
ಅಕಾಡಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಆಡಳಿತದಲ್ಲಿರುವ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈಗೆ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ವಲಯದಲ್ಲಿ ನಡೆದ ಭವ್ಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಅಖಿಲ ಭಾರತ ಮಟ್ಟದ ಶೈಕ್ಷಣಿಕ ಸಾಧನೆ ಹಾಗೂ ಧೈರ್ಯ/ಸಾಹಸ ದ ಕ್ಷೇತ್ರದಲ್ಲಿ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೊಡಮಾಡುವ ಅತ್ಯುನ್ನತ ಗೌರವಯುತ ಪ್ರಶಸ್ತಿಯಾದ “ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿ (PMRBP)”ಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ಗೌರವಿಸಲ್ಪಟ್ಟರು.
ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಸನ್ಮಾನವನ್ನು ನೆರವೇರಿಸಿದರು. ಉಡುಪಿ ವಲಯದ ರಾಜಯೋಗಿನಿ ಬಿ.ಕೆ. ಸುಮಾ, ಬಿ.ಕೆ. ರಘುರಾಮ, ದೀಪಕ್ ಹಾಗೂ ಇತರ ಹಿರಿಯ ಸದಸ್ಯರ ಸಾನ್ನಿಧ್ಯದಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಿಲಾಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಅಣ್ಣಪೂರ್ಣಾ ರಾವ್, ಎನ್.ಎಸ್.ಜಿ. ಕಮಾಂಡೋ ವಿಜಯ್ ಎಸ್. ಪುತ್ರನ್ ಹಾಗೂ ನಿವೃತ್ತ ಸೈನಿಕ ಕೋತಂಡ ರಾಮನ್ ಉಪಸ್ಥಿತರಿದ್ದರು.
ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಈಗ ತನ್ನ ಸುವರ್ಣೋತ್ಸವದ ಹಂತವನ್ನು ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಹೆಮ್ಮೆಯ ಸನ್ಮಾನವನ್ನು ಪಡೆದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಗೆ, ಮುಖ್ಯಶಿಕ್ಷಕಿ ಶ್ರೀಮತಿ ವಿನೋದ ಶೆಟ್ಟಿ , ಅಕಾಡಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಆಡಳಿತಾಧಿಕಾರಿ ಡಾ. ಶ್ರೀಧರ ರಂಗನಾಥ ಪೈ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ರಕ್ಷಕ-ಶಿಕ್ಷಕ ಸಂಘ ಮತ್ತು ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಜೊತೆಗೆ ಶಾಲಾ ಸಮುದಾಯವು ದೀಪೇಶ್ ಅವರನ್ನು ಹಾರ್ದಿಕವಾಗಿ ಅಭಿನಂದಿಸಿ, ಅವರ ಭವಿಷ್ಯದ ಪ್ರಯತ್ನಗಳಿಗೆ ಉಜ್ವಲವಾದ ಯಶಸ್ಸು ಕೋರಿದ್ದಾರೆಂದು ಪ್ರಕಟಣೆಯಲ್ಲಿ ತಿಳಿದ್ದಾರೆ.












