Sunday, March 29, 2026
Google search engine
Homeಕಾರ್ಕಳಹೆಬ್ರಿ ಅಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಬಾಲಚಂದ್ರ ಮುದ್ರಾಡಿ ಆಯ್ಕೆ

ಹೆಬ್ರಿ ಅಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಬಾಲಚಂದ್ರ ಮುದ್ರಾಡಿ ಆಯ್ಕೆ

ಹೆಬ್ರಿ : ಪತ್ರಿಕಾ ವರದಿಗಾರ, ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಬಾಲಚಂದ್ರ ಮುದ್ರಾಡಿ ಇವರು ಅಲಯನ್ಸ್ ಕ್ಲಬ್ ಹೆಬ್ರಿ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕ್ಲಬ್ ನ ಅಧ್ಯಕ್ಷರಾದ ಕಬ್ಬಿನಾಲೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ಮಾ.28 ರಂದು ನಡೆದ ಮಾಸಿಕ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಮುದ್ರಾಡಿ, ಕಾರ್ಯದರ್ಶಿಯಾಗಿ ಸುರೇಶ ನಾಯ್ಕ್ , ಕೋಶಾಧಿಕಾರಿಯಾಗಿ ನ್ಯಾಯವಾದಿ ವರಂಗ ಸುರೇಶ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಕಬ್ಬಿನಾಲೆ ಶ್ರೀಧರ ಹೆಬ್ಬಾರ್, ಅಶೋಕ ಕುಮಾರ್ ಶೆಟ್ಟಿ ಮುದ್ರಾಡಿ, ನಿತ್ಯಾನಂದ ಭಟ್ ಹುತ್ತುರ್ಕೆ ಮತ್ತು ಇತರ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಅಲ್ಲದೆ 2026-27 ನೇ ಸಾಲಿನ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಅಧ್ಯಕ್ಷರಾಗಿ ಸುನೀತಾ ಹೆಬ್ಬಾರ್, ಕಾರ್ಯದರ್ಶಿಯಾಗಿ ರಮ್ಯಕಾಂತಿ, ಕೋಶಾಧಿಕಾರಿಯಾಗಿ ಅಮೃತ ಮುದ್ರಾಡಿ ಹಾಗೂ ಇತರ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments