ದಿ. ಗೋಪಾಲ ಭಂಡಾರಿ ಸಂಸ್ಮರಣೆಯ ಪ್ರಶಸ್ತಿಗೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ನಂದಳಿಕೆ ಆಯ್ಕೆ
ಕಾರ್ಕಳ ಡಾ. ಸುಧಾಕರ ಶೆಟ್ಟಿ ಅಧ್ಯಕ್ಷರು ಅಜೆಕಾರು ಪದ್ಮಗೋಪಾಲ ಎಜ್ಯಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇವರು ಪ್ರಾಯೋಜಿಸಿದ ದಿ. ಗೋಪಾಲ ಭಂಡಾರಿ ಸಂಸ್ಮರಣೆಯ ಉಡುಪಿ ಜಿಲ್ಲಾ ಉತ್ತಮ ಉತ್ತಮ ಸಂಘ ಸಂಸ್ಥೆ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ( ರಿ. ) ಅಬ್ಬನಡ್ಕ ನಂದಳಿಕೆ ಸಂಸ್ಥೆ ಆಯ್ಕೆಯಾಗಿದೆ ಈ ಸಂಘವು ಕನ್ನಡ ಕಾಯಕದಲ್ಲಿ ತೊಡಗಿಸಿಕೊಂಡದಲ್ಲದೇ ನಿರಂತರ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯ ಮೂಲಕ ಊರಿನ ಅಭಿಮಾನವನ್ನು ಪಡೆದ ಹೆಮ್ಮೆಯ ಸಂಘವಾಗಿದೆ.
ಈ ಪ್ರಶಸ್ತಿ ಪ್ರದಾನವು ಡಿಸೆಂಬರ್ 6 ರಂದು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ನಡೆಯುವ ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಿದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.