ರಸ್ತೆ ಬದಿ ನಿಂತಿದ್ದ ಮಕ್ಕಳಿಗೆ ಟೆಂಪೋ ವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಮಕ್ಕಳಿಬ್ಬರು ಗಾಯಗೊಂಡ ಘಟನೆ ಜ. 20 ರ ಸಂಜೆ ನಡೆದಿದೆ.
ಮದರಸ ಕಲಿಯಲು ಬಂದ ಗಾಯಾಳು ಮಕ್ಕಳಾದ ಫಾತಿಮತ್ ಸಮ್ರೀನಾ(6) ಮತ್ತು ಫಾತಿಮತ್ ಸನ (10) ಅಜೆಕಾರು ಮಸೀದಿ ಮುಂಭಾಗದಲ್ಲಿ ನಿಂತಿದ್ದ ವೇಳೆ ಕಾರ್ಕಳ ಕಡೆಯಿಂದ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಕಾರ್ಕಳ ಟಿ. ಎಂ. ಎ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಆದರ್ಶ ಎಂಬವರು ನೀಡಿದ ದೂರಿನ ಅನ್ವಯ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.















