Home Blog Page 93

ಕಾರ್ಕಳ ಗ್ಯಾಂಗ್ ರೇಪ್ ಪ್ರಕರಣ:ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿದ ಪೋಲಿಸ್ ಇಲಾಖೆಗೆ ಧನ್ಯವಾದಗಳು ಕಾರ್ಕಳ ಬಜರಂಗದಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ

0

ಕಾರ್ಕಳ ಗ್ಯಾಂಗ್ ರೇಪ್ ಪ್ರಕರಣ-ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿದ ಪೋಲಿಸ್ ಇಲಾಖೆಗೆ ಧನ್ಯವಾದಗಳು

ಕಾರ್ಕಳ ಬಜರಂಗದಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ

ಕಾರ್ಕಳ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿದ ಪೋಲಿಸ್ ಇಲಾಖೆಗೆ ಧನ್ಯವಾದಗಳು.ಪ್ರಕರಣದ ಸಂಪೂರ್ಣ ತನಿಖೆ ನಿಷ್ಪಕ್ಷಪಾತವಾಗಿ ನಡೆಸುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.

ಪ್ರಕರಣದ ಪ್ರಮುಖ ಆರೋಪಿ ಅಲ್ತಾಫ್ ಎಂಬಾತ ಕಾರ್ಕಳದ ಕಾಲೇಜು ಪರಿಸರದಲ್ಲಿ ಡ್ರಗ್ಸ್ ಜಾಲವನ್ನು ಪಸರಿಸುವ ಕಿಂಗ್ಪಿನ್, ಆತ ಈ ಹಿಂದೆಯೂ ವಿವಾಹಿತ ಹಿಂದೂ ಮಹಿಳೆಯ ಜೊತೆ ಸಂಪರ್ಕ ಹೊಂದಿ ಆಕೆಯನ್ನು ಡ್ರಗ್ಸ್ ಜಾಲದಲ್ಲಿ ಸಕ್ರೀಯಗೊಳಿಸಿರುವ ಕುರಿತು ಸಂಶಯವಿದ್ದು, ಕುಕ್ಕುಂದೂರು ಸಮೀಪದ ಆತನ ಮನೆಯನ್ನು ಜಪ್ತಿ ಮಾಡಬೇಕು ಮತ್ತು ಎಲ್ಲಾ ಆರೋಪಿಗಳಿಗೂ ಕಾನೂನಿನ ಮೂಲಕ ಅತ್ಯಂತ ಕಠಿಣ ಶಿಕ್ಷೆಯಾಗಬೇಕು.

ಮುಸ್ಲಿಂ ಮುಖಂಡರು ನಿಮ್ಮ ಸಮುದಾಯ ಯುವಕರಿಗೆ ಬುದ್ಧಿ ಹೇಳಿ, ಹಿಂದೂ ಕಾರ್ಯಕರ್ತರಿಗೆ ಇದನ್ನು ಸರಿಪಡಿಸುವ ಅವಕಾಶ ನೀಡಬೇಡಿ. ಕಾರ್ಕಳ ಕೋಮು ಸೌಹಾರ್ದಕ್ಕೆ ಹೆಸರಾದ ಊರು ಇಲ್ಲಿ ಪದೇ ಪದೇ ಹಿಂದೂಗಳ ತಾಳ್ಮೆಯ ಪರೀಕ್ಷೆ ಒಳ್ಳೆಯದಲ್ಲ.ಕಾರ್ಕಳದಲ್ಲಿ ಇಂತಹ ಘಟನೆ ಮತ್ತೆಂದೂ ಮರುಕಳಿಸದಂತೆ ಸಮಾಜ ಜಾಗೃತಿಯಾಗಬೇಕು ಎಂದು ಕಾರ್ಕಳ ಬಜರಂಗದಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ ತಿಳಿಸಿದ್ದಾರೆ.

ಅತ್ಯಾಚಾರ ಅನಾಚಾರದ ವಿರುದ್ಧ ಹೋರಾಟ ಹಿಂದೂ ಮಾತ್ರ ಶಕ್ತಿಯ ಅನಾವರಣ-ರಮಿತಾ ಕಾರ್ಕಳ

0

ಅತ್ಯಾಚಾರ ಅನಾಚಾರದ ವಿರುದ್ಧ ಹೋರಾಟ

ಹಿಂದೂ ಮಾತ್ರ ಶಕ್ತಿಯ ಅನಾವರಣ

ನಿನ್ನೆ ಕಾರ್ಕಳ ತಾಲೂಕಿನ ರಂಗನಪಲ್ಕೆ ಪರಿಸರದ ನಿರ್ಜನ ಪ್ರದೇಶದಲ್ಲಿ ಅಮಾನವೀಯ ಪೈಶಾಚಿಕ ಕೃತ್ಯಕ್ಕೆ ನಾವು ಬಲವಾಗಿ ಖಂಡಿಸುತ್ತೇವೆ. ಭೋವಿ ಸಮುದಾಯದ ಬಡ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಮತ್ತು ಬರಿಸುವ ಔಷಧಿಯನ್ನು ನೀಡಿ ಸಾಮೂಹಿಕ ಅತ್ಯಾಚಾರ ಮಾಡಿದ ಪೈಚಾಚಿಕ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ.

ಇದೊಂದು ಜೆಹಾದ್ ಕೃತ್ಯವಾಗಿದೆ.ಕಾರ್ಕಳದಲ್ಲಿ ಮಾದಕವಸ್ತುಗಳ ಅಂದರೆ ಡ್ರಗ್ಸ್ ಜಾಲವು ವ್ಯಾಪಕವಾಗಿ ಹರಡಿಕೊಂಡಿದೆ ಹಾಗೂ ಅವರ ಟಾರ್ಗೆಟ್ ಕೂಡ ನಮ್ಮ ಹಿಂದೂ ಯುವತಿಯರು ಎಂಬುದಕ್ಕೆ ಇಲ್ಲಿ ಸ್ಪಷ್ಟ ನಿದರ್ಶನವಿದೆ.ಹೀಗಾಗಿ ಇದರ ಹಿಂದಿರುವ ಕೈಗಳನ್ನು ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸಬೇಕು ಹಾಗೂ ಮಟ್ಟ ಹಾಕುವ ಮೂಲಕ ತಾರ್ಕಿಕ ಅಂತ್ಯ ಹಾಡಿ ಇದರ ಹಿಂದಿರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಬೇಕು.ಈ ಹಿಂದೆಯೂ ಇಂತಹ ಕೃತ್ಯವನ್ನು ಎಸಗಿರುವ ಸಾಧ್ಯತೆಗಳಿದ್ದು ಉನ್ನತ ತನಿಖೆ ನಡೆಸಬೇಕು ಹಾಗೂ ಇಂತಹ ಸಮಾಜ ದ್ರೋಹಿ ಕೆಲಸದ ವಿರುದ್ಧ ರಾಜಕೀಯ ವೈಶಮ್ಯ ಮರೆತು ಸಮಾಜದಲ್ಲಿ ಸಾಮರಸ್ಯದ ವಾತರಣ ಮರು ಸ್ಥಾಪಿಸಬೇಕಾಗಿ ಬಲವಾಗಿ ಆಗ್ರಹಿಸುತ್ತೇನೆ.

-ರಮಿತಾ ಕಾರ್ಕಳ

ಕಾರ್ಕಳ:ಅತ್ಯಾಚಾರ ಪ್ರಕರಣ,ಎಸ್‌ಪಿ ಡಾ. ಅರುಣ್ ಕುಮಾರ್ ಘಟನೆ ಕುರಿತಂತೆ ಸ್ಪೋಟಕ ಮಾಹಿತಿ

0

ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಹೇಳಿದ್ದಾರೆ.ವಿಡಿಯೋದಲ್ಲಿ ಹೇಳಿಕೆ ಬಿಡುಗಡೆ ಮಾಡಿದ ಅವರು, ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರಗೈದ ದೂರು ಬಂದಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆ ಮತ್ತು ಆರೋಪಿ ಮೂರು ತಿಂಗಳಿಂದ ಇನ್‌ಸ್ಟಾಗ್ರಾಮ್‌ ಮೂಲಕ ಪರಸ್ಪರ ಪರಿಚಯ ಹೊಂದಿದ್ದರು. ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದ. ಆಕೆ ಬಂದಾಗ ಕಾರಿನಲ್ಲಿ ಅಪಹರಿಸಿದ್ದಾನೆ.

ಈ ನಡುವೆ ಮದ್ಯಪಾನದಲ್ಲಿ ಏನೋ ಬೆರೆಸಿ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಆರೋಪಿ ಅಲ್ತಾಫ್‌ನನ್ನು ಬಂಧಿಸಲಾಗಿದೆ. ಆರೋಪಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಇಬ್ಬರ ಪೈಕಿ ಸುಬೇರ್ ಎಂಬಾತನನ್ನು ಬಂಧಿಸಲಾಗಿದ್ದು ಕೃತ್ಯಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಲಾಗಿದೆ.

ಸಂತ್ರಸ್ತೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದು ಕೇವಲ ಅತ್ಯಾಚಾರ ಪ್ರಕರಣವಲ್ಲ. ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಉಳಿದ ಆರೋಪಿಗಳನ್ನು ಬಂಧಿಸಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಪ್ರತಿಭಟನೆಯ ನೆಪದಲ್ಲಿ ಕಾಂಗ್ರೇಸ್ ನಾಯಕರಿಗೆ ಅವಮಾನ, ಅದೇ ಮಾದರಿಯಲ್ಲಿ ಶಾಸಕರಿಗೆ ಸನ್ಮಾನದ ಉತ್ತರ ಕೆಟ್ಟ ಸಂಪ್ರದಾಯವನ್ನು ಪ್ರಾರಂಬಿಸಿದ್ದೀರಿ ಆದರೆ ಅಂತ್ಯ ನಾವು ಹಾಡುತ್ತೇವೆ ಕಾಮಗಾರಿ ಕಳಪೆಯಾಗಿದ್ದರೆ ಕ್ರಮಕ್ಕೆ ಅವಕಾಶವಿದೆ ಆದರೆ ನಕಲಿ ಪ್ರತಿಮೆ ನಿರ್ಮಾಣಕ್ಕೆ ಯಾವ ಶಿಕ್ಷೆ ಶುಭದರಾವ್

0

ಪ್ರತಿಭಟನೆಯ ನೆಪದಲ್ಲಿ ಕಾಂಗ್ರೇಸ್ ನಾಯಕರಿಗೆ ಅವಮಾನ, ಅದೇ ಮಾದರಿಯಲ್ಲಿ ಶಾಸಕರಿಗೆ ಸನ್ಮಾನದ ಉತ್ತರ

ಕೆಟ್ಟ ಸಂಪ್ರದಾಯವನ್ನು ಪ್ರಾರಂಬಿಸಿದ್ದೀರಿ ಆದರೆ ಅಂತ್ಯ ನಾವು ಹಾಡುತ್ತೇವೆ

ಕಾಮಗಾರಿ ಕಳಪೆಯಾಗಿದ್ದರೆ ಕ್ರಮಕ್ಕೆ ಅವಕಾಶವಿದೆ ಆದರೆ ನಕಲಿ ಪ್ರತಿಮೆ ನಿರ್ಮಾಣಕ್ಕೆ ಯಾವ ಶಿಕ್ಷೆ
ಶುಭದರಾವ್

ಹನ್ನೆರಡು ವರ್ಷದ ಹಿಂದೆ ನಿರ್ಮಾಣವಾದ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಉದಯ್ ಶೆಟ್ಟಿ ವಿರುದ್ದ ಕಾಡು ಹೊಳೆ-ಅಂಡಾರು ರಸ್ತೆಯಲ್ಲಿ ನಡೆದ ಬಿಜೆಪಿ ಪ್ರಾಯೋಜಿತ ಪ್ರತಿಭಟನೆ ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ, ಅವರು ಪ್ರಾರಂಬಿಸಿದ ಈ ರೀತಿಯ ಅವಹೇಳನಕಾರಿ ಪ್ರತಿಭಟನೆ ಅವರಿಗೆ ತಿರುಗು ಬಾಣವಾಗಲಿದ್ದು ಅದಕ್ಕೆ ನಾವು ಅಂತ್ಯ ಹಾಡಲಿದ್ದೇವೆ, ಶಾಸಕ ಸುನೀಲ್ ಕುಮಾರ್ ಅವಧಿಯಲ್ಲಿ ನಡೆದ ಕಾಮಾಗಾರಿಗಳಲ್ಲಿ ಎಲ್ಲಿ ಲೋಪವಾಗಿದೆಯೋ ಆ ಎಲ್ಲಾ ಕಡೆಗಳಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಬ್ಲಾಕ್ ‌ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

2013 ರಲ್ಲಿ ಸುನೀಲ್ ಕುಮಾರ್ ಶಾಸಕರಾಗಿದ್ದ ಅವಧಿಯಲ್ಲಿ ನಮ್ಮ ಗ್ರಾಮ ನಮ್ಮ ‌ರಸ್ತೆ ಹಂತ 2 ರ ಯೋಜನೆಯ ಅಡಿಯಲ್ಲಿ ಕಾಡುಹೊಳೆ- ಅಂಡಾರು 2.900 ಕಿಮೀ ರಸ್ತೆಗೆ 1ಕೋಟಿ 80 ಲಕ್ಷ ಬಿಡುಗಡೆಯಾಗಿ ಕಾಮಗಾರಿ ನಡೆದಿತ್ತು, ಆ ರಸ್ತೆ ನಿರ್ವಹಣೆಯ ಅವಧಿ ಕೇವಲ 5 ವರ್ಷಗಳ ಆಗಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಇಂದಿನ‌ವರೆಗೂ ನಿರ್ವಹಣೆಯನ್ನು ಉದಯ್ ಶೆಟ್ಟಿಯವರೇ ಮಾಡಿಕೊಂಡು ಬರುತ್ತಿದ್ದಾರೆ ಒಂದು ವೇಳೆ ಕಾಮಗಾರಿ ಕಳಪೆಯಾಗಿದ್ದರೆ ಶಾಸಕರಿಗೆ ಬಿಲ್ಲು ಪಾವತಿಯನ್ನು ತಡೆದು ತನಿಖೆಗೆ ಒಪ್ಪಿಸುವ ಅಧಿಕಾರವಿತ್ತು ಆದರೆ ಅವರು ಹಾಗೆ ಮಾಡದೆ ಬಿಲ್ಲು ಪಾವತಿಸಿದ್ದು ಯಾಕೆ ? ಕಮಿಷನ್ ಪಡೆಯಲೆಂದೇ ಎಂದು ಪ್ರಶ್ನಿಸಿದ್ದಾರೆ?

ಸುನೀಲ್ ಕುಮಾರ್ ಅವಧಿಯಲ್ಲಿ ನಡೆದ ಕಾಮಗಾರಿಗಳು ಕಳಪೆಯಾಗಿರುವ ಅನೇಕ ಉದಾಹರಣೆಗಳಿವೆ ಅದರಲ್ಲಿ ನಗರದ ಒಳಚರಂಡಿ ಪ್ರಮುಖವಾದ್ದು 16 ಕೋಟಿಯ ಒಳಚರಂಡಿ ಕಾಮಗಾರಿ ಕಳಪೆ ಎಂದು ಮೊದಲ ವರ್ಷವೇ ಸಾಬೀತಾಗಿದೆ ಅಂದಿನಿಂದ ಇಂದಿನವರೆಗೂ ಒಳಚರಂಡಿಯ ನೀರು ರಥಬೀದಿಯಲ್ಲಿ ಹರಿಯುತಿದೆ, ನಗರದ ಅನೇಕ ಮನೆಗಳ ಬಾವಿಯ ನೀರು ಕಲುಷಿತವಾಗಿ ಕುಡಿಯಲು ಸಾದ್ಯವಾಗದೆ ಗೃಹ ಬಳಕೆಗೂ ಅನುಪಯುಕ್ತವಾಗಿದೆ ಅದರೆ ಶಾಸಕರು ಈ ವರೆಗೂ ಅದನ್ನು ಸರಿಪಡಿಸುವ ಪ್ರಯತ್ನ ಮಾಡಲಿಲ್ಲ.
ಕಾಮಗಾರಿಗಳು ಕಳಪೆಯಾದರೆ ಮರು ನಿರ್ಮಾಣಕ್ಕೆ ಅಥವಾ ಕಾನೂನು ಕ್ರಮಕ್ಕೆ ಅವಕಾಶವಿದೆ ಆದರೆ ಪರಶುರಾಮನ ಕಂಚಿನ ಪ್ರತಿಮೆಯ ಹೆಸರಿನಲ್ಲಿ ನಕಲಿ ಪ್ರತಿಮೆ ನಿರ್ಮಿಸಿ ಜನತೆಗೆ ಬಗೆದ ದ್ರೋಹಕ್ಕೆ ಯಾವ ಶಿಕ್ಷೆ ನೀಡಬೇಕು ಎಂದು ಜನ ನಿರ್ಧರಿಸಬೇಕು, ಈ ವಿಚಾರವಾಗಿ ಸತ್ಯ ಹೊರಬಂದ ನಂತರ ಉದಯ ಶೆಟ್ಟಿಯವರನ್ನು ಗುರಿಯಾಗಿಸಿ ಅವಮಾನಿಸುವ ಪ್ರಯತ್ನ ನಿರಂತರ ನಡೆಯುತಿದೆ ಇದರಿಂದ ನಾವು ದೃತಿಗೆಡುವುದಿಲ್ಲ, ಶಾಸಕರ ಸನ್ಮಾನದ ವಿವರ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಗುತ್ತಿಗೆದಾರರಿಗೂ ನಾಯಕರಿಗೂ ವ್ಯತ್ಯಾಸ ಗೊತ್ತಿಲ್ಲದ ಮಾನ್ಯ ಸುಭದ್ ರಾವ್ ನಮ್ಮ ಬಳಿ ಬನ್ನಿ ಸವಿವರವಾಗಿ ಹೇಳಿಕೊಡುತ್ತೇವೆ-ಸುರೇಶ್‌ ಶೆಟ್ಟಿ ಶಿವಪುರ

0

ಕಾರ್ಕಳ:ಕಾಡುಹೊಳೆ, ಅಂಡಾರು ರಸ್ತೆಯನ್ನು ಕಳಪೆ ಮಟ್ಟದಲ್ಲಿ ಮಾಡಿರುವ ಗುತ್ತಿಗೆದಾರರೂ, ಸ್ಥಳೀಯರೂ ಆದ ಉದಯ್ ಕುಮಾರ್ ಶೆಟ್ಟಿಯವರಿಗೆ ಅವರ ಊರಿನವರೇ ಹುಟ್ಟೂರಿನ ಸನ್ಮಾನ ಮಾಡಿರುವುದೇ ಹೊರತು ಹೊರಗಿನಿಂದ ಬಂದವರಲ್ಲ. ಸ್ಥಳೀಯ ಗ್ರಾಮಸ್ಥರು ನಿಮ್ಮ ನಾಯಕನ ಕಳಪೆ ಕಾಮಗಾರಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ವಿಶಿಷ್ಟ ಹಾಗೂ ಹೊಸತನದ ಮಾದರಿಯಲ್ಲಿ ಸನ್ಮಾನ ಕಾರ್ಯಕ್ರಮ ಮಾಡಿದ್ದಾರೆ. ಅವರು ಎಲ್ಲಿಯೂ ಕೂಡ ಕಾಂಗ್ರೆಸ್ ನಾಯಕರಂತೆ ಅವರದ್ದೇ ನಾಯಕರ ಭಾವಚಿತ್ರ ನೆಲಕ್ಕೆ ಹಾಕಿ ಚಪ್ಪಲಿಯಿಂದ ತುಳಿಯಲಿಲ್ಲ, ಬೆಂಕಿ ಹಾಕಿ ಸುಡಲಿಲ್ಲ. ಸುಡುವುದು, ಚಪ್ಪಲಿಯಲ್ಲಿ ತುಳಿಯುವುದು ಕಾಂಗ್ರೆಸ್‌ನ ಸಂಸ್ಕೃತಿ. ಒಂದು ಒಳ್ಳೆಯ ರೀತಿಯಲ್ಲಿ ಮಾಡಿದ ಪ್ರತಿಭಟನೆ ಕೆಟ್ಟ ಸಂಪ್ರದಾಯ ಹಾಗೂ ಅವಹೇಳನಕಾರಿ ಎಂದು ಟೀಕಿಸುವ ಶುಭದ ರಾವ್‌, ರಾಜ್ಯದ ಉನ್ನತ ಸ್ಥಾನದಲ್ಲಿರುವ ರಾಜ್ಯಪಾಲರ ಬಗ್ಗೆ ಹೀನಾಯ, ವಿಕೃತ ಶಬ್ಧಗಳನ್ನು ಬಳಸುವ ತಮ್ಮದೇ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ತಿಳಿಸಿ ಹೇಳುವುದು ಸೂಕ್ತ.ಮಾನ್ಯ ಸುಭದ್ ರಾವ್ ಅವರೇ ನಿಮಗೆ ಗುತ್ತಿಗೆದಾರ ಯಾರು? ಜನಪ್ರತಿನಿಧಿ ಯಾರು ? ಎಂಬ ವ್ಯತ್ಯಾಸವೇ ಗೊತ್ತಿಲ್ಲ. ಶಾಸಕರಿಗೂ ಗುತ್ತಿಗೆದಾರರಿಗೂ ಇರುವ ವ್ಯತ್ಯಾಸದ ಬಗ್ಗೆ ಮೊದಲು ತಿಳಿಯಿರಿ.

ನಿಮ್ಮ ನಾಯಕ ಗುತ್ತಿಗೆದಾರನಾಗಿದ್ದುಕೊಂಡು ನಾಯಕ ಆಗಿರಬಹುದು. ಆದರೆ ನಮ್ಮ ಶಾಸಕರು ನಾಯಕ ಮಾತ್ರ. ಶಾಸಕರದ್ದು ಏನಿದ್ದರೂ ಪ್ರಸ್ತಾವನೆ ಸಲ್ಲಿಸುವುದು, ಅನುದಾನ ಬಿಡುಗಡೆಗೊಳಿಸುವುದಷ್ಟೇ ಕೆಲಸ. ಶಾಸಕರು ತಂದ ಅನುದಾನವನ್ನು ಕಾರ್ಯಗತಗೊಳಿಸುವುದು ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರ. ಒಂದು ವೇಳೆ ಗುತ್ತಿಗೆದಾರ ಪ್ರಾಮಾಣಿಕನಾಗಿದ್ದರೆ ಕಾಮಗಾರಿಯ ಗುಣಮಟ್ಟ ಒಳ್ಳೆಯದಿರುತ್ತದೆ. ಇಲ್ಲದೆ ಇದ್ದಲ್ಲಿ ಕಾಡುಹೊಳೆ ರಸ್ತೆ, ಗುರುವಾಯನಕೆರೆ ರಸ್ತೆ, ಶಕ್ತಿನಗರ ರಸ್ತೆ ತರಹವೇ ಆಗುತ್ತದೆ.
ಕಳಪೆ ಕಾಮಗಾರಿ ವಿಷಯದಲ್ಲಿ ನಾವೆಂದೂ ರಾಜಿ ಮಾಡಿಕೊಂಡಿಲ್ಲ, ಮಾಡುವುದೂ ಇಲ್ಲ. ಯಾರೇ ಕಳಪೆ ಕಾಮಗಾರಿ ಮಾಡಿದ್ದರೂ ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ನಮ್ಮ ನಾಯಕರು ಬಹಿರಂಗವಾಗಿಯೇ ಈ ಹಿಂದೆಯೂ ಹೇಳಿದ್ದರು, ಈಗಲೂ ಹೇಳುತ್ತಿದ್ದಾರೆ, ಮುಂದೆಯೂ ಇದೇ ನಿಲುವಾಗಿರುತ್ತದೆ. ಕಳಪೆ ಕಾಮಗಾರಿ ಕುರಿತು ನಮ್ಮ ನಿಲುವು ಸದಾ ಸ್ಪಷ್ಟವಾಗಿದೆ. ನೀವು ಮಾತ್ರ ಗೊಂದಲದಲ್ಲಿದ್ದೀರಿ.

ದಯವಿಟ್ಟು ಮಾನ್ಯ ಸುಭದ್ ರಾವ್ ಅವರೇ, ನೀವೂ ಒಬ್ಬ ಜನಪ್ರತಿನಿಧಿ. ಪುರಸಭಾ ಸದಸ್ಯ ಆದ್ದರಿಂದ ಇದನ್ನೆಲ್ಲ ಸ್ವಲ್ಪ ಅರಿತುಕೊಳ್ಳಬೇಕು ಅಥವಾ ತಿಳಿದವರ ಬಳಿ ಕೇಳಿ ಮಾತನಾಡಬೇಕು. ನೀವು ಚಿಲ್ಲರೆ ವ್ಯಕ್ತಿತ್ವ ತೋರಿಸುತ್ತಾ, ಬರೀ ಸುಳ್ಳು ಹೇಳಿಕೆಗಳನ್ನು ನೀಡುವುದೇ ನಿಮ್ಮ ಕಾಯಕವಾಗಿದೆ. ನಿಮಗೆ ವೇದಿಕೆ ಸಿಕ್ಕರೆ ಸಾಕು ಸುನಿಲ್ ಕುಮಾರ್ ಬಿಟ್ಟರೆ ಬೇರೆ ವಿಚಾರವೇ ಇಲ್ಲ. ನೀವು ಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ಬಿಟ್ಟು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ನಿಮಗೊಂದು ಕಿವಿಮಾತು, ಇನ್ನೂ ನಿಮಗೆ ಗುತ್ತಿಗೆದಾರರಿಗೂ ನಾಯಕರಿಗೂ ಇರುವ ವ್ಯತ್ಯಾಸ ಗೊತ್ತಿಲ್ಲ ಎಂದಾದರೆ ನಮ್ಮಲ್ಲಿ ಬನ್ನಿ ನಾವು ನಿಮಗೆ ಅರ್ಥವಾಗುವ ಹಾಗೆ ತಿಳಿ ಹೇಳುತ್ತೇವೆ ಎಂದು ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್‌ ಶೆಟ್ಟಿ ಶಿವಪುರ ಹೇಳಿದ್ದಾರೆ

ಕಾರ್ಕಳ:ಆರ್ ಸಿ ಸಿ ಕೆಲಸಗಾರರಿಗೆ ಅಪಘಾತ ವಿಮೆ

0

ಆರ್ ಸಿ ಸಿ ಕೆಲಸಗಾರರಿಗೆ ಅಪಘಾತ ವಿಮೆ
ಕಾರ್ಕಳ:ಭಾರತೀಯ ಅಂಚೆ ಪುತ್ತೂರು ವಿಭಾಗ ಮತ್ತು ಆರ್ ಸಿ ಸಿ ಗುತ್ತಿಗೆದಾರರ ಸಂಘ ಕಾರ್ಕಳ ಇವರ ಸಹಯೋಗದೊಂದಿಗೆ ಬೃಹತ್ ಅಪಘಾತ ವಿಮೆ ಮೇಳವು ಕಾರ್ಕಳ ಜೋಡುರಸ್ತೆಯ ನವದುರ್ಗ ಕಟ್ಟಡದಲ್ಲಿ ನಡೆಯಿತು, ದೀಪ ಪ್ರಜ್ವಲನೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕಾರ್ಕಳ ಪ್ರಧಾನ ಅಂಚೆ ಕಛೇರಿಯ ಅಂಚೆಪಾಲಕರಾದಂತಹ ಮಂಜುನಾಥ ಎಚ್. ಉದ್ಯಮಿ ಸತ್ಯೇಂದ್ರ ಭಟ್,ಸಹಾಯಕ ಅಂಚೆ ಅಧೀಕ್ಷಕರಾಗಿರುವ ಮೋಹನ್ ಬಿ,ಹಿರಿಯ ಗುತ್ತಿಗೆದಾರ ಫೆಲಿಕ್ಸ ಮಾತಾಯಿಸ್, ಕಾರ್ಕಳ ತಾಲೂಕು ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಮಹಮದ್ ಶರೀಫ್ ,ಆರ್‌ಸಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ದಾಮೋದರ ಆಚಾರ್ಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮ್ಯಾನೇಜರ್ ಸಿಹಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಕಳ ಪ್ರಧಾನ ಅಂಚೆ ಕಚೇರಿಯ ಅಂಚೆಪಾಲಕರಾದ ಮಂಜುನಾಥ್ ಅಂಚೆ ಇಲಾಖೆ ಯೋಜನೆಗಳು ಮತ್ತು ಅಪಘಾತ ವಿಮೆಗಳ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಿದರು.

ಈ ವಿಮಾ ಮೇಳದಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ವಿಮಾ ಪಾಲಿಸಿಯನ್ನು ಪಡೆದುಕೊಂಡರು,
ಮಾಸ್ಟರ್ ಸಮರ್ಥ ಪ್ರಾರ್ಥನೆಯನ್ನು ನೆರವೇರಿಸಿದರು,ಕಾರ್ಯಕ್ರಮದ ನಿರೂಪಣೆ
ಪ್ರಶಾಂತ್ ಆಚಾರ್ಯ ಜೋಗುಳಬೆಟ್ಟು ನೆರವೇರಿಸಿದರು

ಬೈಲೂರು:ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ಬೈಲೂರು:ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸರ್ಕಾರಿ ಪದವಿಪೂರ್ವ ಕಾಲೇಜು ಬೈಲೂರು, ಇಲ್ಲಿ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ 45 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ವಿಷಯವಾರು ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಸರಕಾರಿ ಪದವಿ ಪೂರ್ವ ಕಾಲೇಜು – ಸಾಣೂರು ಇಲ್ಲಿಯ ಮಾನ್ಯ ಪ್ರಾಂಶುಪಾಲರಾದ ಸುಚೇತಾ ರವರು ಸನ್ಮಾನಿತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಹಾರೈಸುವುದರೊಂದಿಗೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಪ್ರೇರಣೆಯಾಗಬೇಕೆಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಗುರುಮೂರ್ತಿ ತಾಮ್ರಗೌರಿ ಯವರು ವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಸೀತಾರಾಮ ರವರು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರೆ, ಉಪನ್ಯಾಸಕರಾದ ಮಹೇಶ್ ರವರು ವಂದನಾರ್ಪಣೆಗೈದರು. ಸನ್ಮಾನಿತ ವಿದ್ಯಾರ್ಥಿಗಳ ಪಟ್ಟಿಯನ್ನು ಉಪನ್ಯಾಸಕರಾದ ರತ್ನಾಕರ ಪೂಜಾರಿಯವರು ವಾಚಿಸಿ, ವಿದ್ಯಾರ್ಥಿ ಸಂಘದ ಸಂಚಾಲಕರಾದ ನರಸಿಂಹ ವರ್ಧನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಿಟ್ಟೆ:ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ

0

ನಿಟ್ಟೆ:ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ

ಜುಗಾರಿ ಅಡ್ಡಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಆ.18ರಂದು ನಿಟ್ಟೆ ಗ್ರಾಮ ಹುಣಸೆಕಟ್ಟೆ ಎಂಬಲ್ಲಿ ನಡೆದಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಉಪನಿರೀಕ್ಷಕ ದಿಲೀಪ್ ಜಿ ಆರ್ ಪೊಲೀಸ್ ನೇತೃತ್ವದಲ್ಲಿ ದಾಳಿ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸದಾನಂದ, ಗಣೇಶ್ , ಪ್ರಥಮ್, ಜಯರಾಜ್, ಸೂರ್ಯ ಮತ್ತು ರಾಜ ಬಂಧಿತರು.ಇಸ್ಪೀಟು ಆಟಕ್ಕೆ ಬಳಸಿದ ನಗದು ಹಣ 10,200 ರೂ. ಹಣ,ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ 2 ಹಳೆಯ ಪ್ಲಾಸ್ಟಿಕ್ ಗೋಣಿ ಚೀಲ, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಚಿನಡ್ಕ ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ಕಾರ್ಕಳದಿಂದ 2000 ಬಿಜೆಪಿ ಕಾರ್ಯಕರ್ತರು ಭಾಗಿ-ನವೀನ್ ನಾಯಕ್

0

ಕಂಚಿನಡ್ಕ ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ಕಾರ್ಕಳದಿಂದ 2000 ಬಿಜೆಪಿ ಕಾರ್ಯಕರ್ತರು ಭಾಗಿ-ನವೀನ್ ನಾಯಕ್

ಕಾರ್ಕಳ:ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಟೋಲ್ ಸಂಗ್ರಹಕ್ಕೆ ಆದೇಶ ಮಾಡಿರುವುದನ್ನು ಕಾರ್ಕಳ ಭಾರತೀಯ ಜನತಾ ಪಾರ್ಟಿಯು ಪ್ರತಿ ಬಾರಿಯೂ ವಿರೋಧಿಸುತ್ತಾ, ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸುತ್ತಾ ಬಂದಿದೆ. ಆದರೂ ಕೂಡ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಡದೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಜನಪರ ಸರ್ಕಾರ ಅಲ್ಲ, ಜನ ವಿರೋಧಿ ಸರ್ಕಾರ ಎಂದು ಸಾಭೀತಾಗಿದೆ.

ಟೋಲ್ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಆಗಸ್ಟ್ 24 ಶನಿವಾರದಂದು ನಂದಳಿಕೆ ಸುಹಾಸ್ ಹೆಗ್ಡೆ ನೇತೃತ್ವದ ಸ್ಥಳೀಯ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿಯ ಬೃಹತ್ ಸಾರ್ವಜನಿಕ ಪ್ರತಿಭಟನೆ ಗೆ ಕರೆ ನೀಡಿದ್ದು, ಈ ಪ್ರತಿಭಟನೆಯಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಕಳದಿಂದ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಾಹನ ಸವಾರರಿಗೆ ಬರ ಎಳೆಯಲು ಮುಂದಾಗಿರುವ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿರುವ ಬಿಜೆಪಿ ಪಕ್ಷವು ನಿರಂತರ ಜನರ ಪರವಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಬಿಜೆಪಿ ಕಾರ್ಕಳ ಮಂಡಲ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿಯೂ ಭಾರತದ ಸ್ವಾತಂತ್ರ್ಯ ಸಂಭ್ರಮಾಚರಣೆ

0

ಸೌದಿ ಅರೇಬಿಯಾದಲ್ಲಿಯೂ ‘ಭಾರತ ಸ್ವಾತಂತ್ರ್ಯ ಸಂಭ್ರಮಾಚರಣೆ’

Friendly cricketers Al AHSA ಇದರ ಪರವಾಗಿ 78ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಲೀಲ್ ಕೃಷ್ಣಾಪುರ ವಹಿಸಿದ್ದರು,ಸಮಾಜ ಸೇವಕರಾಗಿ ಗುರುತಿಸಿಕೊಂಡ ಮೊಹಮ್ಮದ್ ಆಲಿ ಜಿನ್ನಾ ತಮಿಳುನಾಡು,ಮೊಹಿದ್ದೀನ್ ಬಾತಿಷಾ ಜಿಕೆ, ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಸಲೀಂ ಗುರುವಾಯನಕೆರೆ,ಗಲ್ಫ್ ಕಮಿಟಿ ಇದರ ಅಧ್ಯಕ್ಷರು ಸ್ವಾತಂತ್ರ್ಯದ ಬಗ್ಗೆ ಒಂದೆರಡು ಹಿತವಚನಗಳನ್ನು ನೀಡಿದರು.ವೇದಿಕೆಯಲ್ಲಿ ಇಸಾಕ್ ಕಣ್ಣೂರ್, ಶಾಮಿಲ್ ಕೈಕಂಬ, ಅಬ್ಬು ಬಜಗೋಳಿ,ಮುಶೀರ್ ಖಾನ್ ಕಾರ್ಕಳ,ನೌಶಾದ್,ಬಷೀರ್,ಶಾಭಿತ್ ಹಾಜರಿದ್ದರು.

ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗೂ ಹಿರಿಯರಿಗೆ ಕ್ರಿಕೆಟ್ ಪಂದ್ಯಾ ಕೂಟವನ್ನು ಆಯೋಜಿಸಲಾಗಿತ್ತು ಪ್ರಥಮ ಸ್ಥಾನವನ್ನು ಮುಶೀರ್ ವಾರಿಯರ್ಸ್ ಹಾಗೂ ದ್ವಿತೀಯ ಸ್ಥಾನವನ್ನು ಜಲೀಲ್ ಸ್ಟ್ರೈಕರ್ಸ್ ತನ್ನದಾಗಿಸಿಕೊಂಡಿತು,ಪಂದ್ಯಶ್ರೇಷ್ಠ ಮುಶೀರ್ ಪಾಲಾದರೆ ಸರಣಿಶ್ರೇಷ್ಠ ನೂರಿಸ್ ಪಡೆದುಕೊಂಡರು.ಸ್ವಾಗತ ಭಾಷಣ ಎಂ.ಜಿ. ನಝೀರ್ ನೆರವೇರಿಸಿದರು,ಅಬ್ದುಲ್ ಸಮದ್ ಕಾರ್ಯಕ್ರಮವನ್ನು ನಿರೂಪಿಸಿದರು,ನೂರಿಸ್ ಬಜಾಲ್ ವಂದಿಸಿದರು.