ಉದ್ಯಮಿ ಕೃಷ್ಣರಾಜ ಹೆಗ್ಡೆ(45)ಯವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ತಮ್ಮ ಆತ್ರಾಡಿ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮೃತರು ತಾಯಿ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಉದ್ಯಮಿ ಕೃಷ್ಣರಾಜ ಹೆಗ್ಡೆ(45)ಯವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ತಮ್ಮ ಆತ್ರಾಡಿ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮೃತರು ತಾಯಿ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಕಂದಾಯ, ವೆಚ್ಚ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ಇಲಾಖೆಗಳ ಅಧಿಕೃತ ಭಾಷಾ ಸಮಿತಿಯ ಹಿಂದಿ ಸಲಹಾ ಸಮಿತಿಗೆ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ದಯಾನಂದ ಎನ್ ಬಾಯಾರ್ ಇವರು ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇವರು ಮೂಲತಃ ಕಾಸರಗೋಡು ಜಿಲ್ಲೆಯ ಬಾಯಾರಿನವರಾಗಿದ್ದಾರೆ.
ಇಂದು ಸಂಜೆಯೊಳಗೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸುವಂತೆ ಗೃಹ ಸಚಿವ ಜಿ. ಪರಮೇಶ್ವರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು 24 ಕೊಲೆ ಮಾಡಿದ್ದಾರೆಂದು ತಿಮರೋಡಿ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಸೂಚನೆ ನೀಡಿದರು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಪರಮೇಶ್ವರ್ ಸಂಜೆಯೊಳಗೆ ಅರೆಸ್ಟ್ ಮಾಡುವಂತೆ ಸೂಚನೆ ನೀಡಿದರು. ಸಿಎಂ ವಿರುದ್ಧವೇ ಮಾತನಾಡಿದವನನ್ನಾ ಸುಮ್ನೆ ಬಿಡಬೇಕಾ ಅಂತಲೂ ಪ್ರಶ್ನೆ ಮಾಡಿದರು. ಈ ವೇಳೆ ಅಧಿಕಾರಿಗಳು ಅದು 2023ರ ಮೇನಲ್ಲಿ ಮಾತನಾಡಿದ್ದ ವಿಡಿಯೋ ಅಂತ ಗೃಹ ಸಚಿವರ ಗಮನಕ್ಕೆ ತಂದರು.
ಇನ್ನೂ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ವಿಧಾನ ಸಭೆಯಲ್ಲೂ ಆಗ್ರಹ ಕೇಳಿಬಂದಿತು. ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡುತ್ತಾ, ಸಿಎಂ 24 ಕೊಲೆ ಮಾಡಿದ್ದಾರೆಂಬ ಆರೋಪ ಬಗ್ಗೆ ಪ್ರಸ್ತಾಪ ಮಾಡಿದರು. ಏನ್ ನಡೀತಿದೆ ರಾಜ್ಯದಲ್ಲಿ, ಸಿಎಂ ಮೇಲೆಯೇ ಆಪಾದನೆ ಮಾಡಿದ್ದಾರೆ. ಹಾಗಾದರೆ ಸಿಎಂ ಕೊಲೆಗಾರರಾ? ಆರೋಪ ಮಾಡಿದವರ ಮೇಲೆ ಕ್ರಮ ಏನು? ನೀವು ಮೌನವಾಗಿದ್ರೆ ಏನ್ ತಿಳ್ಕೊಳ್ಳೋದು ನಾವು? ಅಂತ ಪ್ರಶ್ನೆ ಮಾಡಿದರು.
ಇದಕ್ಕೆ ದನಿಗೂಡಿಸಿದ ಶಾಸಕ ಸುರೇಶ್ ಕುಮಾರ್, ಸಿಎಂ ಮೇಲೆ ಧೈರ್ಯವಾಗಿ ಆರೋಪ ಮಾಡಿದ್ದಾನೆ ಆವ್ಯಕ್ತಿ, ಸರ್ಕಾರ ಇದನ್ನು ಹೇಗೆ ಸಹಿಸಿಕೊಳ್ಳುತ್ತೆ? ಸರ್ಕಾರ ಯಾಕೆ ಸುಮ್ಮನಿದೆ? ಅಂತ ಪ್ರಶ್ನಿಸಿದರು.
ಇದಕ್ಕೆ ಉತ್ತರ ಕೊಟ್ಟ ಪರಮೇಶ್ವರ್ ಸರ್ಕಾರ ಅಷ್ಟೊಂದು ಹೆಲ್ಪ್ ಲೆಸ್ ಆಗಿದೆ ಅನ್ಕೊಂಡಿದ್ದೀರಾ? ಅಂತ ತಿರುಗೇಟು ಕೊಟ್ಟರು. ಈ ವೇಳೆ ಸುನೀಲ್ ಕುಮಾರ್ ದೇಶದ ನಂ.1 ಗೃಹ ಸಚಿವರು ಕ್ರಮ ತಗೊಳ್ಳಿ ಅಂತ ಕಾಲೆಳೆದರು. ನಂತ್ರ ಮಾತು ಮುಂದುವರಿಸಿದ ಪರಂ, ಆ ವ್ಯಕ್ತಿ ವಿರುದ್ಧ ಹಲವು ಕೇಸ್ ಇವೆ, ಆ ವ್ಯಕ್ತಿ ಹೆಸರು ಹೇಳಲ್ಲ. ಇಂಥ ವ್ಯಕ್ತಿಯನ್ನು ಸಮಾಜದಲ್ಲಿ ಹೀಗೇ ಸುಮ್ಮನೆ ಬಿಡಲ್ಲ. ಕಾನೂನು ಚಲಾಯಿಸಿ ಕ್ರಮ ತಗೋತೀವಿ. ಏನು ಕ್ರಮ ತಗೋಬೇಕೋ ತಗೋತೀವಿ. ಈಗಾಗಲೇ ಕ್ರಮ ತಗೊಳ್ಳೋಕ್ಕೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
ಪರರ ಸೇವೆಯಿಂದ ನೆಮ್ಮದಿ ಸಾಧ್ಯ:ಕಾರ್ಕಳ ರೋಟರಿ ಪ್ರೆಸಿಡೆಂಟ್ ನವೀನ್ ಚಂದ್ರ ಶೆಟ್ಟಿ.
“ಮಾನವನಲ್ಲಿ ಎಷ್ಟೇ ಹಣವಿದ್ದರೂ, ಎಷ್ಟೇ ಕೀರ್ತಿ ಇದ್ದರೂ ಪರರ ಸೇವೇಗೆ ಜೀವನವನ್ನು ಮುಡಿಪಾಗಿ ಇಟ್ಟರೇ ಮಾತ್ರ ನೆಮ್ಮದಿ ಸಾಧ್ಯ.ಕಾರ್ಕಳ ರೋಟರಿ ಕ್ಲಬ್ ಹಲವಾರು ಜನಹಿತ ಕಾರ್ಯಗಳನ್ನು ನಡೆಸುತ್ತಿರುವ ಸಂಸ್ಥೆಯಾಗಿದೆ.ಸ್ವಚ್ಛತೆಯೊಂದಿಗೆ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಪರಿಸರವನ್ನು ನಾವು ರಕ್ಷಸಿದರೆ ಪರಿಸರವು ನಮ್ಮನ್ನು ರಕ್ಷಣೆ ಮಾಡುತ್ತಾದೆ.ಉಚಿತ ವೈದ್ಯಕೀಯ ಶಿಬಿರ, ರಕ್ತದಾನದಂತಹ ಮಹಾಕಾರ್ಯಗಳು ಕಾರ್ಕಳ ರೋಟರಿ ಕ್ಲಬ್ ವತಿಯಿಂದ ನಡೆದಿವೆ.ಇಂಟರಾಕ್ಟ್ ಕ್ಲಬ್ ನಿಂದ ವಿದ್ಯಾರ್ಥಿಗಳ ಸ್ರಜನಶೀಲತೆಯೊಂದಿಗೆ ಸಮಾಜದ ಭಾಂಧವ್ಯಕೂಡ ಹೆಚ್ಚಾಗುತದೆ.ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪುಗೊಳಿಸುವಲ್ಲಿ ಇಂಟರೆಕ್ಟ್ ಕ್ಲಬ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ” ಎಂದು ಕೆ. ಎಮ್. ಇ. ಎಸ್. ವಿದ್ಯಾಸಂಸ್ಥೆಯ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿ ಸುತಾ ಕಾರ್ಕಳದ ರೋಟರಿ ಪ್ರೆಸಿಡೆಂಟ್ ರೋಟರಿಯೆನ್ ನವೀನ್ ಚಂದ್ರ ಶೆಟ್ಟಿಯವರು ಅಭಿಪ್ರಾಯ ಪಟ್ಟರು.
ರೋಟೇರಿಯನ್ ಜ್ಯೋತಿ ಪದ್ಮನಾಭ ಬಂಡಿಯವರು ತಮ್ಮ ಭಾಷಣದಲ್ಲಿ “ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಇಂಟರಾಕ್ಟ್ ಕ್ಲಬ್ ಸಹಾಯ ಮಾಡುತದೆ. ಉತಮ ನಾಯಕರನ್ನು ಸೃಷ್ಟಿ ಮಾಡುವುದರಲ್ಲಿ ಉತಮ ಮಾರ್ಗದರ್ಶನವನ್ನೂ ನೀಡುತದೆ. ಹಲವಾರು ಬಾರಿ ರಕ್ತದಾನ ಮಾಡಿರುವ ರೋಟೇರಿಯನ್ ಇಕ್ಬಾಲ್ ಅಹಮ್ಮದ್ ಎಲ್ಲಯುವಕರಿಗೂ ಆದರ್ಶ ಪ್ರಾಯ” ಎಂದರು.
ರೋಟರಿ ಕ್ಲಬ್ಬಿನ ಇಂಟರಾಕ್ಟ್ ವಿಭಾಗದ ಕಾರ್ಯದರ್ಶಿ ಬಾಲಕೃಷ್ಣ ದೇವಾಡಿಗ ಮಾತನಾಡಿ ” ಇಂದಿನ ಮಕ್ಕಳು ಇಂಟರಾಕ್ಟ್ ಕ್ಲಬ್ಬಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಸೇರಿ ಸಮಾಜ ಸೇವೆಯ ತರಬೇತಿ ಯನ್ನು ಪಡೆಯಬೇಕು, ಉತಮ ನಾಗರಿಕರಾಗಿ ಹೊರಹೊಮ್ಮಬೇಕು. ” ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಕೆ. ಬಾಲಕೃಷ್ಣರವರು ಮಾತನಾಡಿ ” ಇಂಟರೆಕ್ಟ್ ಕ್ಲಬ್ ವಿದ್ಯಾರ್ಥಿಗಳಿಗೆ ನಾಯಕತ್ವ ವನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತದೆ. ಇಂಟರಾಕ್ಟ್ ಕ್ಲಬ್ ನಡೆಸುವ ಹಲವಾರು ಶಿಬಿರಗಳಲ್ಲಿ ಬೇರೆ ಬೇರೆ ಶಾಲೆಯ ವಿದ್ಯಾರ್ಥಿ ಗಳು ಭಾಗವಹಿಸುವುದರಿಂದ ವಿದ್ಯಾರ್ಥಿ ಗಳಲ್ಲಿ ಸಹಬಾಳ್ವೆ, ಸಹಕಾರ, ಸಹಜೀವನದ ಅರಿವಾಗಿ ಉತಮ ವ್ಯಕ್ತಿ ತ್ವ ನಿರ್ಮಾಣ ವಾಗುವುದರಲ್ಲಿ ಸಂದೇಹವಿಲ್ಲ. ಕಾರ್ಕಳ ರೋಟರಿ ಕ್ಲಬ್ ನಡೆಸುವ ನಿಸ್ವಾರ್ಥ ಸೇವೆ ಇಡೀ ದೇಶಕ್ಕೆ ಮಾದರಿ ” ಎಂದು ಅಭಿಪ್ರಾಯ ಪಟ್ಟರು.
ಪ್ರೌಢ ಶಾಲಾ ಮುಖ್ಯಸ್ತೆ ಶ್ರೀಮತಿ ಯವರು ಸ್ವಾಗತಿಸಿದರು.ಶಿಕ್ಷಕಿ ದೀಕ್ಷಾ ರವರು ವಂದಿಸಿದರು. ಎಸ್. ಶೃತಿ ರಾವ್ ರವರು ಕಾರ್ಯಕ್ರಮ ನಿರ್ವಹಿಸಿದರು.
ಪ್ರಾಥ ಮಿಕ ಶಾಲಾ ಮುಖ್ಯಸ್ತೆ ಲೋಲಿಟ ಡಿಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ರಾದ ಕು. ದಿವ್ಯ ಶೆಟ್ಟಿ, ಕಾರ್ಯದರ್ಶಿ ಆಸ್ಪಿಯಾ, ಕಾರ್ಕಳ ರೋಟರಿ ಕ್ಲಬ್ ಕಾರ್ಯದರ್ಶಿ ರೋಟೇ ರಿಯನ್ ಚೇತನ್ ನಾಯಕ್, ರೋಟೇರಿಯನ್ ಸಾರ್ಜೆಂಟ್ ಆಫ್ ಆರ್ಮ್ ವಸಂತ. ಎಮ್, ರೋಟೇರಿಯನ್ ಶೇಕರ. ಎಸ್, ರೋಟೇರಿಯನ್ ಜೆರಾಲ್ಡ್ ಕುಟಿನೋ, ರೋಟೇರಿಯನ್ ಅರುಣ್ ಕುಮಾರ್ ಶೆಟ್ಟಿ, ರೋಟೇರಿಯನ್ ಶಶಿಧರ್. ಕೆ, ರೋಟೇರಿಯನ್ ಚೇತನ್ ಕುಮಾರ್ ಉಪಸ್ಥಿತರಿದ್ದರು.
ಶಾಸಕ ಸುನಿಲ್ ಕುಮಾರ್ ಅವರು ಶುಕ್ರವಾರ 50ನೇ ಹುಟ್ಟುಹಬ್ಬದ ಪ್ರಯುಕ್ತ 50 ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.
ಪುಲ್ಕೇರಿಯಲ್ಲಿರುವ ಸುಂದರಿಯವರ ಅಶಕ್ತ ಬಡ ಕುಟುಂಬಕ್ಕೆ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಿದರು. ತಮ್ಮ ಪತ್ನಿ ಪ್ರಿಯಾಂಕಾ, ಪುರಸಭೆ ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಜೊತೆ ಮನೆಗೆ ಭೇಟಿ ನೀಡಿ ದೀಪ ಬೆಳಗಿಸಿದರು. ಇನ್ನೆರಡು ಬಡಕುಟುಂಬಗಳಿಗೆ ಹೆಬ್ರಿ ಮತ್ತು ಸಾಣೂರಿನಲ್ಲಿಯೂ ವ್ಯವಸ್ಥಿತವಾಗಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೀಘ್ರ ಹಸ್ತಾಂತರಿಸಲಾಗುವುದು ಎಂದರು.
ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡಕ್ಕೆ 35 ಸಾವಿರ ಮೌಲ್ಯದ ಸ್ವಚ್ಛತಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು. ಅರೋಗ್ಯ ಸಹಾಯಾರ್ಥವಾಗಿ ಹಣಕಾಸು ನೆರವು, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಸಹಿತ ವಿವಿಧ ಸೇವೆ ಕೈಗೊಂಡರು.

‘ಹಲವಾರು ದೇಶಭಕ್ತರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನ ನಮಗೆ ಹಕ್ಕುಗಳೊಂದಿಗೆ ಕರ್ತವ್ಯಗಳನ್ನೂ ಕೊಟ್ಟಿದೆ. ಆದರೆ, ನಾವು ಕರ್ತವ್ಯಗಳನ್ನು ಮರೆತಿದ್ದೇವೆ. ಕಾನೂನುಗಳನ್ನು ಮುರಿಯುವ ಕೆಲಸ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಲೈಸನ್ಸ್ ಇಲ್ಲದೆ, ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ನಾವು ಬದುಕಿ ಇತರರನ್ನು ಗೌವರವಿಸಿ ಬದುಕುವುದೇ ನಿಜವಾದ ಸ್ವಾತಂತ್ರ್ಯ’ ಎಂದು ಸರಕಾರಿ ಪ್ರೌಢಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಶ್ರೀದೇವಿ ಭಾಯಿ ಕೆ. ಎಮ್. ಎ. ಎಸ್ ಸಂಸ್ಥೆ ಏರ್ಪಡಿಸಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.
ಬಳಿಕ ಮಾತನಾಡಿದ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ‘ವಿದ್ಯಾರ್ಥಿಗಳು ಸ್ವಾತಂತ್ರಕ್ಕೆ ಹೋರಾಡಿದ ಭಗತ್ ಸಿಂಗ್, ಸುಭಾಸಚಂದ್ರ ಬೋಸ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಮಂಗಲ್ ಪಾಂಡೆ, ಬಿಪಿನ್ ಚಂದ್ರ ಪಾಲ್, ಬಾಲಗಂಗಾಧರ್ ತಿಲಕ್, ಜಾನ್ಸಿರಾಣಿ ಲಕ್ಶ್ಮೀಬಾಯಿ, ತುಳುನಾಡಿನ ರಾಣಿ ಅಬ್ಬಕ್ಕ ಇತ್ಯಾದಿ ಸ್ವಾತಂತ್ರ್ಯ ಸೇನಾನಿಗಳನ್ನು ಮರೆಯಬಾರದು. ಭಾರತ ಎಲ್ಲಾ ಜಾತಿ ಮತ ಧರ್ಮಗಳನ್ನು ಹೊಂದಿರುವ ಏಕೈಕ ಜಾತ್ಯತೀತ ವಿಶೇಷ ದೇಶ. ನಮ್ಮ ದೇಶದ ಮೇಲೆ ವೈರಿಗಳು ಆಕ್ರಮಣ ಮಾಡಿದಾಗ ನಾವು ಜಾತಿ ಮತ ಬೇಧವಿಲ್ಲದೆ ಅವರನ್ನು ಸದೆಬಡೆಯುತ್ತೇವೆ. ಆಪರೇಷನ್ ಸಿಂಧೂರವೇ ಇದಕ್ಕೆ ಉದಾಹರಣೆ’ ಎಂದರು.
ಗಾಂಧೀಜಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಗಳಿಗೆ ಹೂಗಳನ್ನು ಅರ್ಪಿಸುವುದರ ಮೂಲಕ ಗೌರವರ್ಪಣೆ ನೀಡಲಾಯಿತು. ಮುಖ್ಯ ಅತಿಥಿ ಶ್ರೀದೇವಿ ಭಾಯಿ ರವರಿಗೆ ಪ್ರಾಂಶುಪಾಲರು ಸ್ಮರಣಿಕೆ ನೀಡಿ ಗೌರವಿಸಿದರು.
ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ, ಪ್ರಾಥಮಿಕ ಶಾಲಾ ಮುಖ್ಯಸ್ಥೆ ಲೋಲಿಟಾ ಡಿ’ಸಿಲ್ವಾ, ಕಾಲೇಜಿನ ಎಲ್ಲಾ ಉಪನ್ಯಾಸಕರು, ಆಧ್ಯಾಪಕರು, ಕಚೇರಿ ಸಿಬ್ಬಂದಿ, ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೌಢಶಾಲಾ ಅಧ್ಯಾಪಕಿ ಹಿಲ್ಡಾ ಸ್ವಾಗತಿಸಿದರೆ, ಪ್ರಾಥಮಿಕ ಶಾಲಾ ಶಿಕ್ಷಕಿ ಸುಪ್ರಿಯಾ ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಗುರುಕುಮಾರ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ಕಾರ್ಯಕಾರಿಣಿ ಸಭೆ
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕಾರ್ಯಕಾರಿಣಿ ಸಭೆಯು ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಅವರು ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪಕ್ಷ ಕಾಂಗ್ರೆಸ್, ನಾವು ಕಾಂಗ್ರೆಸ್ ಪಕ್ಷದ ಸದಸ್ಯರು ಎನ್ನಲು ಹೆಮ್ಮೆಯಾಗುತ್ತದೆ, ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸ್ವಾತಂತ್ರ್ಯ ಸೇನಾನಿಗಳ ಹೋರಾಟದ ಫಲವಾಗಿ ನಾವಿಂದು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುವಂತಾಗಿದೆ, ನಮಗಾಗಿ ತ್ಯಾಗ ಬಲಿದಾನಗೈದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಈ ಸಂದರ್ಭದಲ್ಲಿ ನೆನೆಯಬೇಕು ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರ ಪಾಲ್ ನಕ್ರೆಯವರು ಮಾತನಾಡಿ ಬ್ರಿಟೀಷರು ದೇಶದ ಎಲ್ಲಾ ಸಂಪತ್ತನ್ನು ಕೊಳ್ಳೆ ಹೊಡೆದು ದುರ್ಬಲ ಭಾರತವನ್ನು ಕಾಂಗ್ರೆಸ್ ಕೈಗಿತ್ತು ಹೋದರು, ಎಲ್ಲಾ ಕ್ಷೇತ್ರದಲ್ಲಿಯು ಹಿಂದುಳಿದಿದ್ದ ಭಾರತವನ್ನು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಮತ್ತೆ ಜಗತ್ತಿನೆದುರು ಸಶಕ್ತಿಶಾಲಿ ರಾಷ್ಟ್ರವಾಗಿ ನಿರ್ಮಾಣ ಮಾಡಲಾಯಿತು, ಸಾರ್ವಭೌಮ ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ಎಂದು ಸ್ವಾತಂತ್ರ್ಯದ ಸಂದೇಶವನ್ನು ಸಾರಿದರು.
ಹಿರಿಯ ಮುಖಂಡ ನ್ಯಾಯವಾದಿಗಳಾದ ಶೇಖರ ಮಡಿವಾಳ ಅವರು ಮಾತನಾಡಿ ಕಾರ್ಕಳದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಶಾಸಕರು ಸಜ್ಜನ ರಾಜಕಾರಣಿ ದಿ. ಗೋಪಾಲ ಭಂಡಾರಿಯವರ ಪುತ್ಥಳಿ ನಿರ್ಮಾಣದ ಕುರಿತು ಪ್ರಸ್ತಾವನೆಗೈದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಪೂಜಾರಿ ಮುದ್ರಾಡಿ ಹಾಗೂ ಕೆಪಿಸಿಸಿ ಸದಸ್ಯರಾದ ಸುರೇಂದ್ರ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಅಧ್ಯಕ್ಷ ಶುಭದ ರಾವ್ ಮಾತನಾಡಿ ಅತಿ ಶೀಘ್ರದಲ್ಲಿ ಕಾರ್ಕಳದಲ್ಲಿ ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ಥಳಿ ನಿರ್ಮಾಣದ ಕಾರ್ಯವನ್ನು ಸರ್ವರ ಸಹಕಾರದೊಂದಿಗೆ ಕೈಗೊಳ್ಳಲಾಗುವುದು ಎಂದರು. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪಕ್ಷ ಕಾಂಗ್ರೆಸ್, ಇಂದು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷನಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅತ್ಯಂತ ಹೆಮ್ಮೆಯಾಗುತ್ತದೆ ಎಂದರು, ಹಾಗೂ ಕಾರ್ಕಳ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಅತ್ಯಂತ ಬಲಿಷ್ಠವಾಗುತ್ತಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾದ ದೇವದಾಸ್.ಕೆ ಅವರಿಗೆ ಆದೇಶ ಪತ್ರವನ್ನು ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾದ್ಯಕ್ಷರಾದ ಸುಧಾಕರ ಕೋಟ್ಯಾನ್, ಇಂಟೆಕ್ ಅಧ್ಯಕ್ಷ ಕಿರಣ್ ಹೆಗ್ಡೆ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಬ್ಲಾಕ್ ಉಪಾಧ್ಯಕ್ಷರಾದ ಜಾರ್ಜ್ ಕ್ಯಾಸ್ಟಲಿನೊ, ಕೆಪಿಸಿಸಿ ರೈತ ಘಟಕದ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಕುಕ್ಕುಂದೂರು, ಕೋಶಾಧಿಕಾರಿ ಉಮೇಶ್ ರಾವ್ ಬಜಗೋಳಿ, ಕುಕ್ಕುಂದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಉಷಾ.ಕೆ, ಸೊಸೈಟಿ ಅಧ್ಯಕ್ಷರಾದ ಸಿರಿಯಣ್ಣ ಶೆಟ್ಟಿ, ಜಾನ್ ಡಿ’ಸಿಲ್ವಾ, ಮಾಜಿ ಬ್ಲಾಕ್ ಅದ್ಯಕ್ಷ ಸದಾಶಿವ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಸೇವಾದಳದ ಅಬ್ದುಲ್ ಸಾಣೂರು, ಕಾನೂನು ಘಟಕದ ರೆಹಮತ್ತುಲ್ಲಾ, ಪ.ಪಂ ಅದ್ಯಕ್ಷ ಕಿರಣ್ ನಾಯ್ಕ, ಮೀನುಗಾರ ಘಟಕದ ಮುರಳಿ ರಾಣೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಘಟಕಗಳ ಅಧ್ಯಕ್ಷರು, ಚುನಾಯಿತ ಜನಪ್ರತಿನಿಧಿಗಳು, ನಾಮನಿರ್ದೇಶಿತ ಸದಸ್ಯರು, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಬ್ಲಾಕ್ ಪಧಾದಿಕಾರಿಗಳು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ರಮೇಶ್ ನಿಟ್ಟೆ ಅವರು ದೇಶಭಕ್ತಿ ಗೀತೆಯನ್ನು ಹಾಡಿದರು, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸ್ವಾಗತಿಸಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ ವಂದನಾರ್ಪಣೆಗೈದರು, ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಕ್ಲಬ್ ಕಾರ್ಕಳ ಇವರು ಮಾಡುವ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ. ಕಾರ್ಕಳದಲ್ಲಿ ಶೈಕ್ಷಣಿಕ ಆರೋಗ್ಯ ಮತ್ತು ಸಮುದಾಯ ಸೇವೆಗಳನ್ನು ಮಾಡಿಕೊಂಡು ಬರುತ್ತಿರುವ ರೋಟರಿ ಸಂಸ್ಥೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಹೇಳಿದರು.ಅವರು ಕಾರ್ಕಳ ಮುಖ್ಯ ಬಸ್ಸು ನಿಲ್ದಾಣದಲ್ಲಿ ನಿರ್ಮಿಸಿದ ವಕೀಲ ವಾಸುದೇವ ಕಾಮತ್ ರೋಟರಿವೃತ್ತವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಮ್ಮ ತಂದೆ ವಕೀಲ ವಾಸುದೇವ ಕಾಮತ್ ರವರ ಹೆಸರಿನ ವೃತ್ತದ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳಾದ ಕೆ. ಕಮಲಾಕ್ಷ ಕಾಮತ್ ಲೆಕ್ಕಪರಿಶೋಧಕರು ಮಾತನಾಡುತ್ತಾ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಕೆಲಸ ಕಾರ್ಯಗಳು ಪ್ರಶಂಸಣೀಯವಾಗಿದ್ದು, ಸಮಾಜಕ್ಕೆ ಇನ್ನು ಹೆಚ್ಚಿನ ಸೇವೆಯು ಲಭಿಸುವಂತಾಗಲಿ ಎಂದರು.
ವೇದಿಕೆಯಲ್ಲಿ ಕಾರ್ಕಳ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಪುರಸಭೆಯ ಸ್ಥಳೀಯ ಸದಸ್ಯೆ ಸುಮಾ ಕೇಶವ್, ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜ್, ವಲಯ ಸೇನಾನಿ ಜಾನ್ ಆರ್ ಡಿ’ಸಿಲ್ವ, ಮೇಜರ್ ಡೋನರ್ ಸುವರ್ಣ ನಾಯಕ್, ಅರುಣ್ ಪುರಾಣಿಕ್, ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಕ್ಲಬ್ ನ ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ. ನಿರೂಪಿಸಿದರು. ನಿಕಟ ಪೂರ್ವ ಅಧ್ಯಕ್ಷ ಇಕ್ಬಾಲ್ ಅಹಮದ್ ವಂದಿಸಿದರು.
ಬಿಹಾರದಲ್ಲಿ ಆಗಸ್ಟ್ 1ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ‘ಸತ್ತೋಗಿದ್ದಾರೆ’ ಎಂದು ಚುನಾವಣಾ ಆಯೋಗ ಘೋಷಿಸಿರುವ ಏಳು ಜನರ ಗುಂಪೊಂದು ಆ.13 ರಂದು ರಾಹುಲ್ ಗಾಂಧಿ ದೆಹಲಿಯಲ್ಲಿ ಭೇಟಿಯಾಗಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ದದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ, ಏಳು ಜನರ ಗುಂಪು ಬಿಹಾರದಿಂದ ದೆಹಲಿಗೆ ಪ್ರಯಾಣಿಸಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಜೀವನದಲ್ಲಿ ಅನೇಕ ಆಸಕ್ತಿದಾಯಕ ಅನುಭವಗಳು ಆಗಿವೆ. ಆದರೆ, ‘ಸತ್ತ ಜನರೊಂದಿಗೆ’ ಟೀ ಕುಡಿಯುವ ಅವಕಾಶ ಎಂದಿಗೂ ಸಿಕ್ಕಿರಲಿಲ್ಲ. ಈ ವಿಶಿಷ್ಟ ಅನುಭವಕ್ಕಾಗಿ ಚುನಾವಣಾ ಆಯೋಗಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಜರಗಿತು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದವರು ಜಗತ್ತಿನಲ್ಲಿ ಸ್ವಾರ್ಥರಹಿತ ಸಂಬಂಧವೆಂದರೆ ಅದು ಅಣ್ಣ ತಂಗಿಯರ ಸಂಬಂಧ ಹೀಗಾಗಿ ಶ್ರಾವಣ ಹುಣ್ಣಿಮೆಯ ವಿಶೇಷ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸುತ್ತಾರೆ ಎಂದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ ಭಾರತ ದೇಶದ ಧಾರ್ಮಿಕ ಹಬ್ಬವಾಗಿರುವ ಈ ಹಬ್ಬದಲ್ಲಿ ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡ ಸಹೋದರರು ಸದಾ ನಿಮ್ಮ ರಕ್ಷಣೆ ನಮ್ಮ ಹೊಣೆ ಎಂಬ ಮಾತನ್ನು ಪಾಲಿಸಿಕೊಂಡು ಹೋಗುವ ಸಂಪ್ರದಾಯಕ್ಕೆ ಈ ಹಬ್ಬ ಸಾಕ್ಷಿಯಾಗಿದೆ ಎಂದರು.
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಮಹಿಳಾ ಸದಸ್ಯರು ಸಂಘದ ಸಹೋದರ ಸದಸ್ಯರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ, ಸಿಹಿ ತಿನ್ನಿಸಿ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸ್ರಬೈಲು, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸತೀಶ್ ಪೂಜಾರಿ, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ, ಕಾರ್ಯಕ್ರಮದ ನಿರ್ದೇಶಕರು ಆರತಿ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಸುದರ್ಶನ್ ಕುಂದರ್, ಪ್ರದೀಪ್ ಸುವರ್ಣ, ಹರಿಣಿ ಪೂಜಾರಿ, ವೀಣಾ ಪೂಜಾರಿ, ಸುಲೋಚನಾ ಕೋಟ್ಯಾನ್, ವೀಣಾ ಆಚಾರ್ಯ, ಪದ್ಮಶ್ರೀ ಪೂಜಾರಿ, ಪುಷ್ಪ ಕುಲಾಲ್ ಮೊದಲಾದವರಿದ್ದರು.