Tuesday, February 17, 2026
Google search engine
Homeಕಾರ್ಕಳಕಾರ್ಕಳದ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ಪ್ರಶಸ್ತಿ

ಕಾರ್ಕಳದ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ಪ್ರಶಸ್ತಿ

ಕಾರ್ಕಳದ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ಪ್ರಶಸ್ತಿ

ಕಾರ್ಕಳ ಸಾಲ್ಮರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಪ್ರಶಾಂತ್ ಹೆಗ್ಡೆ ಅವರ ಸಹೋದರ ಶಾರ್ಜಾದಲ್ಲಿ ವಾಸಿಸುತ್ತಿರುವ ವೆಂಕಟೇಶ್ ಹೆಗ್ಡೆ ಬೋಳ ಮತ್ತು ಅಶ್ವಿನಿ ಭಟ್ ದಂಪತಿಯ ಪುತ್ರಿ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ಗೌರವ ಪ್ರಶಸ್ತಿ ಲಭಿಸಿದೆ.

ಫೆಬ್ರವರಿ ತಿಂಗಳಿನ 14 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ನ ಶಾರ್ಜಾ ಆಡಳಿತಗಾರರಾದ ಡಾ . ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಅವರಿಂದ ಈ ವಿಶಿಷ್ಟ ಮನ್ನಣೆಯನ್ನು ಭಕ್ತಿ ಅವರು ಸ್ವೀಕರಿಸಿದರು .

ಭಕ್ತಿ ಅವರು ಪ್ರಸ್ತುತ ಶಾರ್ಜಾದ ದೆಹಲಿ ಪ್ರೈವೇಟ್ ಸ್ಕೂಲ್ ನಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ .ಈ ಪ್ರಶಸ್ತಿಯು ಅತ್ಯುತ್ತಮ ಶೈಕ್ಷಣಿಕ ಸಾಧನೆ, ಅನುಕರಣೀಯ ವ್ಯಕ್ತಿತ್ವ, ನಾಯಕತ್ವದ ಗುಣಗಳು ಮತ್ತು ಕಲಿಕೆಯ ಕಡೆಗಿನ ಸಮರ್ಪಣೆಯನ್ನು ಗುರುತಿಸಿ ನೀಡಲಾಗುತ್ತದೆ .

ಕಾರ್ಕಳ ಮೂಲದ ವಿದ್ಯಾರ್ಥಿನಿ ಭಕ್ತಿ ಅವರ ಈ ಅಪ್ರತಿಮ ಸಾಧನೆ ಕಾರ್ಕಳ ತಾಲೂಕಿಗೆ ಮಾತ್ರವಲ್ಲ ಉಡುಪಿ ಜಿಲ್ಲೆಗೆ ಅಪಾರ ಹೆಮ್ಮೆ ತಂದಿದೆ.ಕಾರ್ಕಳ ಟೈಗರ್ಸ್ ಸಂಸ್ಥಾಪಕ, ಖ್ಯಾತ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅವರು ಭಕ್ತಿ ಅವರ ಸಾಧನೆಯನ್ನು ಪ್ರಶಂಸಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments