Tuesday, February 17, 2026
Google search engine
Homeಕಾರ್ಕಳ2027 ರಲ್ಲಿ ನಡೆಯಲಿರುವ ಕಾರ್ಕಳ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆ

2027 ರಲ್ಲಿ ನಡೆಯಲಿರುವ ಕಾರ್ಕಳ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆ

ಕಾರ್ಕಳದಲ್ಲಿ ಮುಂದಿನ ವರ್ಷ 2027 ರಲ್ಲಿ ಐತಿಹಾಸಿಕ ಶ್ರೀ ಬಾಹುಬಲಿ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ದೇಶ ವಿದೇಶಗಳಿಂದ ಸಹಸ್ರಾರು ಯಾತ್ರಾತ್ರಿಗಳು, ಪ್ರವಾಸಿಗರು ಕಾರ್ಕಳ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮದ ಪೂರ್ವಭಾವಿಯಾಗಿ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ ಎಂ ಏನ್ ರಾಜೇಂದ್ರ ಕುಮಾರ್ ಹಾಗೂ ಮಹಾವೀರ್‌ ಹೆಗ್ಡೆಯವರ ನೇತೃತ್ವದಲ್ಲಿ ಮಾಜಿ ಸಚಿವರು, ಕಾರ್ಕಳ ಕ್ಷೇತ್ರದ ಶಾಸಕರು ಆದ ವಿ ಸುನೀಲ್ ಕುಮಾರ್ ರವರೊಂದಿಗೆ ಜೈನ ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು.

ಈ ಹಿನ್ನೆಲೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಜೈನ ಬಸದಿಗಳು, ಕೆರೆಗಳು, ದೇವಸ್ಥಾನಗಳು, ಯಾತ್ರಿ ನಿವಾಸಗಳ ಜೊತೆಗೆ ಅನೇಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ಸಾರ್ವಜನಿಕ ವಿವಿಧ ಕಾಮಗಾರಿಗಳು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸುವ ದೃಷ್ಠಿಯಲ್ಲಿ ಜೊತೆಗೆ ಕಾರ್ಯಕ್ರಮದ ಯಶಸ್ವಿ ಮಾಡುವ ಉದ್ದೇಶದಿಂದ ಜೈನ ಸಮಾಜದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಅನಂತರಾಜ ಪೂವಣಿ, ಮೋಹನ್ ಪಡಿವಾಳ್ , ಸಿಎ ಪ್ರಭಾತ್ ಕುಮಾರ್, ಎಂ ಕೆ ಸುವ್ರತ್ ಕುಮಾರ್, ಸುನಿಲ್ ಕುಮಾರ್ ಬಜಗೋಳಿ, ಭರತ್ ಕುಮಾರ್ ಜೈನ್ ಇರ್ವತ್ತೂರು , ಶೀತಲ್ ಜೈನ್ ಶಿರ್ಲಾಲು, ಜೊತೆಗೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments