‘ತಾಯಿಯನ್ನು ರಾಜಮಾತೆ ಮಾಡಿದ ವೀರ ಯೋಧ-ಇತಿಹಾಸದಲ್ಲಿ ಹೋಲಿಕೆ ಇಲ್ಲದ ಸರದಾರ-ಛತ್ರಪತಿ ಶಿವಾಜಿ ಮಹಾರಾಜ್
ಬರಹ :-ಗಿರೀಶ್ ರಾವ್ ಛತ್ರಪತಿ ಪೌಂಡೇಶನ್.
ಮಹಾರಾಜರ ಜಯಂತೋತ್ಸವದ ಶುಭಾಶಯಗಳು.
ಭಾರತವು ಪ್ರಾಚೀನ ಕಾಲದಿಂದಲೂ ಸಾಕಷ್ಟು ಧೈರ್ಯಶಾಲಿ ಪುರುಷರ ಮತ್ತು ವೀರ ಆಡಳಿತಗಾರರ ಹಿನ್ನೆಲೆಯನ್ನು ಹೊಂದಿದೆ. ಭಾರತದಲ್ಲಿ ಅತ್ಯಂತ ಧೈರ್ಯಶಾಲಿ ಪುರುಷರು ಮಾತ್ರವಲ್ಲ. ಕೆಲವೊಂದು ಮಹಿಳೆಯರು ಕೂಡ ಆಡಳಿತ ನಡೆಸಿದ ಇತಿಹಾಸವಿದೆ. ಈ ಧೈರ್ಯಶಾಲಿ ಸಾಮ್ರಾಜ್ಯದ ಅಧಿಪತಿಗಳು ತಮ್ಮ ತಾಯಿನಾಡು ಮತ್ತು ಸ್ವರಾಜ್ಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಜಿಸಿದ್ದಾರೆ.ಅಂತಹ ಮಹಾನ್ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡಾ ಒಬ್ಬರು.
ಛತ್ರಪತಿ ಶಿವಾಜಿ ಮಹಾರಾಜರ ಪೂರ್ಣ ಹೆಸರು ಶಿವಾಜಿರಾಜೆ ಶಹಾಜಿರಾಜೆ ಬೋಂಸ್ಲೆ. ಶಿವಾಜಿ ಮಹಾರಾಜರು ಫೆಬ್ರವರಿ 19, 1630ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿನ ಶಿವನೇರಿ ಎನ್ನುವ ಕೋಟೆಯಲ್ಲಿ ಜನಿಸಿದರು.
ಶಿವಾಜಿಗೆ ಆರಂಭಿಕ ಶಿಕ್ಷಣವನ್ನು ಕೊಟ್ಟವರು ಅಣ್ಣ ಸಂಬಾಜಿ, ನಂತರ ಶಿವನೇರಿ ದುರ್ಗಕ್ಕೆ ಹಿಂತಿರುಗಿದ ಶಿವಾಜಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲ್ಯವನ್ನು ಧಾರೆ ಎರೆದವರು ದಾದಾಜಿ ಕೋಂಡದೇವ. ಕತ್ತಿವರಸೆ, ಕುದುರೆ ಸವಾರಿ ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ 17 ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹಾತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು.
ಶಹಾಜಿ ಜಾಗೀರು ನೋಡಿಕೊಳ್ಳುತ್ತಿದ್ದ ದಾದಾಜಿ ಕೊಂಡದೇವ ಅವರಿಂದ ಪರಿಪೂರ್ಣ ಸೈನಿಕ ಶಿಕ್ಷಣ ಪಡೆದಿದ್ದ ಶಿವಾಜಿ ಕಾಡುಮೇಡುಗಳಲ್ಲಿ ಸುತ್ತಾಡಿ ಅನುಭವ ಪಡೆದರು. ಪಶ್ಚಿಮ ಘಟ್ಟಗಳ ಮಾವಳರೆಂಬ ಗಿರಿಜನರನ್ನು ಕಂಡ ಶಿವಾಜಿ ಅವರ ಧೈರ್ಯ ಸಾಹಸಗಳನ್ನು ನೋಡಿ ಅವರನ್ನೆಲ್ಲಾ ಸೇರಿಸಿ ಬಲವಾದ ಪಡೆ ಕಟ್ಟಲು ಆರಂಭಿಸಿದರು. ಪ್ರಮುಖ ಮರಾಠ ನಾಯಕರೂ ಇವರೊಡನೆ ಕೈ ಜೋಡಿಸಿದರು. ತಂದೆ ಜಹಗೀರಾದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲೆ ಅದೇ ಪ್ರದೇಶಕ್ಕೆ ಸನಿಹವಿದ್ದ ಮರೆಯಲಾಗದ ಮಹಾಸಾಮ್ರಾಜ್ಯವಾದ ವಿಜಯನಗರವನ್ನು( ಆ ವೇಳೆಗೆ ಪತನವಾಗಿತ್ತು) ಅದರ ಅವಶೇಷಗಳನ್ನು ಕಂಡು ಬಂದಿದ್ದರು ಯುವಕ ಶಿವಾಜಿ.
ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ಸೇರಿದವರು ಹಾಗೂ ಇವರು ಧಾರ್ಮಿಕ ಸಹಿಷ್ಣುಹಿಯಾಗಿದ್ದರು. ಅವರ ಆಡಳಿತದ ಅವಧಿಯಲ್ಲಿ ಹಿಂದೂಗಳು ಮಾತ್ರವಲ್ಲ ಮುಸ್ಲಿಂರು ಕೂಡ ಸಂಪೂರ್ಣ ಧಾರ್ಮಿಕ ಸ್ವಾತಂತ್ರವನ್ನು ಹೊಂದಿದ್ದರು. ಶಿವಾಜಿ ಹಿಂದುಗಳಿಗೆ ಹೇಗೆ ದೇವಾಲಯವನ್ನು ನಿರ್ಮಿಸಲು ಸಹಕಾರವನ್ನು ನೀಡುತ್ತಿದ್ದರು. ಅಷ್ಟೇ ಸಹಕಾರವನ್ನು ಮುಸ್ಲಿಂರಿಗೆ ಮಸೀದಿಯನ್ನು ನಿರ್ಮಿಸಲು ನೀಡುತ್ತಿದ್ದರು. ಅವರ ಸಾಮ್ರಾಜ್ಯದಲ್ಲಿ ಹಿಂದೂ ಪಂಡಿತರಿಗಿದ್ದ ಗೌರವವನ್ನೇ ಮುಸ್ಲಿಂ ಸಂತರಿಗೆ ಹಾಗೂ ಫಕೀರ್‌ರಿಗೂ ನೀಡಲಾಗುತ್ತಿತ್ತು. ಶಿವಾಜಿಯ ಸೈನ್ಯದಲ್ಲಿ ಹಿಂದೂ ಸೈನಿಕರಂತೆ ಮುಸ್ಲಿಂ ಸೈನಿಕರು ಇದ್ದರು. ಶಿವಾಜಿ ಹಿಂದೂ ಸಂಸ್ಕೃತಿಯನ್ನು ಉತ್ತೇಜಿಸುತ್ತಿದ್ದರು, ಗೌರವಿಸುತ್ತಿದ್ದರು. ಶಿವಾಜಿ ಆಡಳಿತಾವಧಿಯಲ್ಲಿ ಸಾಂಪ್ರದಾಯಿಕ ಹಿಂದೂ ಮೌಲ್ಯಗಳಿಗೆ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು.
ಸ್ವಾಭಿಮಾನಿ ರಾಷ್ಟç ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು.
ಶಿವಾಜಿಯ ಶೌರ್ಯ, ಸಾಹಸ ರಾಷ್ಟçಭಕ್ತ ಆಡಳಿತಗಾರರಿಗೆ ಎಂದೆAದಿಗೂ ಪ್ರೇರಣಾದಾಯಿ.
ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧರೆನ್ನಿಸಿಕೊಂಡು ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜ ಸ್ವಾಭಿಮಾನಿ ರಾಷ್ಟç ನಿರ್ಮಾಣದ ಕನಸು ಕಂಡವರು.
ಪ್ರಜಾಹಿತ ರಕ್ಷಕ, ಹಿಂದುತ್ವ ರಕ್ಷಕ, ರಾಷ್ಟç ಪ್ರೇಮಿ, ನ್ಯಾಯವಂತ, ಕರ್ತವ್ಯ ದಕ್ಷ, ಶ್ರದ್ಧೆ ಮತ್ತು ಭಾಷಾ ಶುದ್ಧಿಯನ್ನು ಪುರಸ್ಕರಿಸುವ ಛತ್ರಪತಿ ಶಿವಾಜಿ ಮಹಾರಾಜರು ರಾಜಸಿಂಹಾಸನ ದೊರಕಿಸಿಕೊಟ್ಟಿದ್ದು ಅವಿಸ್ಮರಣೀಯ. ಶಿವಾಜಿ ಕತ್ತಿಗೆ ಕತ್ತಿ ಇವನ ಸೂತ್ರವಾಗಿತ್ತು.
ಮಹಾರಾಷ್ಟçದ ಅಸ್ಮಿತೆ ಶಿವಾಜಿ ಭೋಂಸ್ಲೆ ಅವರ ಕುಟುಂಬದ ತಾಯಿಬೇರು ಕನ್ನಡನಾಡಿನಲ್ಲಿದೆ. ಇದರ ವಾಸ್ತವಾಂಶಗಳೇನೇ ಇದ್ದರೂ ಶಿವಾಜಿಗೆ ಕನ್ನಡ ಭೂಮಿ ಪ್ರೇರಣಾ ಸ್ಥಳವಾಗಿತ್ತು.
ಅಧರ್ಮವನ್ನು ಮೆಟ್ಟಿನಿಂತು ಬದುಕಿನ ಗುರಿಯನ್ನು ಕಂಡುಕೊAಡು, ಅನುಷ್ಠಾನದ ಹಾದಿಯಲ್ಲಿ ಸಮಂಜಸ ಯೋಜನೆಯನ್ನು ಕೈಗೊಂಡು ೧೬೭೪ ಜೂನ್ ೪ ರಂದು ತನ್ನ ಮಗನನ್ನು ‘ಛತ್ರಪತಿ’ಯಾಗಿಸಿ ಶ್ರೇಷ್ಟತೆಯನ್ನು ಮೆರೆದ ಜೀಜಾಬಾಯಿ ‘ರಾಜಮಾತೆ’ ಎನಿಸಿ ಕೆಲವೇ ದಿನಗಳಲ್ಲಿ ಅಂದರೆ ಜೂನ್ ೧೭, ೧೬೭೪ ರಲ್ಲಿ ಇಹಲೋಕ ತ್ಯಜಿಸುತ್ತಾಳೆ. ಭಾರತಾಂಬೆಯನ್ನು ಬಂಧಮುಕ್ತಗೊಳಿಸಿದ ಸಂತೃಪ್ತಿಯಿAದ ಸಾವಿರಾರು ವರ್ಷಗಳ ಗುಲಾಮಗಿರಿಗೆ ಮಂಗಳಹಾಡಿ ಹೊಸ ಭಾಷೆ ಬರೆದ ಮಹಾತಾಯಿ.
ಛತ್ರಪತಿ ಶಿವಾಜಿಯ ಪಯಣದ ಹೆಜ್ಜೆಗುರುತನ್ನು ಗಮನಿಸಿದಾಗ ಆತನ ಶ್ರೇಷ್ಟತೆಯ ಪರಿಚಯ ನಮಗಾಗುತ್ತದೆ. ರಾಷ್ಟçದ ಚರಿತ್ರೆಯ ದರ್ಶನ ಮಾಡಿಸುವ ಮೇರು ವ್ಯಕ್ತಿತ್ವದ ಪರಿಚಯ, ಆತನ ಶೌರ್ಯ, ಸ್ವಾಭಿಮಾನ, ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಪಟ್ಟ ಶ್ರಮ, ಗುರು ಹಿರಿಯರಲ್ಲಿನ ಭಕ್ತಿ, ದೇವರಲ್ಲಿ ನಂಬಿಕೆ ಇದೆಲ್ಲವೂ ನಮ್ಮ ಕಣ್ಮುಂದೆ ನಿಲ್ಲುತ್ತವೆ. ಶತಶತಮಾನಗಳ ಕಾಲ, ತಲೆ ತಲಾಂತರಗಳಿAದ ದಾಸ್ಯದ ಸಂಕೋಲೆಯಲ್ಲಿ ಬಂಧಿಯಾದ ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವ ‘ಸ್ವರಾಜ್ಯ’ದ ಸ್ಥಾಪನೆಗಾಗಿ ದುಡಿದವನು ಶಿವಾಜಿ.ಮರಾಠ ಸಾಮ್ರಾಜ್ಯದ ಇತಿಹಾಸದ ಮೇರು ವ್ಯಕ್ತಿಯಾಗಿ, ಛತ್ರಪತಿ ಬಿರುದಾಂಕಿತನಾಗಿ ನೀಡಿದ ಆಡಳಿತ ಮೇರು ವ್ಯಕ್ತಿಯ ಮೈಲಿಗಲ್ಲು. ಇಂತಹ ಮಹಾನ್ ನಾಯಕನ ಜನ್ಮದಿನ.












