
ಅಮೆರಿಕದ ಬೆಳವಣಿಗೆಯಲ್ಲಿ ಭಾರತೀಯರ ಪ್ರತಿಭೆ ಪ್ರಮುಖ ಪಾತ್ರ ವಹಿಸಿದೆ ಎಂದು ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಒಪ್ಪಿಕೊಂಡಿದ್ದಾರೆ.
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಅಮೆರಿಕಕ್ಕೆ ಬಂದಿರುವ ಪ್ರತಿಭಾನ್ವಿತ ಭಾರತೀಯರಿಂದ ಅಮೆರಿಕವು ಅಪಾರ ಪ್ರಯೋಜನ ಪಡೆದಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಅಕ್ರಮ ವಲಸಿಗರ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಕ್ರಮ ಮತ್ತು H-1B ವೀಸಾ ನೀತಿಯಲ್ಲಿನ ಇತ್ತೀಚಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಮಸ್ಕ್ ಅವರಿಂದ ಈ ಹೇಳಿಕೆಗಳು ಬಂದಿವೆ.
H-1B ವೀಸಾ ಪಡೆದು ಕೆಲವು ದುರುಪಯೋಗಗಳು ನಡೆದಿವೆ. ಕೆಲವು ಹೊರಗುತ್ತಿಗೆ ಕಂಪನಿಗಳು ವ್ಯವಸ್ಥೆಯನ್ನು ಒಂದು ರೀತಿಯಲ್ಲಿ ಮೋಸಗೊಳಿಸಿವೆ ಎಂದು ಮಸ್ಕ್ ಹೇಳಿದರೂ ವೀಸಾವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು ವ್ಯವಸ್ಥೆಯಲ್ಲಿ ಆಟವಾಡುವುದನ್ನು ನಿಲ್ಲಿಸುವುದು ಅದಕ್ಕಿರುವ ಪರಿಹಾರ ಎಂದರು
ಜಾಹೀರಾತು




