ರೇಣುಕಾ ಸ್ವಾಮಿ ಕೊಲೆ ಪ್ರಕರಣ:ಪವಿತ್ರಾ ಜಾಮೀನು ಅರ್ಜಿ ತಿರಸ್ಕೃತ
ಬೆಂಗಳೂರು:ಚಿತ್ರದುರ್ಗಾ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ
ನ್ಯಾಯಾಂಗ ಬಂಧನದಲ್ಲಿರುವ ನಟಿ ಪವಿತ್ರಾಗೆ ಮತ್ತೆ ನಿರಾಸೆಯಾಗಿದೆ.ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ ನಾಯ್ಯಾಲಯ ತಿರಸ್ಕರಿಸಿದೆ.
ಮಗಳಿಗೆ ಪರೀಕ್ಷೆ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಆಕೆಯ ಜತೆಗೆ ಇರಬೇಕಿದೆ . ಹೀಗಾಗಿ 20 ದಿನಗಳ ಕಾಲ ಜಾಮೀನು ಕೋರಿ ಪವಿತ್ರಾ ಗೌಡ 57 ನೇ ಸಿಸಿಎಚ್ ನ್ಯಾಯಾಲಯ ಕೆ ಅರ್ಜಿ ಸಲ್ಲಸಿದ್ದರು.
ಆದರೆ ವಿಚಾರಣೆ ನಡೆಸಿದ ಕೋರ್ಟು ಅರ್ಜಿ ಯನ್ನು ತಿರಸ್ಕ್ರರಿಸಿದೆ .
ಅದಕ್ಕೂ ಮೊದಲು ಪವಿತ್ರಾ ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ಹಿರಿಯ ಸಹಕಾರಿ ಅಭಿಯೋಜಕ ಪಿ .ಪ್ರಸನ್ನ ಕುಮಾರ್ , ಪ್ರಕರಣದ ಬೇರೆ ಆರೋಪಿಗಳಿಗೂ ಮಕ್ಕಳಿದ್ದಾರೆ.ಅವರು ಕೂಡ ಇದೆ ರೀತಿ ಅರ್ಜಿ ಸಲ್ಲಿಸಿ ಜಾಮೀನು ಕೋರುವ ಸಾಧ್ಯತೆಯಿದೆ.ಅಲ್ಲದೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಉಲ್ಲೇಖಿಸಿದರು.












