ಕಾರ್ಕಳ:ಕಾರು-ಬೈಕ್ ನಡುವೆ ಡಿಕ್ಕಿ
ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ಗೋವಿಂದೂರಿನ ಅನಂತಮತಿ ಶಾಲೆಯ ಬಳಿ ನಡೆದಿದೆ.
ಗೋವಿಂದೂರು ನಿವಾಸಿ ಸಂತೋಷ ಗಾಯಗೊಂಡವರು.ಸಂತೋಷ್ ರವರು ಆ.27ರಂದು ಯರ್ಲಪಾಡಿ ಕಡೆಯಿಂದ ಬೈಲೂರು ಕಡೆಗೆ ಬೈಕ್ ನಲ್ಲಿ ಹೊರಟಿದ್ದ ಸಂದರ್ಭ ಅನಂತಮತಿ ಶಾಲೆಯ ಬಳಿ ಕಾರು ಚಾಲಕನು ಯಾವುದೆ ಸೂಚನೆ ಕೊಡದೆ ಕಾರನ್ನು ಬಲಕ್ಕೆ ತಿರುಗಿಸಿದ್ದು ಬೈಕ್ ಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಬೈಕ್ ಸವಾರ ಸಂತೋಷ್ ಗಂಭೀರ ಗಾಯಗೊಂಡಿದ್ದು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.