂಲ್ ಬೆಳ್ಮಣ್‌ : ವಿಜ್ಞಾನ ಮಾದರಿಗಳ ತಯಾರಿಕೆ ಹಾಗೂ ಪ್ರದರ್ಶನ – “ಎಸ್ ಎಲ್ ಜೆ ಸೈಕ್ವೆಸ್ಟ್ 2025”

0

 

ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಶನಲ್ ಸ್ಕೂಲ್ ಬೆಳ್ಮಣ್‌ ನಲ್ಲಿ ಅ.11 ರಂದು ” ವಿಜ್ಞಾನ ಮಾದರಿಗಳ ತಯಾರಿಕೆ ಹಾಗೂ ಪ್ರದರ್ಶನ – ಎಸ್ ಎಲ್ ಜೆ ಸೈಕ್ವೆಸ್ಟ್ 2025″ ಕಾರ್ಯಕ್ರಮ ಆಯೋಜಿಸಲಾಯಿತು.

ಶಾಲೆಯ ಸುಮಾರು ಇನ್ನೂರು ವಿದ್ಯಾರ್ಥಿಗಳು ವಿಜ್ಞಾನದ ನಿಪುಣತೆ, ಅನ್ವೇಷಣೆ, ಹೊಸ ಹೊಸ ಕಲ್ಪನೆಗಳನ್ನು ಒಳಗೊಂಡ 60ಕ್ಕಿಂತಲೂ ಮೇಲ್ಪಟ್ಟು ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗೂ ತೀರ್ಪುಗಾರರಾಗಿ ಭಾಗವಹಿಸಿದ ನಿಟ್ಟೆ ಏನ್. ಎಂ. ಏ. ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರೊಫೆಸರ್ ಡಾ.ರಾಮ್ ಮರಾಠೆ ಹಾಗೂ ವ್ರೋಕ್ಲಾ ವಿಶ್ವವಿದ್ಯಾಲಯ ಪೋಲಾಂಡ್ ನ ಸಂಶೋಧನಾ ವಿಜ್ಞಾನಿ ಡಾ. ಸುನೈನಾ ಎಸ್. ಪಾಟೀಲ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಕ್ಕಳು ತಯಾರಿಸಿದ ಮಾದರಿಯನ್ನು ವಿಶ್ಲೇಷಿಸಿ ಮಕ್ಕಳ ಸೃಜನಶೀಲತೆ, ಸೃಜನಾತ್ಮಕ ಆಲೋಚನೆ, ಅನ್ವೇಷಣೆ, ಮಾತಿನಿ ಚಾಕಚಕ್ಯತೆ, ನಿಖರತೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಉಪಯುಕ್ತವಾದ ಇಂತಹ ಅತ್ಯಮೂಲ್ಯ ಕಾರ್ಯಕ್ರಮವನ್ನು ಆಯೋಜಿಸಿದ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದದವರಿಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಚೇರ್ ಪರ್ಸನ್ ಮೋಹಿನಿ ಪಿ. ಶೆಟ್ಟಿ, ಸಿ. ಇ. ಒ. ಮಯೂರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರು ಭುಜಂಗ ಪಿ. ಶೆಟ್ಟಿ ಅತಿಥಿಗಳ ಪರಿಚಯದೊಂದಿಗೆ ಭಾಗವಹಿಸಿದ ಎಲ್ಲರನ್ನೂ ಸ್ವಾಗತಿಸಿದರು.

ಶಾಲಾ ಹೆತ್ತವರು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ವಿವಿದ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮಾದರಿ ಪ್ರದರ್ಶನದ ವೀಕ್ಷಣೆಯಲ್ಲಿ ಭಾಗವಹಿಸಿದರು. ವಿಶೇಷವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆತ್ತವರಿಗೆ ಹಾಗೂ ಪೋಷಕರಿಗೆ ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು.

 

 

   

LEAVE A REPLY

Please enter your comment!
Please enter your name here