Tuesday, February 17, 2026
Google search engine
Homeಕಾರ್ಕಳಬದುಕನ್ನು ಕಲಾತ್ಮಕವಾಗಿ ರೂಪಿಸಲು ಚಿತ್ರಕಲೆ ಪೂರಕ: ಡಾ . ಕಾರ್ತಿಕ್ ರಾವ್

ಬದುಕನ್ನು ಕಲಾತ್ಮಕವಾಗಿ ರೂಪಿಸಲು ಚಿತ್ರಕಲೆ ಪೂರಕ: ಡಾ . ಕಾರ್ತಿಕ್ ರಾವ್

ಬದುಕನ್ನು ಕಲಾತ್ಮಕವಾಗಿ ರೂಪಿಸಲು ಚಿತ್ರಕಲೆ ಪೂರಕ:ಡಾ .ಕಾರ್ತಿಕ್ ರಾವ್

ಕಾರ್ಕಳ: ಚಿತ್ರಕಲೆ ಎಂಬುದು ಬೇರೆ ವಿದ್ಯೆಗಳಿಗಿಂತ ಭಿನ್ನವಾಗಿದೆ. ಮಕ್ಕಳಲ್ಲಿ ಮನಸ್ಸನ್ನು ಅರಳಿಸುವುದರ ಜೊತೆ ಆರೋಗ್ಯಕರ ಚಿಂತನೆಗಳನ್ನು ಬೆಳೆಸಲು ಚಿತ್ರಕಲೆ ಅವಕಾಶ ನೀಡುತ್ತದೆ . ಜೀವನ ಬದುಕನ್ನು ಕಲಾತ್ಮಕವಾಗಿ ರೂಪಿಸುವುದ ರೊಂದಿಗೆ ಅನ್ಯಾನ್ಯ ಕ್ಷೇತ್ರಗಳಲ್ಲಿ ಅಸಂಖ್ಯ ಅವಕಾಶಗಳನ್ನೂ ಕಲ್ಪಿಸುತ್ತದೆ ಎಂದು ಡಾಕ್ಟರ್ ಕಾರ್ತಿಕ್ ರಾವ್ ಹೇಳಿದರು.

ಅವರು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ ಸಭಾಂಗಣದಲ್ಲಿ ಕಾರ್ಕಳ ಟೈಗರ್ಸ್, ಹೊಸಸಂಜೆ ಬಳಗ, ಜೆ ಸಿ ಐ ಕಾರ್ಕಳ, ಮಾನಸ ಗ್ರೂಪ್ ಬೆಂಗಳೂರು ಆಯೋಜಿಸಿದ ಪೂರ್ಣಪ್ರಜ್ಞ ಸ್ಮರಣಾರ್ಥ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಉದ್ಘಾಟನ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಮಾತನಾಡಿದರು.

ಕವಯಿತ್ರಿ ಜ್ಯೋತಿ ಗುರುಪ್ರಸಾದ್, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಜೆ ಸಿ ಐ ಅಧ್ಯಕ್ಷ ಅವಿನಾಶ್ ಶೆಟ್ಟಿ, ಉದ್ಯಮಿ ಬೋಳ ಪ್ರಶಾಂತ್ ಕಾಮತ್, ದುರ್ಗದ ಕೃಷಿಕ ದಿನೇಶ್ ಗೋರೆ, ಪೆರ್ವಾಜೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆಸ್ಮಾ ಬಾನು, ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಎನ್. , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದರಾಯ ನಾಯಕ್, ಭುವನೇಂದ್ರ ಪ್ರೌಢಶಾಲೆಯ ಶಿಕ್ಷಕಿಇಂದಿರಾ ಪಿ. ನಾಯಕ್, ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸುಬ್ರಮಣ್ಯ ಉಪಾಧ್ಯ, ಕಾರ್ಯಕ್ರಮ ಸಂಯೋಜಕ ಆರ್ . ದೇವರಾಯ ಪ್ರಭು ಉಪಸ್ತಿತರಿದ್ದರು .
ವಿವಿಧ ಶಾಲೆಯ ಐವರು ವಿದ್ಯಾರ್ಥಿಗಳು ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು .
ಛಾಯಾಗ್ರಾಹಕ ದತ್ತಾತ್ರೇಯ ಹಿರಿಯಂಗಡಿ ಸ್ವಾಗತಿಸಿದರು . ಧಾರಿಣಿ ಪ್ರಾಸ್ತಾವಿಕ ಮಾತನಾಡಿದರು. ಜಿತೇಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ರಮ್ಯಾ ಪೂಜಾರಿ ವಂದಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments