
ಜಿಲ್ಲಾ ಉಪಾಧ್ಯಕ್ಷರಾಗಿ ದತ್ತಾತ್ರೆಯ ದೇವಾಡಿಗ ಆಯ್ಕೆ
ಲಯನ್ಸ್ ಕ್ಲಬ್ ಸೆಂಟ್ರಲ್ ನ ಕಾರ್ಯದರ್ಶಿಯಾಗಿ ಸಾಂಸ್ಕೃತಿಕ, ಕ್ರೀಡೆ ಹಾಗೂ ಹಲವಾರು ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು, ತಮ್ಮ ನಗುಮುಗದ ದತ್ತಣ್ಣ ಎಂದೇ ಖ್ಯಾತಿಯಲ್ಲಿರುವ ದತ್ತಾತ್ರೇಯ ದೇವಾಡಿಗ ಹಿರಿಯಂಗಡಿ ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ(ರಿ) ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದತ್ತಾತ್ರೇಯ ದೇವಾಡಿಗ ಹಿರಿಯಂಗಡಿ ಅವರು ಈ ಹಿಂದೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ಕಾರ್ಕಳ ವಲಯ ನಿಕಟಪೂರ್ವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಹೊಸ ಸಂಜೆ ಪ್ರತ್ರಿಕೆಯಲ್ಲಿ, 28 ವರ್ಷಗಳಿಂದ ಜನಬಿಂಬ ಪತ್ರಿಕೆಯ ಛಾಯಾಗ್ರಾಹಕರಾಗಿ ಹಲವು ಸಂಘ ಸಂಸ್ಥೆಗಳಲ್ಲಿ, ವಿವಿದ ಹುದ್ದೆಗಳನ್ನು ನಿರ್ವಹಿಸಿ ಅನುಭವವಿರುವ ಇವರು ಕೇವಲ ಫೋಟೋಗ್ರಾಫಿ ಮಾತ್ರವಲ್ಲದೆ, ನಾಟಕ, ಯಕ್ಷಗಾನ, ಕರಾಟೆಯಲ್ಲಿ ಉನ್ನತ ಪದವಿ ಕಪ್ಪುಪಟ್ಟಿ 4 ನೇ ಪದವಿ, ಉತ್ತಮ ಕರಾಟೆ ಶಿಕ್ಷಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.












