ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ

0

 

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಕಾರ್ಕಳ ನಗರ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಕಾರ್ಕಳ ಹಿರಿಯಂಗಡಿ ನಿವಾಸಿ, ಹಿರಿಯ ಕಾಂಗ್ರೆಸಿಗ ಶಂಕರ ದೇವಾಡಿಗ ಅವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಸಿದ್ದ ವಕೀಲರು ಹಿರಿಯ ಕಾಂಗ್ರೆಸಿಗರಾದ ಶೇಖರ ಮಡಿವಾಳ ಅವರು ಮಾತನಾಡಿ ಶತ್ರುರಾಷ್ಟ್ರ ಪಾಕಿಸ್ತಾನದ 90 ಸಾವಿರ ಸೈನಿಕರ ಶರಣಾಗತಿ ಮಾಡಿಸಿದ ಧೀರ ಪ್ರಧಾನಿ ಇಂದಿರಾ ಗಾಂಧಿಯವರ ದಿಟ್ಟತನವನ್ನು ಸ್ಮರಿಸುತ್ತಾ ಇಂದಿನ ದಿನಗಳಲ್ಲಿ ಆಡಳಿತಗಾರರು ಯಾವುದೋ ದೇಶದ ಅಧ್ಯಕ್ಷನ ಸೂಚನೆಗೆ ಯುದ್ದ ನಿಲ್ಲಿಸುವುದು ದೇಶದ ದುರಂತ ಎಂದರು. ತುರ್ತು ಪರಿಸ್ಥಿತಿಯನ್ನು ವಿರೋದಿಸುವವರು ಬಡವರ ವಿರೋದಿಗಳು, ತುರ್ತುಪರಿಸ್ಥಿತಿಯ ಬಗ್ಗೆ ದೇಶದ ಜನರಿಗೆ ನಿಜವಾಗಿಯೂ ಆಕ್ರೋಶವಿದ್ದರೆ ತುರ್ತುಪರಿಸ್ಥಿತಿ 18 ತಿಂಗಳ ನಂತರ ಮತ್ತೆ ಇಂದಿರಾ ಗಾಂಧಿಯವರನ್ನು ಈ ದೇಶದ ಜನ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರ ಪಾಲ್ ನಕ್ರೆ ಅವರು ಮಾತನಾಡಿ ದೇಶದ ಭೂ ಸಂಪತ್ತಿನ ಬಹುಪಾಲು ಭಾಗ ದೇಶದ 2‌ ಶೇಕಡಾ ಜನರಲ್ಲಿದ್ದು ಉಳಿದ‌ 98 ಶೇಕಡಾ ಜನರು ಭೂರಹಿತರಾಗಿದ್ದರು, ಭೂ ಸಂಪತ್ತಿನ ಸಮಾನ ಹಂಚಿಕೆಗಾಗಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿ ಜನ ಸಾಮಾನ್ಯರು ಸ್ವಾಭಿಮಾನದ ಜೀವನ ಸಾಗಿಸುವಂತೆ ಮಾಡಿದರು ಎಂದರು. ಇಂದಿರಾಗಾಂಧಿ ಅವರು ತನ್ನ 66 ವರ್ಷದಲ್ಲಿ ವಿರೋದಿಗಳ ಗುಂಡಿಗೆ ಬಲಿಯಾಗಿದ್ದು, ದೇಶದ ದುರ್ದೈವ, ಅವರು ಇನ್ನೂ ಸ್ವಲ್ಪ ವರ್ಷಗಳ ಕಾಲ ಬದುಕಿದ್ದರೆ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯಾಗುತ್ತಿತ್ತು ಎಂದರು.

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದ ರಾವ್ ಮಾತನಾಡಿ ಇಂದಿರಾ ಗಾಂಧಿಯವರು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ದಿಸಿ ನಮ್ಮ ಸಂಸದರಾಗಿದ್ದರು ಎನ್ನುವುದೇ ಕಾಂಗ್ರೆಸಿಗರಾದ ನಮಗೆ ಹೆಮ್ಮೆಯ ವಿಚಾರ, ಅವರ ಸ್ಮರಣೆಯಲ್ಲಿ ಕಾರ್ಕಳದಲ್ಲಿ ಭವ್ಯವಾದ ಕಾಂಗ್ರೆಸ್ ಕಚೇರಿ ಇಂಧಿರಾ ಭವನ ನಿರ್ಮಾಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಯಕರು ಹಾಗೂ ಕಾರ್ಯಕರ್ತರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಗೌರವನಮನ ಸಲ್ಲಿಸಿದರು.

ನಗರ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ರೀನಾ ಡಿಸೋಜ ಅವರು ಇಂದಿರಾ ಗಾಂಧಿಯವರ ಆಡಳಿತ ಶ್ರೇಷ್ಟತೆ, ಜೀವನ ಮೌಲ್ಯಗಳ ಸಂಕ್ಷಿಪ್ತ ಮಾಹಿತಿಯನ್ನು ವಾಚಿಸಿ ಅತಿಥಿಗಳನ್ನು ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಉಪಾದ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ಜಿಲ್ಲಾ ಕಾಂಗ್ರೆಸಿನ ಸಿರಿಯಣ್ಣ ಶೆಟ್ಟಿ, ಮಾಲಿನಿ ರೈ, ಮಹಿಳಾ ಒಕ್ಕೂಟದ ಅದ್ಯಕ್ಷೆ ಶ್ರೀಮತಿ ಯಶೋದಾ ಶೆಟ್ಟಿ, ಸೇವಾದಳದ ಅಬ್ದುಲ್ ಸಾಣೂರು, ಭೂನ್ಯಾಯ ಮಂಡಳಿಯ ಸುನೀಲ್ ಭಂಡಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುನಿತಾ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷರಾದ ಪ್ರತಿಮಾ ರಾಣೆ, ರೆಹಮತ್, ಸದಸ್ಯರಾದ ಪ್ರಭಾ, ವಿನ್ನಿ ಬೋಲ್ಡ್, ಶೋಭಾ ಪ್ರಸಾದ್, ಯುವ ಕಾಂಗ್ರೆಸಿನ ಸೂರಜ್ ಶೆಟ್ಟಿ, ಮಂಜುನಾಥ ಜೋಗಿ, ಮಲಿಕ್ ಅತ್ತೂರು, ಯೋಗೀಶ್ ಇನ್ನಾ ಹಾಗೂ ಗ್ಯಾರಂಟಿ ಸಮಿತಿಯ ‌ಸದಸ್ಯರು, ಚುನಾಯಿತ ಜನಪ್ರತಿನಿದಿಗಳು, ನಾಮನಿರ್ದೇಶಿತ ಸದಸ್ಯರು, ವಿವಿಧ ಘಟಕಗಳ ಅದ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷರುಗಳು ಮೊದಲಾದವರು ಉಪಸ್ಥಿತರಿದ್ದರು.

ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ ಹಿರಿಯ ಕಾಂಗ್ರೆಸಿಗ ಪ್ರಭಾಕರ ಬಂಗೇರ ಧನ್ಯವಾದ ಸಮರ್ಪಣೆಗೈದರು.

   

LEAVE A REPLY

Please enter your comment!
Please enter your name here