
ಅತೀ ಹೆಚ್ಷು ಸಹಿ ಸಂಗ್ರಹ ಮಾಡಿದ ವಾಡ್೯ ಸಮಿತಿಗೆ ಪ್ರೋತ್ಸಾಹಕ ಬಹುಮಾನ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ದೇಶವ್ಯಾಪಿ ನಡೆಸುತ್ತಿರುವ “ಸ್ಟಾಪ್ ವೋಟ್ ಚೋರಿ” ಅಭಿಯಾನಕ್ಕೆ ಬೆಂಬಲವಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಸಹಿ ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಅವರು ಮಾತನಾಡಿ ಮತದಾನ ದೇಶದ ಪ್ರಜೆಗಳ ಹಕ್ಕು, ಆದರೆ ಮತಗಳ್ಳತನದ ಮೂಲಕ ಬಿಜೆಪಿ ಈ ದೇಶದ ಜನತೆಗೆ ಅತೀ ದೊಡ್ಡ ದ್ರೋಹವೆಸಗಿದೆ ಇದರ ವಿರುದ್ದ ನಾವೆಲ್ಲರೂ ಒಂದಾಗಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಮಾತನಾಡಿ, ಬಿಜೆಪಿ ಅಧಿಕಾರಕ್ಕಾಗಿ ಜನರ ಹಕ್ಕನ್ನು ಕಸಿಯುವ ದೇಶ ದ್ರೋಹದ ಕೆಲಸ ಮಾಡಿದೆ. ಇದರ ವಿರುದ್ದ ಪ್ರತಿಯೊಬ್ಬ ಪ್ರಜೆಯೂ ದ್ವನಿ ಎತ್ತಬೇಕು ಬೂತ್ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಎಲ್ಲರೂ ಸಹಕಾರ ನೀಡಬೇಕು ಅತೀ ಹೆಚ್ಚು ಸಹಿ ಸಂಗ್ರಹ ಮಾಡಿದ ವಾಡ್೯ ಸಮಿತಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅದ್ಯಕ್ಷ ಅಜಿತ್ ಹೆಗ್ಡೆ ಮಾಳ, ಕೆ.ಎಮ್.ಎಫ್. ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷರಾದ ಜಾರ್ಜ್ ಕ್ಯಾಸ್ಟಲಿನ್, ಕೆಡಿಪಿ ಸದಸ್ಯ ಕುಕ್ಕುಂದೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರುಕ್ಮಯ್ಯ ಶೆಟ್ಟಿಗಾರ್, ಮನೋಜ್, ಚರಿತ್ರಾ ಭಂಡಾರಿ, ಪ್ರತಿಮಾ ರಾಣೆ, ಶೋಭಾ ರಾಣೆ, ರಜನಿ, ಪರಿಶಿಷ್ಟ ಘಟಕದ ಅಧ್ಯಕ್ಷ ರಾಘವ ಕುಕ್ಕುಜೆ, ರಮೇಶ್ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.











