Home ಕಾರ್ಕಳ ಬೈಲೂರು: ಬಾರ್ ನಲ್ಲಿ ಗಲಾಟೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ; ಪ್ರಕರಣ ದಾಖಲು

ಬೈಲೂರು: ಬಾರ್ ನಲ್ಲಿ ಗಲಾಟೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ; ಪ್ರಕರಣ ದಾಖಲು

0

 

ಬಾರ್ ನಲ್ಲಿ ಗಣೇಶ್ ಪೂಜಾರಿ ಎಂಬಾತನು ಮದ್ಯ ಸೇವಿಸಿ ಬಳಿಕ ಪಕ್ಕದಲ್ಲಿ ಕುಳಿತ ಗ್ರಾಹಕರಿಗೆ ಅನಗತ್ಯ ತೊಂದರೆ ಕೊಡುತ್ತಿದ್ದನ್ನು ಪ್ರಶ್ನಿಸಿ, ತಡೆದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ ಘಟನೆ ಬೈಲೂರಿನಲ್ಲಿ ನಡೆದಿದೆ.

ಆರೋಪಿಯು ಬಾರ್ ನಿಂದ ಹೊರಬಂದು ತನ್ನ ಕಾರನ್ನು ವೇಗವಾಗಿ ಚಲಾಯಿಸಿ ಬಾರ್ ನ ಜಗಲಿ ಮೇಲೆ ಸಿಲುಕಿದ್ದ, ಬಳಿಕ ಮಾಲಕರನ್ನು ಬೆದರಿಸಿ ತೆರಳಿದ್ದಾನೆ.

ಈ ಬಗ್ಗೆ ಬಾರ್ ಮಾಲಕ ಚಂದ್ರಶೇಖರ ಮಾಡ ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು    

NO COMMENTS

LEAVE A REPLY

Please enter your comment!
Please enter your name here