Home Blog Page 78

ಕಾರ್ಕಳ:ಜೈ ತುಳುನಾಡು ಕಾರ್ಲ ವಲಯ ಸಾಮಾನ್ಯ ಸಭೆ

0

ಕಾರ್ಕಳ:ಜೈ ತುಳುನಾಡು ಕಾರ್ಲ ವಲಯ ಸಾಮಾನ್ಯ ಸಭೆ

ಜೈ ತುಲುನಾಡ್ (ರಿ.) ಕಾರ್ಲ ವಲಯದ 2024-25 ಸಾಲಿನ ಸಾಮಾನ್ಯ ಸಭೆಯು ಕಾರ್ಕಳದ ಶ್ರೀ ಅನಂತ ಶಯನ ಕ್ಷೇತ್ರದಲ್ಲಿ ಜೈ ತುಲುನಾಡ್ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ ಇವರ ನೇತೃತ್ವದಲ್ಲಿ ನಡೆಯಿತು.

ಕಾರ್ಲದಲ್ಲಿ ಜೈ ತುಲುನಾಡ್ (ರಿ.) ಸಂಘಟನೆಯ ಘಟಕದ ರಚನೆ ಹಾಗೂ ಕಾರ್ಲ ತಾಲೂಕಿನಲ್ಲಿ ತುಲು ಭಾಷೆ ಮತ್ತು ಲಿಪಿಯ ಬೆಳವಣಿಗೆಯ ಬಗ್ಗೆ ಯೋಜನೆಗಳನ್ನು ರೂಪಿಸಲಾಯಿತು.

ಜೈ ತುಲುನಾಡ್ (ರಿ.) ಸಂಘಟನೆಯ ಸದಸ್ಯರಾದ ರವಿಚಂದ್ರ ಕಾರ್ಲ, ಅಶ್ವಿನಿ ಕಾರ್ಲ, ಮಹೇಶ್ ಮೊಯ್ಲಿ, ನಿತಿನ್ ನಲ್ಲೂರು, ವೈಶಾಖ್ ಕಾರ್ಕಳ, ಶರತ್‌ರಾಜ್ ಕಡಬ, ಪ್ರಶಾಂತ್, ನಿಶಾ ಶೆಟ್ಟಿ, ಸುದಿತ್ ಶಿವಪುರ, ಸ್ಥಾಪಕ ಸಮಿತಿಯ ಸದಾಶಿವ ಮುದ್ರಾಡಿ, ಸುಮಂತ್ ಹೆಬ್ರಿ ಉಪಸ್ಥಿತರಿದ್ದರು.

ರಿಷಿಕಾ ಕುಂದೇಶ್ವರಗೆ ಸಿಎಂ ಮೆಚ್ಚುಗೆ

0

ರಿಷಿಕಾ ಕುಂದೇಶ್ವರಗೆ ಸಿಎಂ ಮೆಚ್ಚುಗೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ ಆಶೀರ್ವಾದ ಪಡೆದರು.

ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ. ಪ್ರಭಾಕರ ಅವರ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿ ಮಾಡಿದರುರಿಷಿಕಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ ವಿ ಪ್ರಭಾಕರ್, ಜಿತೇಂದ್ರ ಕುಂದೇಶ್ವರ ಇದ್ದರು.

ಪ್ರೆಸ್ ಕ್ಲಬ್ ಗೌರವ
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ರಿಷಿಕಾ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ. ವಿ. ಪ್ರಭಾಕರ, ವಸತಿ ಸಚಿವರ ಮಾಧ್ಯಮ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ, ಬಹುರೂಪಿ ಸಂಸ್ಥೆಯ ಅಧ್ಯಕ್ಷ ಜಿಎನ್ ಮೋಹನ್, ಪ್ರಸಿದ್ಧ ಯಕ್ಷಗಾನ ಕಲಾವಿದ ಜಬ್ಬಾರ್ ಸುಮೋ , ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಜಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್, ಕೋಶಾಧಿಕಾರಿ ವಾಸುದೇವ ಹೊಳ್ಳ ಇದ್ದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ:
ಬೆಂಗಳೂರು: ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಮಂದಿರದಲ್ಲಿ ನಬಿ ರೋಷನ್ ಮತ್ತು ಶಾಫಿಯ ಪ್ರಕಾಶನ ವತಿಯಿಂದ ರಿಷಿಕಾ ಕುಂದೇಶ್ವರ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಮಾಜಿ ಡಿಐಜಿಪಿ ರಾಜಪ್ಪ ಮತ್ತಿತರರು ಇದ್ದರು.

ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಶೂನ್ಯವಲ್ಲ ಕಮಿಷನ್ ಶೂನ್ಯ ಗ್ಯಾರಂಟಿ ಯೋಜನೆಯ ಮೂಲಕ ಕ್ಷೇತ್ರಕ್ಕೆ ರೂ 250 ಕೋಟಿ ಬಿಡುಗಡೆ ಅಭಿವೃದ್ಧಿಯಲ್ಲವೇ?-ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್

0

ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಶೂನ್ಯವಲ್ಲ ಕಮಿಷನ್ ಶೂನ್ಯ

ಗ್ಯಾರಂಟಿ ಯೋಜನೆಯ ಮೂಲಕ ಕ್ಷೇತ್ರಕ್ಕೆ ರೂ 250 ಕೋಟಿ ಬಿಡುಗಡೆ ಅಭಿವೃದ್ಧಿಯಲ್ಲವೇ?

ಅಭಿವೃದ್ಧಿಯೆಂದರೆ ರಸ್ತೆ ಸೇತುವೆ ಕಟ್ಟಡ ಭೌಗೋಳಿಕ ಅಭಿವೃದ್ಧಿ ಮಾತ್ರವಲ್ಲ ಅಭಿವೃದ್ಧಿ ಎಂದರೆ ರಾಜ್ಯದ ಜನರ ಜೀವನ ಮಟ್ಟ ಸುಧಾರಣೆಯ ಮೂಲಕ ನಾಡಿನ ಜನರ ಸರ್ವತೋಮುಖ ಏಳಿಗೆಯೂ ಅಭಿವೃದ್ಧಿಯಾಗಿದೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಪಡೆದವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಶೂನ್ಯವಾಗಿದ್ದೇ ಬಿಜೆಪಿ ಶಾಸಕರ ಚಿಂತೆಗೆ ಕಾರಣವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ 56,೦೦೦ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದರಿಂದಾಗಿ ಸರಾಸರಿ 250 ಕೋಟಿ ರೂಪಾಯಿಯಷ್ಟು ಹಣವು ಪ್ರತೀ ವರ್ಷವೂ ರಾಜ್ಯದ 224 ಕ್ಷೇತ್ರಕ್ಕೂ ಹರಿದು ಬರುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತೀ ಕ್ಷೇತ್ರಕ್ಕೂ ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ರಾಜ್ಯ ಸರ್ಕಾರವು ನೇರವಾಗಿ ಜನರಿಗೆ ತಲುಪಿಸುತ್ತಿದೆ, ಪಂಚ ಗ್ಯಾರಂಟಿಗಳ ಮೂಲಕ ಜನರ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ವಿದ್ಯುತ್, ಸಾರಿಗೆ ವ್ಯವಸ್ಥೆಯನ್ನು ಪೂರೈಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಯಶಸ್ವಿಯಾಗಿದೆ.

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದಾಗಿ ಜನರ ಮುಖದಲ್ಲಿ ಸಂತಸದ ನಗು ಕಾಣಿಸುತ್ತಿದ್ದು ಸ್ವಂತ ಅಭಿವೃದ್ಧಿಯ ಕನಸಿನಲ್ಲಿದ್ದ ವಿರೋಧ ಪಕ್ಷದವರಿಗೆ ಕಮಿಷನ್ ಶೂನ್ಯದಿಂದಾಗಿ ಮುಖದಲ್ಲಿ ಚಿಂತೆ ಎದ್ದು ಕಾಣುತ್ತಿದೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧನ್ಯವಾದಗಳು

ಇನ್ನಾ ವಿದ್ಯುತ್‌ ಟವರ್‌ ನಿರ್ಮಾಣದ ವಿರುದ್ಧ ಹೋರಾಡುವುದನ್ನು ಬಿಟ್ಟು ರಾಜಕೀಯ ಬೇಳೆ ಬೇಯಿಸುತ್ತಿರುವ ಉದಯ್‌ ಶೆಟ್ಟಿ ಮುನಿಯಾಲು ವಿರುದ್ಧ ನವೀನ್‌ ನಾಯಕ್‌ ಆಕ್ರೋಶ

0
ಇನ್ನಾ ವಿದ್ಯುತ್‌ ಟವರ್‌ ನಿರ್ಮಾಣದ ವಿರುದ್ಧ ಹೋರಾಡುವುದನ್ನು ಬಿಟ್ಟು ರಾಜಕೀಯ ಬೇಳೆ ಬೇಯಿಸುತ್ತಿರುವ ಉದಯ್‌ ಶೆಟ್ಟಿ ಮುನಿಯಾಲು ವಿರುದ್ಧ ನವೀನ್‌ ನಾಯಕ್‌ ಆಕ್ರೋಶ
ಇನ್ನಾ ಗ್ರಾಮದಲ್ಲಿ ವಿದ್ಯುತ್‌ ಟವರ್‌ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧದ ನಡುವೆ ಅಧಿಕಾರಿಗಳು ಯಾರಿಗೂ ಮಾಹಿತಿಯನ್ನು ನೀಡದೇ, ಏಕಾಏಕಿ ಟವರ್‌ ನಿರ್ಮಾಣಕ್ಕೆ ಮುಂದಾಗಿರುವ ವಿಚಾರ ತಿಳಿದ ಕೂಡಲೆ ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ಕಾರ್ಯಕರ್ತರಾದ ನಾವೆಲ್ಲರೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದೊಂದಿಗೆ ಮಾತ್ರ ಸ್ಥಳಕ್ಕೆ ಭೇಟಿ ನೀಡಿ ರೈತರ ಹೋರಾಟದೊಂದಿಗೆ ಭಾಗಿಯಾದೆವು. ಆದರೆ ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ಉದಯ್‌ ಕುಮಾರ್‌ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಆದಂತಹ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವುದನ್ನು ಬಿಟ್ಟು, ನೇರವಾಗಿ ಒಂದು ಪಕ್ಷದ ಮೇಲೆ ಆರೋಪ ಹೊರಿಸಿರುವುದು ಅತ್ಯಂತ ಖಂಡನೀಯ ಎಂದು ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಕ್ಷೇತ್ರಾಧ್ಯಕ್ಷ,\ ನವೀನ ನಾಯಕ್ ತಿಳಿಸಿದ್ದಾರೆ.
ಈ ಕಾಮಗಾರಿಯು ಯಾವ ಪಕ್ಷದ ಆಡಳಿತ ಸಂದರ್ಭದಲ್ಲಿಯೇ ಆಗಿರಲಿ, ಅಥವಾ ಕೇಂದ್ರ/ರಾಜ್ಯ ಯಾವುದೇ ಸರ್ಕಾರ ನಡೆಸಿರಲಿ, ಇದರಿಂದ ರೈತರಿಗೆ ಸಮಸ್ಯೆ ಆದಲ್ಲಿ ಅದನ್ನು ಪಕ್ಷಾತೀತವಾಗಿ ಖಂಡಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಇದಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡುವ ಅನಿವಾರ್ಯವಿದೆ. ಆದರೆ ಇಂತಹ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ತನ್ನ ರಾಜಕೀಯ ಬೇಳೆ ಬೇಯಿಸುವುದರಲ್ಲಿ ನಿರತರಾದಂತಹ ಕಾಂಗ್ರೆಸ್‌ ನಾಯಕರ ಈ ನಡೆ, ಅಲ್ಲಿರುವ ರೈತರಿಗೂ ಇರಿಸುಮುರಿಸು ಆಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ಹಿಂದೆಯೂ ಪ್ರತಿಭಟನೆಯಾದ ಸಂದರ್ಭದಲ್ಲಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಆಗಮಿಸಿ, ರೈತರ ವಿಶ್ವಾಸವನ್ನು ತೆಗೆದುಕೊಂಡು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂಬ ಭರವಸೆಯ ಮಾತನ್ನು ಹೇಳಿರುತ್ತಾರೆ. ಆದರೆ ಇಂದು ನೇರವಾಗಿ ಈಗಿನ ಇಂಧನ ಸಚಿವರಾದ ಕೆಜೆ ಜಾರ್ಜ್‌ರವರ ಆದೇಶದ ಮೇರೆಗೆ ಈ ಕಾಮಗಾರಿ ಆರಂಭವಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಈ ತರಹ ರಾಜಕೀಯ ಬೇಳೆ ಬೇಯಿಸಿಕೊಂಡರೆ ಇದರಿಂದ ಲಾಭ ಪಡೆಯುವುದು ಬಂಡವಾಳಶಾಹಿಗಳು, ದ್ರೋಹಕ್ಕೆ ಒಳಗಾಗುವುದು ಮಾತ್ರ ಬಡ ರೈತರು ಎಂಬುವುದನ್ನು ನಾವು ಮನಗಾಣಬೇಕು.
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗುವುದನ್ನು ಮನಗಂಡು ಕಾರ್ಕಳ ಶಾಸಕರಾದ ಶ್ರೀ ವಿ ಸುನಿಲ್‌ ಕುಮಾರ್‌ ರವರು ಸರ್ಕಾರದಲ್ಲಿ ಒತ್ತಡ ಹೇರುವ ಮೂಲಕ ಕಾಮಗಾರಿ ನಡೆಯದಂತೆ ತಡೆಹಿಡಿದಿದ್ದರು. ಪ್ರಸ್ತುತ ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದೆ. ಮಾನ್ಯ ಉದಯ್‌ ಕುಮಾರ್‌ ಶೆಟ್ಟಿಯವರೇ, ನಿಮ್ಮದೇ ಸರ್ಕಾರವಿದೆ. ಆದರೆ ಏಕಾಏಕಿ ಯಾರಿಗೂ ಮಾಹಿತಿ ನೀಡದೇ ಕಾಮಗಾರಿ ಏಕೆ ಆರಂಭವಾಯಿತು? ನಿಮ್ಮ ಪಕ್ಷದಲ್ಲಿ ಅಧಿಕಾರವಿದೆ. ನಿಮ್ಮ ಸಚಿವರಿಗೆ, ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿ ಕಾಮಗಾರಿ ನಿಲ್ಲಿಸಬಹುದಿತ್ತಲ್ಲವೇ? ಅದನ್ನು ಬಿಟ್ಟು ಸ್ಥಳಕ್ಕೆ ಬಂದು ರೈತರ ಹೋರಾಟದಲ್ಲಿ ರಾಜಕೀಯ ಬೆರೆಸುವುದು ಎಷ್ಟು ಸರಿ? ನಿಮಗೆ ನಿಮ್ಮ ಪಕ್ಷದಲ್ಲಿ ಅಸ್ಥಿತ್ವ ಇಲ್ಲವೇ?
ಭಾರತೀಯ ಜನತಾ ಪಾರ್ಟಿಯ ನಾಯಕರಾದ ನಮಗೆ ರೈತರ ಹೋರಾಟದಲ್ಲಿ ಯಾವುದೇ ರಾಜಕೀಯ ಮಾಡಲು ಆಸಕ್ತಿಯಿಲ್ಲ. ನಮ್ಮ ಹೋರಾಟ ಏನಿದ್ದರೂ ರೈತರ ಪರ, ಜನಪರ ಅಷ್ಟೇ. ಇಂತಹ ವಿಚಾರದಲ್ಲಿ ರಾಜಕೀಯ ಪಕ್ಷ ಯಾವುದೇ ಇರಲಿ, ರಾಜಕೀಯ ಮಾಡಲು ಹೊರಟರೆ ತೊಂದರೆಗೆ ಒಳಗಾಗುವುದು ಸಾಮಾನ್ಯ, ಬಡ ರೈತರು. ರೈತರನ್ನು ಬಲಿಕೊಟ್ಟು ರಾಜಕೀಯ ಮಾಡುವುದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ.
ಇಂತಹ ವಿಚಾರದಲ್ಲಿ ನಿಮ್ಮ ಚಿಲ್ಲರೆ ರಾಜಕೀಯ ಬಿಟ್ಟು ಪಕ್ಷಾತೀತವಾಗಿ ಹೋರಾಟ ಮಾಡೋಣ. ಮುಂದಿನ ದಿನಗಳಲ್ಲಿ ರೈತರಿಗೆ ಈ ವಿಚಾರದಲ್ಲಿ ನ್ಯಾಯ ಒದಗದಿದ್ದಲ್ಲಿ ಭಾರತೀಯ ಜನತಾ ಪಾರ್ಟಿ ರೈತರೊಂದಿಗೆ ಇದ್ದು, ಯಾವ ರೀತಿಯ ಹೋರಾಟಕ್ಕೂ ಸಿದ್ಧವಿದೆ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ. ಏನೇ ಇರಲಿ, ರೈತರಿಗೆ ನ್ಯಾಯ ಸಿಗಲಿ ಎಂಬುದು ಕಾರ್ಕಳ ಭಾರತೀಯ ಜನತಾ ಪಾರ್ಟಿಯ ಆಶಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ರವೀಂದ್ರ ಶೆಟ್ಟಿ ಪ್ರಾಯೋಜಕತ್ವದಲ್ಲಿ ‘ಕರುನಾಡ ಸಿರಿ’ ಪ್ರಶಸ್ತಿ ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆ

0

ಡಾ.ರವೀಂದ್ರ ಶೆಟ್ಟಿ ಪ್ರಾಯೋಜಕತ್ವದಲ್ಲಿ ‘ಕರುನಾಡ ಸಿರಿ’ ಪ್ರಶಸ್ತಿ

ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆ

ಕಾರ್ಕಳ:ಡಾ.ರವೀಂದ್ರ ಶೆಟ್ಟಿ ಬಜಗೋಳಿ ಪ್ರಾಯೋಜಿಸಿರುವ ಪ್ರಸಕ್ತ ವರ್ಷದ ಕಾರ್ಕಳ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆಗೆ ನೀಡಲಾಗುವ ‘ಕರುನಾಡ ಸಿರಿ’ ಪ್ರಶಸ್ತಿಗೆ ಕಲ್ಯಾ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.

ಕಾರ್ಕಳ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆ ಹಿರಿಮೆಯೊಂದಿಗೆ ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡಿದ್ದು, ಶಿರ್ಲಾಲಿನ ನಾಲ್ಕೂರು ನರಸಿಂಗರಾವ್ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಡಿ.6ರಂದು ನಡೆಯುವ ಕಾರ್ಕಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನವಾಗಲಿದೆ.

”ಸರ್ಕಾರೀ ಶಾಲೆಗಳಿಗೆ ಉತ್ತೇಜನ ನೀಡಬೇಕು ಅನ್ನುವ ಉದ್ದೇಶದಿಂದ ‘ಕರುನಾಡ ಸಿರಿ’ ಪ್ರಶಸ್ತಿಯನ್ನು ನೀಡುತ್ತಿದ್ದೇವೆ.ಪ್ರಶಸ್ತಿಗೆ ಶಾಲೆಗಳನ್ನು ಆಯ್ಕೆ ಮಾಡುವುದು ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್.ಪ್ರಶಸ್ತಿ 10,000ರೂ ನಗದು ಮತ್ತು ಸ್ಮರಣಿಕೆ ನೀಡುತ್ತಿದೆ.ಸರ್ಕಾರೀ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎನ್ನುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ.ಕಳೆದ ವರ್ಷ ನಲ್ಲೂರು ಶಾಲೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಈ ವರ್ಷ ಕಲ್ಯಾ ಶಾಲೆ ಪಡೆದುಕೊಂಡಿದೆ”.

-ಡಾ.ರವೀಂದ್ರ ಶೆಟ್ಟಿ ಬಜಗೋಳಿ

ಶಾಲೆಯೊಂದು ತೆರೆದರೆ ಊರೊಂದು ಸುಸಂಸ್ಕೃತ ಗೊಂಡಂತೆ ಎಂಬ ಮಾತಿನಂತೆ ಕಲ್ಯಾ ಶಾಲೆಯು ಸಾರ್ಥಕ ನೂರು ಸಂವತ್ಸರವನ್ನು ಆಚರಿಸಿದ ಶತಮಾನೋತ್ಸವ ಶಾಲೆಯೆಂಬ ಶ್ರೇಷ್ಠ ಹೆಗ್ಗಳಿಕೆ ಈ ಶಾಲೆಗೆ ಸಂದಿದೆ. ಈ ಶಾಲೆಯಲ್ಲಿ ಅಂದಿನಿಂದ ಇಂದಿನವರೆಗೆ ಅದೆಷ್ಟೋ ವಿದ್ಯಾರ್ಥಿಗಳು ಬಡವರಿರಲಿ ಶ್ರೀಮಂತರಿರಲಿ ಕನ್ನಡ ಮಾತೃಭಾಷೆಯಲ್ಲಿ ಒಂದೇ ತಾಯ ಮಕ್ಕಳೆಂದು ವಿದ್ಯೆಯನ್ನು ಕಲಿತು ನಾಡಿಗೆ ದೇಶಕ್ಕೆ ಶ್ರೇಷ್ಠ ವ್ಯಕ್ತಿಗಳಾಗಿ ಮೂಡಿ ಬಂದಿರುತ್ತಾರೆ‌. ಒಂದು ಪುಟ್ಟ ಹಳ್ಳಿಯೆನಿಸಿದ ಕಲ್ಯಾ ಊರಿನಲ್ಲಿ ಅಂದು ಶಾಲೆಯ ಅವಶ್ಯಕತೆ ಇದ್ದಾಗ ಊರ ಹಿರಿಯ ಪ್ರಾಥಃಸ್ಮರಣೀಯ ಮಹನೀಯರು ಶುಭಸ್ಯಂ ಶೀಘ್ರಂ ಎಂದು ಭಾವಿಸಿ ತೆರೆದ ಶಾಲೆಯು ಇಂದು ಸಾಗಿ ಬಂದ ಹಾದಿಯ ಹೆಜ್ಜೆ ಗುರುತು ಆದರ್ಶವಾದುದು ಆನುಸರಣೀಯವಾದು.

ಇಂದು ಕೂಡ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆದರ್ಶ ಶಾಲಾಭಿವೃದ್ಧಿ ಸಮಿತಿ ಶಾಲಾ ಪೂರ್ವ ವಿದ್ಯಾರ್ಥಿಗಳು ಉದಾರ ದಾನಿಗಳು ಆಭಿಮಾನದ ಪೋಷಕರು ನುರಿತ ಆದರ್ಶ ಶಿಕ್ಷಕ ಬಂಧುಗಳು ಅಃತೆಯೇ ದೇಶದ ಭಾವಿ ಪ್ರಜೆಗಳೆನಿಸಿದ ವಿದ್ಯಾರ್ಥಿ ವೃಂದ ಈ ಶಾಲೆಯ ಸೊಬಗಿಗೆ ದೊಡ್ಡ ಆಸ್ತಿಯೆನಿಸಿದೆ.

ಇತ್ತೀಚೆಗೆ ದೇಶದ ಯೋಧ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ರವರ ಸ್ಮಾರಕ ನಿರ್ಮಾಣಗೊಂಡು ಬಿಸಿರಕ್ತದ ಗಂಡುಗಲಿ ಸೈನಿಕನ ದೇಶಪ್ರೇಮ ಮತ್ತು ಬಲಿದಾನದ ಪಾವಿತ್ರ್ಯತೆಯನ್ನು ವಿದ್ಯಾರ್ಥಿಗಳಿಗೆ ಆದರ್ಶವೆಂದು ಕಲಿಸಿಕೊಟ್ಟಿದೆ.

ಹಾಗಾಗಿ ಶಾಲೆಯ ಶತ ವರ್ಷದ ಸಂಭ್ರಮ ಶಾಲೆಯ ಮೂಲಭೂತ ಸೌಕರ್ಯ ಹಾಗೂ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಕನ್ನಡ ಮಾತೃಭಾಷಾ ಅಭಿಮಾನ ಕೈಗೊಂಡ ಕನ್ನಡ ನಾಡು ನುಡಿಯ ಕೈಕಂರ್ಯವನ್ನು ಪರಿಣಿಗಣಿಸಿ ಶಿಕ್ಷಣ ಪ್ರೇಮಿ ಡಾ ರವೀಂದ್ರ ಶೆಟ್ಟಿ ಬಜಗೋಳಿ ಇವರು ಪ್ರಾಯೋಜಿಸಿದ ಕರುನಾಡ ಸಿರಿ ಉತ್ತಮ ಶಾಲೆ ಪ್ರಶಸ್ತಿಯನ್ನು ಶಿರ್ಲಾಲಿನಲ್ಲಿ ನಡೆದ ಪ್ರೊ ಕೆ ಗುಣಪಾಲ ಕಂಡಬರ ಸಮ್ಮೇಳನ ಸರ್ವಧ್ಯಾಕ್ಷತೆಯಲ್ಲಿ ಸೇರಿದ ಸಮಸ್ತ ಕನ್ನಡ ಮನಸ್ಸುಗಳ ಉಪಸ್ಥಿತಿಯಲ್ಲಿ ನಡೆಯುವ ಕಾರ್ಕಳ ತಾಲೂಕು ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಾರ್ಕಳ ಪ್ರದಾನ ಮಾಡುತ್ತಿದೆ.

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆಯ ನೋಟಿಸ್ ಮಾಜಿ ಪುರಸಭಾ ಸದಸ್ಯ ವಿವೇಕ್ ಶೆಣೈ ಖಂಡನೆ

0

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆಯ ನೋಟಿಸ್ ಖಂಡನೀಯ- ಪ್ರತಿಭಟನೆಯ ಎಚ್ಚರಿಕೆ-
ವಿವೇಕ್ ಶೆಣೈ ಮಾಜಿ ಪುರಸಭಾ ಸದಸ್ಯರು.

ಪಡುತಿರುಪತಿ ಎಂದು ಖ್ಯಾತಿ ಪಡೆದಿರುವ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಕಾರ್ಕಳ ಪುರಸಭಾ ಆಡಳಿತವು ನೋಟಿಸ್ ನೀಡಿರುವ ಕ್ರಮ ಖಂಡನೀಯ, ನೀಡಿದ ನೋಟೀಸ್ ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀ ವೆಂಕಟರಮಣ ದೇವರ ಉತ್ಸವಕ್ಕೆ ರಥಬೀದಿಯಲ್ಲಿ ಗುರ್ಜಿ ನಿರ್ಮಾಣ ಮಾಡುವುದು ತಲ ತಲಾಂತರಗಳಿಂದ ನಡೆದು ಬಂದಿದೆ, ಉತ್ಸವದ ನಂತರ ಗುರ್ಜಿ ತೆಗೆದು ಗುರ್ಜಿಯ ಹೊಂಡವನ್ನು ಪ್ರತೀ ವರ್ಷವೂ ತಕ್ಷಣ ಮುಚ್ಚುವ ಕೆಲಸ ಮಾಡಲಾಗುತ್ತದೆ, ಈ ವರ್ಷವೂ ಅದೇ ಆಗಿದೆ ಇದೆಲ್ಲವೂ ಸರ್ವೆ ಸಾಮಾನ್ಯವಾದರೂ ಏನೂ ತಿಳಿಯದಂತೆ ಪುರಸಭಾ ಆಡಳಿತ ದೇವಸ್ಥಾನಕ್ಕೆ ನೋಟೀಸು ನೀಡಿರುವುದು ಆಶ್ಚರ್ಯ ತಂದಿದೆ ನೋಟೀಸು ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿ ತಕ್ಷಣ ವರ್ಗಾವಣೆ ಮಾಡಬೇಕು, ನೀಡಿದ ನೋಟೀಸ್ ಹಿಂಪಡೆದು ದೇವರಲ್ಲಿ ಕ್ಷಮೆಯಾಚಿಸಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾದಿತು ಎಂದು ವಿವೇಕ್ ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ದಿ. ಗೋಪಾಲ ಭಂಡಾರಿ ಸಂಸ್ಮರಣೆಯ ಪ್ರಶಸ್ತಿಗೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ನಂದಳಿಕೆ ಆಯ್ಕೆ

0

ದಿ. ಗೋಪಾಲ ಭಂಡಾರಿ ಸಂಸ್ಮರಣೆಯ ಪ್ರಶಸ್ತಿಗೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ನಂದಳಿಕೆ ಆಯ್ಕೆ

ಕಾರ್ಕಳ ಡಾ. ಸುಧಾಕರ ಶೆಟ್ಟಿ ಅಧ್ಯಕ್ಷರು ಅಜೆಕಾರು ಪದ್ಮಗೋಪಾಲ ಎಜ್ಯಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇವರು ಪ್ರಾಯೋಜಿಸಿದ ದಿ. ಗೋಪಾಲ ಭಂಡಾರಿ ಸಂಸ್ಮರಣೆಯ ಉಡುಪಿ ಜಿಲ್ಲಾ ಉತ್ತಮ ಉತ್ತಮ ಸಂಘ ಸಂಸ್ಥೆ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ( ರಿ. ) ಅಬ್ಬನಡ್ಕ ನಂದಳಿಕೆ ಸಂಸ್ಥೆ ಆಯ್ಕೆಯಾಗಿದೆ‌ ಈ ಸಂಘವು ಕನ್ನಡ ಕಾಯಕದಲ್ಲಿ ತೊಡಗಿಸಿಕೊಂಡದಲ್ಲದೇ ನಿರಂತರ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯ ಮೂಲಕ ಊರಿನ ಅಭಿಮಾನವನ್ನು ಪಡೆದ ಹೆಮ್ಮೆಯ ಸಂಘವಾಗಿದೆ‌.

ಈ ಪ್ರಶಸ್ತಿ ಪ್ರದಾನವು ಡಿಸೆಂಬರ್ 6 ರಂದು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ನಡೆಯುವ ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಿದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ಡಿ.06:ಶಿರ್ಲಾಲಿನಲ್ಲಿ ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ

0

ಡಿ.06:ಶಿರ್ಲಾಲಿನಲ್ಲಿ ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ

ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಸರಕಾರಿ ಪದವಿ ಪೂರ್ವ ಕಾಲೇಜು ಶಿರ್ಲಾಲು ಇಲ್ಲಿ ಡಿಸೇಂಬರ್ 06 ಶುಕ್ರವಾರ ನಡೆಯಲಿದೆ.

ಬೆಳಿಗ್ಗೆ ಗಂಟೆ 8ಕ್ಕೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಂತಿರಾಜ್ ಜೈನ್ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಇದರ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಪರಿಷತ್ ಧ್ವಜಾರೋಹಣಗೈಯ್ಯಲಿದ್ದಾರೆ.

ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.ಡಾllಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟನೆ ಮಾಡಲಿದ್ದು, ಡಾ.ಎಂ ವೀರಪ್ಪ ಮೊಯಿಲಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಬಿಡುಗಡೆಗೊಳ್ಳುತ್ತಿರುವ ಪುಸ್ತಕಗಳು:
ಎಂ ಆರ್ ರಮೇಶ್ ಪ್ರಭುರವರ ಹೊಂಗನಸು,ಹೆಚ್. ವಿಧಾತ್ರಿ ರವಿಶಂಕರ್ ರವರ ‘ನಕ್ಷತ್ರ ಪಟಲ’ ಮತ್ತು ಶ್ರೀಮತಿ ಶೈಲಜಾ ಹೆಗ್ಡೆರವರ ‘ಭಾವ ಲಹರಿ’ ಪುಸ್ತಕ ಬಿಡುಗಡೆಗೊಳ್ಳಲಿದೆ.

ಕಾರ್ಯಕ್ರಮದ ವಿವರ ಈ ರೀತಿ ಇದೆ👇.

ಕಾರ್ಕಳ:ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳ ಸಾಧನೆ

0

ಕಾರ್ಕಳ:ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳ ಸಾಧನೆ

ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಮೀರಲ್ ಡಿ’ಮೆಲ್ಲೊ ಮತ್ತು ಅಮೋಘ್ ಶೆಟ್ಟಿ

ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ, ಜಿಲ್ಲಾ ಉಪನಿರ್ದೇಶಕರ ಕಚೇರಿ ಬಳ್ಳಾರಿ, ಜಿಲ್ಲಾ ಪಂಚಾಯತ್ ಬಳ್ಳಾರಿ ಇವರ ವತಿಯಿಂದ ಬಳ್ಳಾರಿಯಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಬಾಲಕ ಮತ್ತು ಬಾಲಕಿಯರ ವಿಭಾಗದ ಫುಟ್ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಮೀರಲ್ ಡಿ’ಮೆಲ್ಲೊ ಹಾಗೂ ದ್ವಿತೀಯ ವಿಜ್ಞಾನ ವಿಭಾಗದ ಅಮೋಘ್ ಶೆಟ್ಟಿ ಪ್ರತಿನಿಧಿಸಿದ್ದರು.

ಇದರಲ್ಲಿ ಮೀರಲ್ ಡಿ’ಮೆಲ್ಲೊ ಸತತ ಎರಡನೇ ಬಾರಿಗೆ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ ಸಾಧನೆಗೈದಿದ್ದಾಳೆ.

???????

7 ಮಂದಿ ಮಾವೋವಾದಿಗಳ ಎನ್‌ಕೌಂಟರ್‌

0

ಭಾನುವಾರ ಮುಂಜಾನೆ ಪೊಲೀಸರು ಹಾಗೂ ಮಾವೋವಾದಿಗಳ ಮಧ್ಯೆ ನಡೆದ ಎನ್‌ಕೌಂಟರ್‌ನಲ್ಲಿ 7 ಮಂದಿ ಮಾವೋವಾದಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಮುಂಜಾನೆ 5:30ರ ವೇಳೆಗೆ ಚಲ್ಪಾಕ ಅರಣ್ಯದಲ್ಲಿ ಮಾವೋವಾದಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಗ್ರೇಹೌಂಡ್ಸ್ ಕೂಂಬಿಂಗ್ ಕಾರ್ಯಾಚರಣೆಯ ಸಮಯದಲ್ಲಿ ಮಾವೋವಾದಿ ಗುಂಪನ್ನು ಗುರುತಿಸಿ ಶರಣಾಗುವಂತೆ ಆದೇಶಿಸಿತ್ತು. ಈ ಸಂದರ್ಭ ಮಾವೋವಾದಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ಸುರಿಮಳೆ ಸುರಿಸಿದ್ದಾರೆ. ಪರಿಣಾಮ 7 ಮಂದಿ ಮಾವೋವಾದಿಗಳು ಹತರಾಗಿದ್ದಾರೆ.

ಘಟನಾ ಸ್ಥಳದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ 47 ರೈಫಲ್‌ಗಳು ಸೇರಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದವರಲ್ಲಿ ಒಬ್ಬನನ್ನು ನಿಷೇಧಿತ ಸಿಪಿಐ (ಮಾವೋವಾದಿ) ತೆಲಂಗಾಣ ರಾಜ್ಯ ಸಮಿತಿಯ (ಯೆಲ್ಲಾಂಡು ನರಸಂಪೇಟ್) ಕಾರ್ಯದರ್ಶಿ ಕುರ್ಸಮ್ ಮಂಗು ಅಲಿಯಾಸ್ ಭದ್ರು ಎಂದು ಗುರುತಿಸಲಾಗಿದೆ.

ನವೆಂಬರ್ 21ರಂದು ಪೊಲೀಸ್ ಮಾಹಿತಿದಾರರೆಂದು ಶಂಕಿಸಿ ಮಾವೋವಾದಿಗಳು ಇಬ್ಬರು ಬುಡಕಟ್ಟು ಜನರನ್ನು ಹತ್ಯೆಗೈದಿದ್ದರು. ಈ ಹಿನ್ನೆಲೆ ತೆಲಂಗಾಣ ಪೊಲೀಸ್ ಹಾಗೂ ನಕ್ಸಲ್ ವಿರೋಧಿ ಪಡೆಗಳು ಜಂಟಿಯಾಗಿ ಎಟುರ್ನಗರಂನ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು.