Home Blog Page 22

ಸಾಮೂಹಿಕ ಅ*ಚಾರ ಆರೋಪ: ಶಾಸಕ ಮುನಿರತ್ನ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

0

 

ಸಾಮೂಹಿಕ ಅ*ಚಾರ ನಡೆಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಪ್ರಕರಣದ ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ವಿಚಾರಣಾಧೀನ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿರುವುದನ್ನು ಪರಿಗಣಿಸಿರುವ ಹೈಕೋರ್ಟ್‌, ಎಸ್‌ಐಟಿಯು 42ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಿರುವ ಬಿ ರಿಪೋರ್ಟ್‌ ಅನ್ನು ನ್ಯಾಯಾಲಯ ಒಪ್ಪಿಕೊಂಡಿರುವುದರಿಂದ ಅರ್ಜಿಯು ವಿಚಾರಣಾ ಮಾನ್ಯತೆ ಕಳೆದುಕೊಂಡಿದ್ದು, ವಜಾಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.

ಬೆಂಗಳೂರಿನ ಯಶವಂತಪುರದ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಮುನಿರತ್ನ, ವಸಂತ ಕುಮಾರ್‌, ಚನ್ನಕೇಶವ್‌ ಮತ್ತು ಕಮಲ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳು, ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಸಿಒಡಿ-ಎಸ್‌ಐಟಿ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕರು, ಎಸ್‌ಐಟಿಯು ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಕರಣದ ಸಂಬಂಧ ಬಿ ರಿಪೋರ್ಟ್‌ ಸಲ್ಲಿಸಿದ್ದು, ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು.

ಆದರೆ, ಅರ್ಜಿದಾರರ ಪರ ವಕೀಲರು, ಬಿ ರಿಪೋರ್ಟ್‌ ಅನ್ನು ನ್ಯಾಯಾಲಯ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ವಿಶೇಷ ಸರ್ಕಾರಿ ಅಭಿಯೋಜಕರ ಹೇಳಿಕೆಯ ಅನ್ವಯ ಅರ್ಜಿ ವಜಾಗೊಳಿಸಬಹುದು ಎಂಬ ಮಾತನ್ನು ಪುರಸ್ಕರಿಸಿದ ನ್ಯಾಯಾಲಯ ಅರ್ಜಿಗಳನ್ನು ವಜಾಗೊಳಿಸಿತು.

ಬಾಸ್ಕೆಟ್ ಬಾಲ್ : ಕ್ರಿಯೇಟಿವ್ ವಿದ್ಯಾರ್ಥಿ ಹ್ಯಾನ್ಸೆಲ್ ಇಮ್ಯಾನುಯೆಲ್ ರಾಜ್ಯಮಟ್ಟಕ್ಕೆ ಆಯ್ಕೆ

0

 

ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯು 15 ಸೆಪ್ಟೆಂಬರ್ 2025ರಂದು ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯಲ್ಲಿ ಜರುಗಿತು. ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಈ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮುಂಬರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಇವರು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿಯ ಸಾಧನೆಯನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವೃಂದದವರು ಅಭಿನಂದಿಸಿ, ಶುಭಹಾರೈಸಿದ್ದಾರೆ.

ಬಾಸ್ಕೆಟ್ ಬಾಲ್ : ಕ್ರಿಯೇಟಿವ್ ವಿದ್ಯಾರ್ಥಿ ಹ್ಯಾನ್ಸೆಲ್ ಇಮ್ಯಾನುಯೆಲ್ ರಾಜ್ಯಮಟ್ಟಕ್ಕೆ ಆಯ್ಕೆ.

0

ಬಾಸ್ಕೆಟ್ ಬಾಲ್ : ಕ್ರಿಯೇಟಿವ್ ವಿದ್ಯಾರ್ಥಿ ಹ್ಯಾನ್ಸೆಲ್ ಇಮ್ಯಾನುಯೆಲ್ ರಾಜ್ಯಮಟ್ಟಕ್ಕೆ ಆಯ್ಕೆ.

ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯು 15 ಸೆಪ್ಟೆಂಬರ್ 2025ರಂದು ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯಲ್ಲಿ ಜರುಗಿತು. ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಈ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮುಂಬರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಇವರು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿಯ ಸಾಧನೆಯನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವೃಂದದವರು ಅಭಿನಂದಿಸಿ, ಶುಭಹಾರೈಸಿದ್ದಾರೆ.

ಮಹಿಳಾ ಮೋರ್ಚಾದಿಂದ ಮೋದಿ 75ನೇ ಜನ್ಮ ದಿನದ ಅಂಗವಾಗಿ ಪೂಜೆ

0

ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ ಅಂಗವಾಗಿ ಕಾರ್ಕಳ ನಗರ ಮಹಿಳಾ ಮೋರ್ಚಾ ವತಿಯಿಂದ ಕಾರ್ಕಳ ಬಂಡಿಮಠ ಮೂಡು ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರಧಾನಿಯವರ ಆರೋಗ್ಯಪೂರ್ಣ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ, ಸಿಹಿತಿಂಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್, ಸೇವಾ ಪಾಕ್ಷಿಕ ಸಂಚಾಲಕರಾದ ರವೀಂದ್ರ ಕುಮಾರ್, ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್, ನಗರಾಧ್ಯಕ್ಷರಾದ ನಿರಂಜನ್ ಜೈನ್ ,ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷರಾದ ವಿನಯಾ ಡಿ ಬಂಗೇರ, ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಮತಾ ಸುವರ್ಣ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ಕವಿತಾ ಹರೀಶ್, ಮಹಿಳಾ ಮೋರ್ಚಾ ತಾಲೂಕು ಉಪಾಧ್ಯಕ್ಷರುಗಳಾದ ಭಾರತಿ ಅಮೀನ್ , ಆಶಾ ದೇವೇಂದ್ರ ಶೆಟ್ಟಿ, ಪಲ್ಲವಿ ಪ್ರವೀಣ್ ಹಾಗೂ ಪದಾಧಿಕಾರಿಗಳಾದ ಗೀತಾ ಕಲ್ಲಟ್ಟೆ ಮಮತಾ ನಾಯಕ್, ಶುಭಾಶ ಶೆಟ್ಟಿ, ನೀತಾ ಆಚಾರ್ಯ, ಶಿವಾನಿ ದೇವಾಡಿಗ, ರಜನಿ ಹೆಗ್ಡೆ, ಸರಿತಾ ಹಾಗೂ ಇತರರು ಉಪಸ್ಥಿತರಿದ್ದರು.

ನಿಟ್ಟೆಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

0

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸೈಬರ್ ಸೆಕ್ಯೂರಿಟಿ ವಿಭಾಗವು ಜಪಾನಿನ ವಿಲ್ ಡಿಸೈನ್ ಸಹಯೋಗದೊಂದಿಗೆ ಉತ್ಕೃಷ್ಟತಾ ಕೇಂದ್ರವನ್ನು ಕ್ಯಾಂಪಸ್ ನಲ್ಲಿ ಸ್ಥಾಪಿಸಿ ಸೆ.೧೫ ರಂದು ಅದನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ನೇರ ಕಲಿಕೆಯನ್ನು ಬೆಳೆಸಲು ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಭಾಗವಹಿಸಿದ್ದರು. ವಿಲ್ ಡಿಸೈನ್ ಜಪಾನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೋಟಾಕಾ ತಗುಚಿ; ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿರೋಶಿ ನಕಯಾಮಾ, ಕಾರ್ಯನಿರ್ವಾಹಕ ವ್ಯವಸ್ಥಾಪಕರು ತಕಾಶಿ ತ್ಸುಜಿಯುಚಿ; ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ; ಮತ್ತು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ನಿಟ್ಟೆ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಹಯೋಗಗಳ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಅವರು ಸರ್ವರನ್ನೂ ಸ್ವಾಗತಿಸಿ ಜಪಾನಿನ ವಿವಿಧ ಸಂಸ್ಥೆಗಳೊಂದಿಗೆ ನಿಟ್ಟೆಯ ಸಹಯೋಗಗಳನ್ನು ಪರಿಚಯಿಸಿದರು. ಅತಿಥಿಗಳು ನಿಟ್ಟೆ ಸಂಸ್ಥೆಯ ಹಾಗೂ ಅತಿಮುಖ್ಯವಾಗಿ ಸೈಬರ್ ಸೆಕ್ಯೂರಿಟಿ ವಿಭಾಗದ ಗಮನಾರ್ಹ ಉಪಕ್ರಮಗಳಿನ್ನು ಶ್ಲಾಘಿಸಿ, ವಿದ್ಯಾರ್ಥಿಗಳ ಉತ್ಸಾಹ ಮತ್ತು ಪ್ರತಿಭೆಯನ್ನು ಪ್ರಶಂಸಿಸಿದರು.

ಪ್ರಯೋಗಾಲಯವು ಕಾಲೇಜಿನ ನಾವೀನ್ಯತೆ ಮತ್ತು ಉತ್ಕೃಷ್ಟತೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅತಿಥಿಗಳು ವಿಶ್ವಾಸ ವ್ಯಕ್ತಪಡಿಸಿದರು. ಈ ಸೌಲಭ್ಯದೊಂದಿಗೆ, ಸಂಸ್ಥೆಯು ಸೃಜನಶೀಲತೆ ಮತ್ತು ತಂತ್ರಜ್ಞಾನದಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಿದೆ.

ಸೈಬರ್ ಸೆಕ್ಯೂರಿಟಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಹಾಗೂ ಈ ಉತ್ಕೃಷ್ಟತಾ ಕೇಂದ್ರದ ಸಲಹೆಗಾರ ಡಾ. ರೋಶನ್ ಫರ್ನಾಂಡಿಸ್ ಅವರು ಔಪಚಾರಿಕ ವಂದನಾರ್ಪಣೆ ಮಾಡಿದರು. ಸೈಬರ್ ಸೆಕ್ಯುರಿಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ್ ಕಾಮತ್ ಕೆ.ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ಉತ್ಸಾಹಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ರೈಸ್ಟ್ ಕಿಂಗ್: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಅಧ್ಯಯನ ಕಾರ್ಯಕ್ರಮ

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಅಧ್ಯಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ನಿಟ್ಟಿನಲ್ಲಿ ಹೊಸ್ಮಾರಿನಲ್ಲಿರುವ ಲೀಲಾ ಫಾರ್ಮ್ಸ್ ಹಣ್ಣುಗಳ ತೋಟಗಾರಿಕಾ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು. ಅಲ್ಲಿ ವಿವಿಧ ತಳಿಯ ದೇಶಿ ಮತ್ತು ವಿದೇಶಿ ಹಣ್ಣುಗಳು, ಅವುಗಳನ್ನು ಬೆಳೆಯುವ ವಿಧಾನ, ಕೊಯ್ಲು, ಸಂಸ್ಕರಣೆ ಹಾಗೂ ಮಾರುಕಟ್ಟೆಯ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಲೀಲಾ ಫಾರ್ಮ್ಸ್ ನ ಮಾಲಕ ಶಿವಾನಂದ ಶೆಣೈ ಹಾಗೂ ಅವರ ಪುತ್ರ ಶ್ರವಣ್ ಶೆಣೈ ತೋಟಗಾರಿಕಾ ವಿಧಾನಗಳ ಸಮಗ್ರ ಮಾಹಿತಿ ನೀಡಿದರು.

ಸಂಸ್ಥೆಯ ಉಪನ್ಯಾಸಕರಾದ ದೀಪಕ್, ಶ್ರೀಮತಿ ಸುಕನ್ಯಾ, ಕು.ಅಭಿನಯ ನೇತೃತ್ವ ವಹಿಸಿದ್ದು, ಉಪಪ್ರಾಚಾರ್ಯರಾದ ಪ್ರಕಾಶ್ ಭಟ್ ಸಂಘಟಿಸಿದ್ದರು.

ಜ್ಞಾನಸುಧಾ : ಕಾರ್ಕಳದ ಮೂವರು ಬಾಸ್ಕೆಟ್‌ಬಾಲ್ ನಲ್ಲಿ ರಾಜ್ಯಮಟ್ಟದ ತಂಡಕ್ಕೆ ಆಯ್ಕೆ

0

 

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು ನಿಟ್ಟೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದು, ಸಂಸ್ಥೆಯ ಪೂರ್ಣಶ್ರೀ ವಿ.ಎಸ್. ಶ್ರೇಯಾ ಹೆಮರಡ್ಡಿ ಸಿ ಮತ್ತು ಗ್ರೀಷ್ಮಾ ಎಸ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ರೋಟರಿ ಕ್ಲಬ್ ಕಾರ್ಕಳಕ್ಕೆ ಜಿಲ್ಲಾ ಪ್ರಶಸ್ತಿ

0

 

ಉಡುಪಿ ಜಿಲ್ಲೆಯ ಸಾಸ್ಥಾನದಲ್ಲಿ ಏರ್ಪಡಿಸಿದ್ದ 2024- 25 ನೇ ಸಾಲಿನ ಉಡುಪಿ ,ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ 3182 ರ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ “ಕಲ್ಯಾಣ ಸಂಗಮ” ದಲ್ಲಿ ರೋಟರಿ ಕ್ಲಬ್ ಕಾರ್ಕಳ ಸಾರ್ವಜನಿಕ ಸೇವೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ವಿವಿಧ ವಿಭಾಗಗಳಲ್ಲಿ 30 ಪ್ರಶಸ್ತಿಗಳನ್ನು 24-25 ನೇ ಸಾಲಿನ ಅಧ್ಯಕ್ಷ ಇಕ್ಬಾಲ್ ಅಹ್ಮದ್ ರವರಿಗೆ ನೀಡಿ ಗೌರವಿಸಲಾಯಿತು . 24-25 ನೇ ಸಾಲಿನ ಎಕ್ಸಲೆನ್ಸಿ ಅವಾರ್ಡ್ ಅನ್ನು ಪಡೆಯಿತು. ಅಲ್ಲದೆ ಜಿಲ್ಲಾ ಮೆಂಬರ್ ಶಿಪ್ ವೈಸ್ ಚೇರ್ಮನ್ ಕಾರ್ಕಳ ಕ್ಲಬ್ಬಿನ ಸದಸ್ಯೆ ರೇಖಾ ಉಪಾಧ್ಯಾಯ ಇವರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ 24-25ನೇ ಸಾಲಿನ ಕಾರ್ಯದರ್ಶಿ ಗಣೇಶ ಸಾಲಿಯಾನ್, ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್, ಮಾಜಿ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ವಲಯ ಸೇನಾನಿ ಜಾನ್ ಡಿ ಸಿಲ್ವ,2025-26ನೇ ಸಾಲಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಶೇಖರ್ ಹೆಚ್, ಶ್ರೀಶ ಭಟ್, ಪದ್ಮಪ್ರಸಾದ್ ಜೈನ್ ,ಚೇತನ್ ಕುಮಾರ್ ,ಜೆರಾಲ್ಡ್ ಕುಟೀನ್ಹೊ, ಸುಬ್ರಹ್ಮಣ್ಯ ದೇವಾಡಿಗ, ಸುರೇಶ ನಾಯಕ್, ಸೌಜನ್ಯ ಉಪಾಧ್ಯಾಯ,ವಿಜೇಂದ್ರ ಕುಮಾರ್ , ಪ್ರಭಾತ್ ಕುಮಾರ್ ಎನ್, ಸತೀಶ್ ಜಿ. ಶೆಟ್ಟಿ, ನವೀನ್ ಸುವರ್ಣ, ಬಾಲಕೃಷ್ಣ ದೇವಾಡಿಗ,ಡಾ.ಆಶಾ ಹೆಗಡೆ, ರೇಖಾ ಉಪಾಧ್ಯಾಯ, ಹರ್ಷಿಣಿ ವಿಜಯರಾಜ್, ಜ್ಯೋತಿ ಪದ್ಮನಾಭ, ಮಮತ ಶೆಟ್ಟಿ ಭಾಗವಹಿಸಿದ್ದರು.

ಪ್ರಧಾನ ಮಂತ್ರಿ ಬಾಲಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿರುವ ದೀಪೇಶ್ ದೀಪಕ್ ಶೆಣೈಗೆ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಗೌರವ ಸನ್ಮಾನ

0

 

ಅಕಾಡಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಆಡಳಿತದಲ್ಲಿರುವ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈಗೆ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ವಲಯದಲ್ಲಿ ನಡೆದ ಭವ್ಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಅಖಿಲ ಭಾರತ ಮಟ್ಟದ ಶೈಕ್ಷಣಿಕ ಸಾಧನೆ ಹಾಗೂ ಧೈರ್ಯ/ಸಾಹಸ ದ ಕ್ಷೇತ್ರದಲ್ಲಿ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೊಡಮಾಡುವ ಅತ್ಯುನ್ನತ ಗೌರವಯುತ ಪ್ರಶಸ್ತಿಯಾದ “ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿ (PMRBP)”ಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ಗೌರವಿಸಲ್ಪಟ್ಟರು.

ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಸನ್ಮಾನವನ್ನು ನೆರವೇರಿಸಿದರು. ಉಡುಪಿ ವಲಯದ ರಾಜಯೋಗಿನಿ ಬಿ.ಕೆ. ಸುಮಾ, ಬಿ.ಕೆ. ರಘುರಾಮ, ದೀಪಕ್ ಹಾಗೂ ಇತರ ಹಿರಿಯ ಸದಸ್ಯರ ಸಾನ್ನಿಧ್ಯದಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಿಲಾಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಅಣ್ಣಪೂರ್ಣಾ ರಾವ್, ಎನ್.ಎಸ್.ಜಿ. ಕಮಾಂಡೋ ವಿಜಯ್ ಎಸ್. ಪುತ್ರನ್ ಹಾಗೂ ನಿವೃತ್ತ ಸೈನಿಕ ಕೋತಂಡ ರಾಮನ್ ಉಪಸ್ಥಿತರಿದ್ದರು.

ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಈಗ ತನ್ನ ಸುವರ್ಣೋತ್ಸವದ ಹಂತವನ್ನು ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಹೆಮ್ಮೆಯ ಸನ್ಮಾನವನ್ನು ಪಡೆದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಗೆ, ಮುಖ್ಯಶಿಕ್ಷಕಿ ಶ್ರೀಮತಿ ವಿನೋದ ಶೆಟ್ಟಿ , ಅಕಾಡಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಆಡಳಿತಾಧಿಕಾರಿ ಡಾ. ಶ್ರೀಧರ ರಂಗನಾಥ ಪೈ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ರಕ್ಷಕ-ಶಿಕ್ಷಕ ಸಂಘ ಮತ್ತು ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಜೊತೆಗೆ ಶಾಲಾ ಸಮುದಾಯವು ದೀಪೇಶ್ ಅವರನ್ನು ಹಾರ್ದಿಕವಾಗಿ ಅಭಿನಂದಿಸಿ, ಅವರ ಭವಿಷ್ಯದ ಪ್ರಯತ್ನಗಳಿಗೆ ಉಜ್ವಲವಾದ ಯಶಸ್ಸು ಕೋರಿದ್ದಾರೆಂದು ಪ್ರಕಟಣೆಯಲ್ಲಿ ತಿಳಿದ್ದಾರೆ.

 

ಸಾಣೂರು: ಸರಕಾರಿ ಪ. ಪೂ.ಕಾಲೇಜಿನ ಶೌಚಾಲಯ ಉದ್ಘಾಟನೆ ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮ

0

 

ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಂಟಿ ಅನುದಾನದಿಂದ ಗ್ರಾಮ ಪಂಚಾಯತ್ ಸಾಣೂರು ನಿರ್ಮಿಸಿ ಕೊಟ್ಟಿರುವ ಬಾಲಕಿಯರ ಶೌಚಾಲಯದ ಉದ್ಘಾಟನೆಯನ್ನು ಸಾಣೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯುವರಾಜ್ ಜೈನ್ ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೂರ್ವ ವಿದ್ಯಾರ್ಥಿಯಾಗಿದ್ದ ಭಾರತ ಪೆಟ್ರೋಲಿಯಂನ ವಿಶ್ರಾಂತ ಉದ್ಯೋಗಿ ರವಿದಾಸ್ ಭಟ್ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮಾತಗಳನ್ನಾಡಿದರು.

ಸಾಣೂರು ಗ್ರಾಮ ಪಂಚಾಯತಿಯ ಸದಸ್ಯರಾದ ಪ್ರಸಾದ್ ಪೂಜಾರಿ ಅವರು ಮಾತನಾಡುತ್ತಾ, ವಿದ್ಯಾ ಸಂಸ್ಥೆಯ ಸರ್ವಾಂಗೀಣ ಪ್ರಗತಿಗೆ ಸಹಕರಿಸುವುದಾಗಿ ಹೇಳಿದರು.

ವಿವಿಧ ಸಂಘ ಸಂಸ್ಥೆಗಳು ನಡೆಸಿದ ಬೇರೆ ಬೇರೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಕಲಿಯುವಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಾಣೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯನಿ ಲವೀನ ಮೇಲ್ವಿಟ, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಮಾಧವ ಭಂಡಾರ್ಕರ್, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.