
ಸ್ವರ್ಣೋದ್ಯಮಿ ಪೆರ್ಡೂರು ದೀಪಾ ಜುವೆಲ್ಲೆರ್ಸ್ ಮಾಲಕ ಕೆ. ಭಾಸ್ಕರ ಆಚಾರ್ಯ ಅವರು ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.
ಪೆರ್ಡೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದರು. ಪೆರ್ಡೂರು ವಿಶ್ವಕರ್ಮ ಸಮಾಜ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದರು. ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಭಾಸ್ಕರ ಆಚಾರ್ಯ ಮುಖ್ಯಶಿಕ್ಷಕರಾಗಿ ನಿವೃತ್ತರಾಗಿದ್ದರು. ನೂರಾರು ಮಂದಿ ಅಂತಿಮ ದರ್ಶನ ಪಡೆದರು.
ಮೃತರಿಗೆ ಪತ್ನಿ ಶಾರದಾ, ಪುತ್ರ ಕಿರಣ್ ಆಚಾರ್ಯ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಜಾಹೀರಾತು




