ಜ. 18 ರಂದು ಬೆಳಗ್ಗೆ ರೋಟರಿ ಕ್ಲಬ್ ಕಾರ್ಕಳ ಮತ್ತು ವಿಶ್ವಕರ್ಮ ಸಹಾರ ಸಂಘ ಕಾರ್ಕಳದ ನೆಕ್ಲಾಜೆ ಹಾಗೂ ದಾನಶಾಲೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕಾರ್ಕಳ ,ವಿಶ್ವಕರ್ಮ ಸಹಕಾರ ಬ್ಯಾಂಕ್ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರೊಂದಿಗೆ ಜಂಟಿಯಾಗಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷ ಕೆ.ನವೀನ್ ಚಂದ್ರ ಶೆಟ್ಟಿ, ವಸಂತ್ ಎಂ,ನಿರಂಜನ್ ಜೈನ್, ಪ್ರಭಾ ನಿರಂಜನ್, ರೋಟರ್ಯಾಕ್ಟ್ ಕ್ಲಬ್ಬಿನ ಸದಸ್ಯರಾದ ನಿಯಮ್ ಮತ್ತು ನಿಕ್ಷೇಪ್ ಭಾಗವಹಿಸಿದ್ದರು.















