ಮಗಳ ಮೃತದೇಹ ಕಂಡು ತಾಯಿಯೂ ಆತ್ಮಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಮರ್ಣೆ ಗ್ರಾಮದ ಕೈಕಂಬ ಬಸದಿ ಎಂಬಲ್ಲಿ ನಡೆದಿದೆ.
ಮೃತರನ್ನು ಕುರುಂಬಿಲು ಹಾಗು ಅವರ ಮಗಳು ವಸಂತಿ ಎಂದು ಗುರ್ತಿಸಲಾಗಿದ್ದು, ವಸಂತಿ ಅವರು ಕಳೆದ 6 ತಿಂಗಳಿನಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆಯಲ್ಲಿದ್ದು, ಕಳೆದ ಒಂದು ವಾರದಿಂದ ಅರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟು ಹೋಗಿತ್ತು. ಜ. 17 ರಂದು ಕುರುಂಬಿಲು ಅವರು ಎಂದಿನಂತೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ದಾರೆ. ಮರುದಿನ ಬೆಳಗ್ಗೆ ಸಂಬಂಧಿಯೊಬ್ಬರು ಗಮನಿಸಿದಾಗ ತಾಯಿ ಮನೆ ಪಕ್ಕಾಸಿಗೆ ನೇಣು ಹಾಕಿದ ಸ್ಥಿತಿಯಲ್ಲಿ ಹಾಗೂ ಮಗಳು ಮಲಗಿದಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಮಗಳ ಮೃತದೇಹ ಕಂಡು ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕುರುಂಬಿಲು ಅವರ ಸಹೋದರಿ ನೀಡಿದ ದೂರಿನ ಅನ್ವಯ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















