Home ಕಾರ್ಕಳ ಬಾಯಿಚಪಲಕ್ಕಾಗಿ ಪತ್ರಿಕಾ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿ-ರವೀಂದ್ರ ಮೊಯ್ಲಿ

ಬಾಯಿಚಪಲಕ್ಕಾಗಿ ಪತ್ರಿಕಾ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿ-ರವೀಂದ್ರ ಮೊಯ್ಲಿ

0

ಕಾರ್ಕಳದ ಅಭಿವೃದ್ಧಿಗೆ ಅಡ್ದಗಾಲು ಹಾಕಬೇಡಿ

 

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಶಾಸಕರುಗಳು ಚುನಾಯಿತರಾಗಿದ್ದು, ಅವರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಪದವಿ ಅಲಂಕರಿಸಿದವರಿದ್ದಾಗ್ಯೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಕಂಡದ್ದು 2004 ರಲ್ಲಿ ವಿ ಸುನೀಲ್ ಕುಮಾರ್ ರವರು ಶಾಸಕರಾಗಿ ಆಯ್ಕೆಯಾದ ತರುವಾಯ ಎನ್ನುವುದು ನಿರ್ವಿವಾದ. ಕಾರ್ಕಳ ಕ್ಷೇತ್ರವನ್ನು ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವ್ರದ್ದಿಯತ್ತ ಕೊಂಡಯ್ಯಬೇಕೆಂಬ ನಿಟ್ಟಿನಲ್ಲಿ ಹಾಗೂ ಕಾರ್ಕಾಳದಲ್ಲಿ ಹತ್ತು ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮವಾದ ಶಿಕ್ಷಣ ನೀಡುತ್ತಿದ್ದರೂ ಆರ್ಥಿಕವಾಗಿ, ಜನಸಾಮಾನ್ಯರಿಗಾಗಿ ಅದರಲ್ಲಿಯು ಮುಖ್ಯವಾಗಿ ಮಹಿಳೆಯರನ್ನು ಶೈಕ್ಷಣಿಕವಾಗಿ ಮುನ್ನಲೆಗೆ ತರಬೇಕೆನ್ನುವ ಉದ್ದೇಶದಿಂದ, ಕಾರ್ಕಳವನ್ನು ಶೈಕ್ಷಣಿಕ ಹಬ್ ಆಗಿ ಮಾಡಬೇಕೆನ್ನುವ ಮಹದಾಸೆಯಿಂದ ಈ ಹಿಂದಿನ ಬಿಜೆಪಿ ನೇತ್ರತ್ವದ ಸರಕಾರ ಇದ್ದಾಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 40 ಸೀಟುಗಳ ಬಿ.ಎಸ್ಸಿ ನರ್ಸಿಂಗ್ ಕಾಲೇಜನ್ನು ಆ ನೂತನವಾಗಿ ಪ್ರಾರಂಭಿಸಲಾಗಿರುತ್ತದೆ. ಸದರಿ ಕಾಲೇಜು ವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸರಕಾರಿ ನರ್ಸಿಂಗ್ ಕಾಲೇಜು ಆಗಿರುತ್ತದೆ. ಆ ನಂತರ ಸರಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೂಲಭೂತ ಸೌಕರ್ಯಗಳಿಗೆ ಅನುದಾನ ಬರಿಸುವಂತೆ ಆದೇಶ ಹೊರಡಿಸಿರುತ್ತಾರೆ, ಆದರೆ ಕಾಂಗ್ರೆಸ್ ನೇತ್ರತ್ವದ ಸರಕಾರ ಅಧಿಕಾರಕ್ಕೆ ತಂದ ತರುವಾಯಿ ಈ ಎಲ್ಲ ಅಭಿವೃಧಿ ಯೋಜನೆಗಳು ಕುಂಠಿತವಾಗಿದ್ದು ಅದರಲ್ಲಿಯು ಶೈಕ್ಷಣಿಕ ಕ್ಷೇತ್ರಕ್ಕೂ ಅನುದಾನ ಸ್ಥಗಿತಗೊಳಿಸಿರುವುದು ವಿಪರ್ಯಾಸಕರ. ಈಗಿನ ಸರಕಾರವು ಈ ಹಿಂದಿನ ಸರಕಾರದ ಯೋಜನೆಗಳಿಗೆ ನೀಡಲಾಗುತ್ತಿರುವ ಅನುದಾನಗಳನ್ನು ತಡೆ ಹಿಡಿದಿದುದರ ಪರಿಣಾಮ ವಿಧ್ಯಾರ್ಥಿಗಳು ಅನುಭವಿಸುವಂತಾಗಿದೆ.

ಪ್ರಸ್ತುತ ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಮೂರು ಬ್ಯಾಚಿನಲ್ಲಿ ನೂರಕ್ಕೂ ಅಧಿಕ ವಿಧ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಈಗಾಗಲೇ ನರ್ಸಿಂಗ್ ಕಾಲೇಜು ನಿರ್ಮಾಣದ ಉದ್ದೇಶಕ್ಕೆ ಕಾರ್ಕಾಳ ಕಸಬಾ ಗ್ರಾಮದ 2 ಎಕ್ರೆ ಜಮೀನನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಲಾಗಿದೆ. ಪ್ರಸ್ತುತ ಕಾಂಗ್ರೆಸ್ ನೇತ್ರತ್ವದ ಸರಕಾರ ರಾಜ್ಯದಲ್ಲಿರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ವಿಧ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕಾರ್ಕಳದ ಶಾಸಕರು ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರಕಾರದ ಮಾನ್ಯ ವೈದ್ಯಕೀಯ ಸಚಿವರಾದ ಡಾ. ಶರಣ ಪ್ರಕಾಶ್ ಪಾಟಿಲ್, ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಸೌಧ ಬೆಂಗಳುರು ಇವರಿಗೆ ಹಲವಾರು ಬಾರಿ ಲಿಖಿತ ಪತ್ರ ಮುಖೇನ ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸಿಕೊಂಡು ಬರುತ್ತಿದ್ದಾಗಿಯೂ ಸರಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದಾಗಿಯೂ ಮಾನ್ಯ ಶಾಸಕರ ಸತತ ಪ್ರಯತ್ನದಿಂದಾಗಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಕಚೇರಿಯಿಂದ ಟಿಪ್ಪಣಿ ಪತ್ರ ಸರಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ರವಾನೆಯಾಗಿರುತ್ತದೆ. ಕಾರ್ಕಾಳ ನರ್ಸಿಂಗ್ ಕಾಲೇಜಿಗೆ ಅಗತ್ಯವಿರುವ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಬಗ್ಗೆಯು ಕೂಡ ಸಂಬಂಧಪಟ್ಟ ಸಚಿವರಿಗೆ ಮತ್ತು ಇಲಖೆಗೆ ಹಲವಾರು ಬಾರಿ ಪತ್ರ ಬರೆದು ಕೇಳಿಕೊಂಡಗಿಯು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಿಲ್ಲ. ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಭೋದನೆ ಮಾದಲು ಸುಮಾರು ಎಂಟು ಜನ ಶಿಕ್ಷಕರು ತಯಾರಿದ್ಯಾಗಿಯೂ ಅವರ ಹೆಸರನ್ನು ಸಂಬಧಪಟ್ಟವರಿಗೆ ನೀಡಿದ್ದರೂ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಈಗಾಗಲೇ ಶಾಸಕರ ಮುತುವರ್ಜಿಯಿಂದ ಕೆಲವು ಖಾಸಗಿ ಕಂಪೆನಿಗಳು ತಮ್ಮ ಸಿಎಸ್‌ಆರ್ ಫಂಡಿನ ಮೂಲಕ ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಿ ಸಹಕರಿಸಿರುತ್ತಾರೆ. ಮುಖ್ಯವಾಗಿ ಬೋಳಾಸ್ ಕಂಪೆನಿ ಸುಮಾರು 25೦೦೦೦/-, ಎಮ್ ಆರ್ ಪಿ ಎಲ್ ಸಂಸ್ಥೆ 8.13 ಲಕ್ಷ, ರೋಟರಿ ಸಂಸ್ಥೆ ಕಾರ್ಕಳ 62000 ಮತ್ತು ಆರೋಗ್ಯ ಇಲಾಖೆ 300000 ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲಾಗಿದೆ. ಸರಕಾರವು ಭೋದಕ ಮತ್ತು ಭೋದಕೇತರ ಸಿಬ್ಬಂದಿಯನ್ನು ನೇಮಕ ಮಾಡಿದರೆ ಹಾಗೂ ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಖಾಸಗಿ ಸಹಯೋಗದೊಂದಿಗೆ ಕಾಲೇಜಿನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆಯು ಕೂಡ ಶಾಸಕರು ಮುಂದಾಗಿದ್ದಾಗಿದ್ದರೂ ಕಾರ್ಕಳ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷರು ಮಾಹಿತಿ ಕೊರತೆಯಿಂದಾಗಿಯೋ ಅಥವಾ ಪ್ರಚಾರದ ತೆವಳಿನಿಂದಾಗಿಯೋ ಕಾರ್ಕಳದ ಶಾಸಕರನ್ನು ದೋಷಿಸುವ ಪ್ರೌವೃತ್ತಿಯಿಂದ ಪ್ರತ್ರಿಕ ಹೇಳಿಕೆ ನೀಡಿರುವುದು ಸಮಂಜಸವಲ್ಲ.

ಇನ್ನಾದರೂ ಕಾರ್ಕಳ ಕಾಂಗ್ರೆಸ್ ನಾಯಕರುಗಳು ಕಾರ್ಕಳದ ಅಭಿವೃದ್ಧಿಗೆ ಅಡ್ದಗಾಲು ಹಾಕದೇ ಅದರಲ್ಲಿಯು ಮುಖ್ಯವಾಗಿ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಕಾರ್ಕಳದ ನರ್ಸಿಂಗ್ ಕಾಲೇಜಿಗೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ತಮ್ಮ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಕಾರ್ಕಳದ ಅಭಿವೃದ್ಧಿಗೆ ಸಹಕಾರ ನೀಡಬೇಕ್ಕೆ ವಿನಹ ಬಾಯಿಚಪಲಕ್ಕಾಗಿ ಪತ್ರಿಕ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿ ಎಂದು ರವೀಂದ್ರ ಮೊಯ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು    

NO COMMENTS

LEAVE A REPLY

Please enter your comment!
Please enter your name here