ಮೂಡುಬಿದಿರೆ:ಜ.25 ಸುರಸಾರವ ಪ್ರೈವೇಟ್ ಲಿ. (ರಿ.) ಸಂಗೀತೋತ್ಸವ 2026-ಐವರಿಗೆ ಪ್ರಶಸ್ತಿ ಪ್ರಧಾನ
ಮೂಡುಬಿದಿರೆ:ಸುರಸಾರವ ಪ್ರೈವೇಟ್ ಲಿಮಿಟೆಡ್ ಇದರ ವತಿಯಿಂದ ಸಂಗೀತೋತ್ಸವ ವಿಶೇಷ ಕಾರ್ಯಕ್ರಮ ಜನವರಿ 25ರಂದು ಸಮಾಜ ಮಂದಿರ ಮೂಡುಬಿದ್ರೆ ಇಲ್ಲಿ ನಡೆಯಲಿದೆ.ಮೂಲ್ಕಿ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ದೀಪ ಪ್ರಜ್ವಲನೆ ಮಾಡಲಿದ್ದು,ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.ಮಾಜಿ ಸಚಿವ ಅಭಯಚಂದ್ರ ಜೈನ್,ನಿಕಟಪೂರ್ವ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಮೂಡುಬಿದಿರೆ,ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಉಪಸ್ಥಿತರಿರಲಿದ್ದಾರೆ.
ಸುರಸಾರವ ಕಲಾವಿಭೂಷಣ ಪ್ರಶಸ್ತಿ:
ಉದ್ಯಮಿ,ಸಮಾಜಸೇವಕ,ಕೊಡುಗೈ ದಾನಿ ಕೆ.ಶ್ರೀಪತಿ ಭಟ್ ರವರಿಗೆ ಸುರಸರವ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಸುರಸಾರವ ಕಲಾಭೂಷಣ ಪ್ರಶಸ್ತಿ:
ಶ್ರೀಮತಿ ಪೂರ್ಣಿಮಾ ಉಡುಪಿ,ಶಶಿಧರ್ ಭಟ್,ಆಲ್ವಿನ್ ಅಂದ್ರಾದೆ,ಸುಶಾಂತ್ ಭಂಡಾರಿ ಇವರಿಗೆ ಸುರಸಾರವ ಕಲಾ ಭೂಷಣ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಮಧ್ಯಾಹ್ನ 1.45 ರಿಂದ ಶಾರದಾ ಪೂಜೆ,2.45 ಗಂಟೆಗೆ ಮಹಾಮಂಗಳಾರತಿ,3.00 ಗಂಟೆಗೆ ಗುರುವಂದನಾ ಕಾರ್ಯಕ್ರಮ,4.00ಗಂಟೆಗೆ ಸುರಸಾರವ ಸಂಸ್ಥೆಯ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ಹಾಗೂ ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ನೇರಪ್ರಸಾರ ಟೈಮ್ಸ್ ಆಫ್ ಕಾರ್ಕಳ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾಗಲಿದೆ.
















