ಕಾರ್ಕಳದ ಪ್ರತಿಷ್ಠಿತ ಮಳಿಗೆ A1 ಸೂಪರ್ ಮಾರ್ಟ್ ನಲ್ಲಿ ನೂತನ ಮಳಿಗೆ ಉದ್ಘಾಟನೆಯ ಅಂಗವಾಗಿ ಜುಲೈ 25 ರಿಂದ 31 ರವರೆಗೆ ನಡೆಸಿದ ಲಕ್ಕಿ ಡ್ರಾ ಕಾರ್ಯಕ್ರಮದ ಫಲಿತಾಂಶ ಬಿಡುಗಡೆಗೊಂಡಿದೆ.
ಲಕ್ಕಿ ಡ್ರಾ ಕೂಪನ್ ಸಂಖ್ಯೆ 105ಕ್ಕೆ ಅದೃಷ್ಟ ಲಕ್ಷ್ಮಿ ಒಳಿದಿದ್ದು, ವಿಜೇತರ ಮನೆಗೆ ವಾಷಿಂಗ್ ಮಿಷನ್ ಉಡುಗೊರೆಯಾಗಿ ತಲುಪಿದೆ.
ಕಾರ್ಕಳದಲ್ಲಿರುವ A1 ಮಳಿಗೆಯಲ್ಲಿ ಅ. 26 ರಂದು ನಡೆದ ಡ್ರಾ ಫಲಿತಾಂಶದಲ್ಲಿ ವಿಜೇತ ಗ್ರಾಹಕರಾಗಿ ಸುರೇಖಾ ಅವರು ವಾಷಿಂಗ್ ಮಿಷನ್ ಅನ್ನು ಬಹುಮಾನವಾಗಿ ಪಡೆದಿದ್ದಾರೆ
ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ವಿಜಯಪುರ ಜಿಲ್ಲೆ ಹಾಗೂ ಹೆಚ್.ಜಿ ಪ.ಪೂ ಕಾಲೇಜು ಸಿಂದಗಿ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಾರ್ಕಳದ ಕೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪೂರ್ಣಿಮ ಪ್ರಭು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಕು.ಲಾವಣ್ಯ ಶೆಟ್ಟಿ ವಿದ್ಯಾರ್ಥಿನಿಗೆ ತರಬೇತಿ ನೀಡಿದ್ದರು.
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ನೇತೃತ್ವದಲ್ಲಿ ಸಂಸ್ಥೆಯ 26ನೇ ವರ್ಷಾಚರಣೆ ಅಂಗವಾಗಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಗೋಪೂಜೆ ಸಂಭ್ರಮ ಕಾರ್ಯಕ್ರಮ ಜರಗಿತು.
ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ಮಹಿಳಾ ಸದಸ್ಯರು ಹಾಗೂ ಸಂಘದ ಸದಸ್ಯರಿಂದ ಗೋವಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ್ ಅಬ್ಬನಡ್ಕ ವಹಿಸಿ ಮಾತಾನಾಡಿದವರು ಸನಾತನ ಹಿಂದೂ ಸಂಸ್ಕೃತಿಯಲ್ಲಿ ಗೋವುಗಳಿಗೆ ಪವಿತ್ರ ಸ್ಥಾನವಿದ್ದು, ಅವುಗಳು ಮುಕ್ಕೋಟಿ ದೇವರ ಅವಾಸ ಸ್ಥಾನವಾಗಿ ಬಿಂಬಿತವಾಗಿದೆ. ಯಾವ ದೇಶದಲ್ಲಿ ಗೋ ಸಂಪತ್ತನ್ನು ಸಂರಕ್ಷಣೆಗೆ ಒತ್ತು ನೀಡುತ್ತಾರೋ ಆ ದೇಶದಲ್ಲಿ ದಾರಿದ್ರ ದೂರವಾಗಿ ಸುಭಿಕ್ಷೆಯಿಂದ ಕಂಗೊಳಿಸಿತ್ತದೆ ಎಂದು ತಿಳಿಸಿದರು.
ತಾಯಿಯ ಹಾಲನ್ನು ಕುಡಿದು ಬೆಳೆವ ನಾವು ಸಾಯುವ ತನಕ ಗೋವಿನ ಹಾಲನ್ನು ಕುಡಿಯುತ್ತೇವೆ. ಕೇವಲ ಲಾಭನಷ್ಟದ ಲೆಕ್ಕಾಚಾರದಲ್ಲಿ ಗೋವನ್ನು ಸಾಕದೆ, ಮನುಕುಲದ ಕಾಮಧೇನುವಾಗಿ ನಾವೆಲ್ಲ ಗೋವನ್ನು ಪೂಜಿಸಬೇಕಾಗಿದೆ ಎಂದು ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ತಿಳಿಸಿದರು.
ಗೋವುಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನ ಪರ್ಯಂತ ನಮಗೆ ಹಾಲುಣಿಸುವ ಗೊಮಾತೆಗೆ ಋಣಿಯಾಗಿ ಬದುಕಬೇಕಿದೆ ಎಂದು ಸಂಘದ ಕಾರ್ಯದರ್ಶಿ ಸತೀಶ್ ಅಬ್ಬನಡ್ಕ ಹೇಳಿದರು.
ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರುಗಳಾದ ಆನಂದ ಪೂಜಾರಿ, ಜೊತೆ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿ ಪ್ರದೀಪ್ ಸುವರ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷ ಕೀರ್ತನ್ ಪೂಜಾರಿ, ಅಬ್ಬನಡ್ಕ ಚೆಂಡೆ ಬಳಗದ ಅಧ್ಯಕ್ಷ ಯೋಗೀಶ್ ಆಚಾರ್ಯ, ಸಂಘದ ಸದಸ್ಯರಾದ ಹರೀಶ್ ಪೂಜಾರಿ, ಲೀಲಾ ಪೂಜಾರಿ, ಪದ್ಮಶ್ರೀ ಪೂಜಾರಿ, ಪುಷ್ಪ ಕುಲಾಲ್, ವೀಣಾ ಪೂಜಾರಿ, ಸಂಧ್ಯಾ ಶೆಟ್ಟಿ, ಅನ್ನಪೂರ್ಣ ಕಾಮತ್, ಶಾಂತರಾಮ್ ಕುಲಾಲ್, ಶ್ರೀಕಾಂತ್ ಆಚಾರ್ಯ, ಕಿರಣ್ ಪೂಜಾರಿ, ಸುಭಾಸ್ ಕೆಮ್ಮಣ್ಣು, ಮೊದಲಾದವರಿದ್ದರು.
ರೋಟರಿ ಕ್ಲಬ್ ಕಾರ್ಕಳ ಇದರ ಆತಿಥ್ಯದಲ್ಲಿ ರೋಟರಿ ಫೌಂಡೇಶನ್ ಹಾಗೂ ಪೋಲಿಯೋ ಪ್ಲಸ್ ಬಗ್ಗೆ ವಲಯ ಮಟ್ಟದ ವಿಚಾರ ಸಂಕಿರಣವು ರೋಟರಿ ಬಾಲಭವನ ಕಾರ್ಕಳ ಇಲ್ಲಿ ನಡೆಯಿತು.
ಮುಖ್ಯ ಅತಿಥಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ರಾಜಾರಾಮ್ ಭಟ್ ರವರು ರೋಟರಿ ಫೌಂಡೇಶನ್ ಬಗ್ಗೆ ಉಪಯುಕ್ತ ಮಾಹಿತಿಯನ್ನು ಸವಿವರವಾಗಿ ನೀಡಿದರು. ವಲಯ ಕಾರ್ಯದರ್ಶಿ ಆಲ್ವಿನ್ ನೇರಿ ಪಿಂಟೋ ವರದಿ ಮಂಡಿಸಿದರು.
ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ ಬಿ. ರವರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ ಸಂಪನ್ಮೂಲ ವ್ಯಕ್ತಿ ಅನಿಲ್ ಡೇಸಾ, ವಲಯ ಸೇನಾನಿಗಳಾದ ಜಾನ್ ಡಿ ಸಿಲ್ವ, ಸಂದೀಪ್ ಬಂಗೇರ, ಪ್ರಶಾಂತ್ ಬೆಳಿರಾಯ,ಟಿ.ಆರ್.ಎಫ್. ಸಂಯೋಜಕ ಇಕ್ಬಾಲ್ ಅಹಮದ್, ಪೋಲಿಯೋ ಪ್ಲಸ್ ಸಂಯೋಜಕ ಶೇಖರ್ ಹೆಚ್., ಕಾರ್ಕಳ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಗೀತಾ ಕಾಮತ್ ಪ್ರಾರ್ಥಿಸಿದರು.ಸಹಾಯಕ ಗವರ್ನರ್ ನಿರೂಪಿಸಿದರು.ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ 26ನೇ ವರ್ಷದ ಅಂಗವಾಗಿ ಸಂಘದ ಸದಸ್ಯರ ವಾಹನಗಳಿಗೆ ಸಾಮೂಹಿಕ ವಾಹನ ಪೂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುರೇಶ್ ಅಬ್ಬನಡ್ಕ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಪೂರ್ವಾಧ್ಯಕ್ಷರುಗಳಾದ ಆನಂದ ಪೂಜಾರಿ, ಜೊತೆ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿ ಪ್ರದೀಪ್ ಸುವರ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷ ಕೀರ್ತನ್ ಪೂಜಾರಿ, ಅಬ್ಬನಡ್ಕ ಚೆಂಡೆ ಬಳಗದ ಅಧ್ಯಕ್ಷ ಯೋಗೀಶ್ ಆಚಾರ್ಯ, ಸಂಘದ ಸದಸ್ಯರಾದ ಹರೀಶ್ ಪೂಜಾರಿ, ಲೀಲಾ ಪೂಜಾರಿ, ಪದ್ಮಶ್ರೀ ಪೂಜಾರಿ, ಪುಷ್ಪ ಕುಲಾಲ್, ವೀಣಾ ಪೂಜಾರಿ, ಸಂಧ್ಯಾ ಶೆಟ್ಟಿ, ಅನ್ನಪೂರ್ಣ ಕಾಮತ್, ಶಾಂತರಾಮ್ ಕುಲಾಲ್, ಶ್ರೀಕಾಂತ್ ಆಚಾರ್ಯ, ಕಿರಣ್ ಪೂಜಾರಿ, ಸುಭಾಸ್ ಕೆಮ್ಮಣ್ಣು, ಮೊದಲಾದವರಿದ್ದರು.
ರೋಟರಿ ಕ್ಲಬ್ ಕಾರ್ಕಳ ವತಿಯಿಂದ ದೀಪಾವಳಿ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಇದರ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಅವರು ಮಾತನಾಡುತ್ತಾ ದೀಪಾವಳಿಯ ಆಚರಣೆಯು ಎಲ್ಲರ ಬಾಳಿನಲ್ಲಿ ಬೆಳಕನ್ನು ನೀಡುವ ಹಬ್ಬವಾಗಿದೆ. ಹಬ್ಬಗಳ ಆಚರಣೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವಾಗಬೇಕು, ಸಾಂಸ್ಕೃತಿಕ ಜಾಗೃತಿ ಮೂಡಿಸುವುದರ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಜಾಗ್ರತೆಗೊಳಿಸುವ ಕೆಲಸವು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡುತ್ತಾ ರೋಟರಿ ಸಂಸ್ಥೆಯು ತನ್ನ ಸಹ ಸಂಸ್ಥೆಗಳ ಜೊತೆಗೂಡಿ ಮಾಡುವ ದೀಪಾವಳಿಯ ಆಚರಣೆಯು ಹೀಗೆಯೇ ಮುಂದುವರಿಯಲು ಎಲ್ಲರೂ ಪ್ರಯತ್ನಿಸೋಣ ಎಂದರು.
ವೇದಿಕೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷ ಸಂದೇಶ್ ಕುಮಾರ್, ಎಂ.ಪಿ.ಎಂ ಕಾಲೇಜಿನ ಇಂಟರ್ಯಾಕ್ಟ್ ಅಧ್ಯಕ್ಷೆ ಸುವೀಕ್ಷಾ ಪೂಜಾರಿ, ಆರ್‌ಸಿಸಿ ಕ್ಲಬ್ & ಕಾಳಿಕಾಂಬ ಅಧ್ಯಕ್ಷೆ ಆಶಾ ಜಗದೀಶ್ ಆಚಾರ್ಯ, ಕಲ್ಲಂಬಾಡಿ ಪದವಿನ ಅಧ್ಯಕ್ಷ ಸುರೇಶ್ ಆಚಾರ್ಯ, ಆನ್ಸ್ ಕ್ಲಬ್ಬಿನ ಉಪಾಧ್ಯಕ್ಷೆ ನವ್ಯ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಸುಡುಮದ್ದು ಪ್ರದರ್ಶನ, ಗೂಡು ದೀಪಗಳ ಅಲಂಕಾರ ರಂಗೋಲಿಯ ಚಿತ್ತಾರವು ಕ್ಲಬ್ ಗಳ ಸದಸ್ಯರಿಂದ ಯೋಜಿಸಲಾಗಿತ್ತು.
ಗೀತಾ ಕಾಮತ್ ಪ್ರಾರ್ಥಿಸಿದರು. ಅಧ್ಯಕ್ಷರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.
ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ಧಿಯ ಮಾಹಿತಿ ಕಾರ್ಯಾಗಾರ ಹಾಗೂ ಮಾನವಿಕ ಸಂಘದ ಉದ್ಘಾಟನಾ ಕಾರ್ಯಕ್ರಮ
ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಮಾನವಿಕ ಸಂಘ ಹಾಗೂ ಯುವಸ್ಪಂದನ ಉಡುಪಿ ಇದರ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿಯ ಮಾಹಿತಿ ಕಾರ್ಯಾಗಾರ ಹಾಗೂ ಮಾನವಿಕ ಸಂಘದ ಉದ್ಘಾಟನೆ ಜರುಗಿತು.
ಕಾರ್ಯಕ್ರಮದಲ್ಲಿ ಶ್ಯಾಮಲ ಸಲಹೆಗಾರರು ಹಾಗೂ ಯುವಸ್ಪಂದನದ ಕೇಂದ್ರದಲ್ಲಿ ಯುವಪರಿವರ್ತಕರಾಗಿ ಕಾರ್ಯನಿರ್ವಹಿಸುತ್ತಿರುವ ಸುನೀತಾ ಇವರು ಸಂವಹನ, ಧೃಢನಿಶ್ಚಯ ಮತ್ತು ಸಹಾಯ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯದ ಬಗ್ಗೆ ಮಾತನಾಡಿ, ಬೇರೆ ಬೇರೆ ಚಟುವಟಿಕೆಗಳ ಮೂಲಕ ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆಯಾದ ಪ್ರೋ ಗೀತಾ. ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾನವಿಕ ಸಂಘದ ನಿರ್ದೇಶಕರಾದ ಸೋನಾ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ವೇತಾ ವಂದಿಸಿದರು. ಅನನ್ಯ ತೃತೀಯ ಬಿ.ಕಾಂ ಕಾರ್ಯಕ್ರಮ ನಿರ್ವಹಿಸಿದರು.
ಅತೀ ಹೆಚ್ಷು ಸಹಿ ಸಂಗ್ರಹ ಮಾಡಿದ ವಾಡ್೯ ಸಮಿತಿಗೆ ಪ್ರೋತ್ಸಾಹಕ ಬಹುಮಾನ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ದೇಶವ್ಯಾಪಿ ನಡೆಸುತ್ತಿರುವ “ಸ್ಟಾಪ್ ವೋಟ್ ಚೋರಿ” ಅಭಿಯಾನಕ್ಕೆ ಬೆಂಬಲವಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಸಹಿ ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಅವರು ಮಾತನಾಡಿ ಮತದಾನ ದೇಶದ ಪ್ರಜೆಗಳ ಹಕ್ಕು, ಆದರೆ ಮತಗಳ್ಳತನದ ಮೂಲಕ ಬಿಜೆಪಿ ಈ ದೇಶದ ಜನತೆಗೆ ಅತೀ ದೊಡ್ಡ ದ್ರೋಹವೆಸಗಿದೆ ಇದರ ವಿರುದ್ದ ನಾವೆಲ್ಲರೂ ಒಂದಾಗಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಮಾತನಾಡಿ, ಬಿಜೆಪಿ ಅಧಿಕಾರಕ್ಕಾಗಿ ಜನರ ಹಕ್ಕನ್ನು ಕಸಿಯುವ ದೇಶ ದ್ರೋಹದ ಕೆಲಸ ಮಾಡಿದೆ. ಇದರ ವಿರುದ್ದ ಪ್ರತಿಯೊಬ್ಬ ಪ್ರಜೆಯೂ ದ್ವನಿ ಎತ್ತಬೇಕು ಬೂತ್ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಎಲ್ಲರೂ ಸಹಕಾರ ನೀಡಬೇಕು ಅತೀ ಹೆಚ್ಚು ಸಹಿ ಸಂಗ್ರಹ ಮಾಡಿದ ವಾಡ್೯ ಸಮಿತಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅದ್ಯಕ್ಷ ಅಜಿತ್ ಹೆಗ್ಡೆ ಮಾಳ, ಕೆ.ಎಮ್.ಎಫ್. ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷರಾದ ಜಾರ್ಜ್ ಕ್ಯಾಸ್ಟಲಿನ್, ಕೆಡಿಪಿ ಸದಸ್ಯ ಕುಕ್ಕುಂದೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರುಕ್ಮಯ್ಯ ಶೆಟ್ಟಿಗಾರ್, ಮನೋಜ್, ಚರಿತ್ರಾ ಭಂಡಾರಿ, ಪ್ರತಿಮಾ ರಾಣೆ, ಶೋಭಾ ರಾಣೆ, ರಜನಿ, ಪರಿಶಿಷ್ಟ ಘಟಕದ ಅಧ್ಯಕ್ಷ ರಾಘವ ಕುಕ್ಕುಜೆ, ರಮೇಶ್ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.
ಬಾರ್ ನಲ್ಲಿ ಗಣೇಶ್ ಪೂಜಾರಿ ಎಂಬಾತನು ಮದ್ಯ ಸೇವಿಸಿ ಬಳಿಕ ಪಕ್ಕದಲ್ಲಿ ಕುಳಿತ ಗ್ರಾಹಕರಿಗೆ ಅನಗತ್ಯ ತೊಂದರೆ ಕೊಡುತ್ತಿದ್ದನ್ನು ಪ್ರಶ್ನಿಸಿ, ತಡೆದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ ಘಟನೆ ಬೈಲೂರಿನಲ್ಲಿ ನಡೆದಿದೆ.
ಆರೋಪಿಯು ಬಾರ್ ನಿಂದ ಹೊರಬಂದು ತನ್ನ ಕಾರನ್ನು ವೇಗವಾಗಿ ಚಲಾಯಿಸಿ ಬಾರ್ ನ ಜಗಲಿ ಮೇಲೆ ಸಿಲುಕಿದ್ದ, ಬಳಿಕ ಮಾಲಕರನ್ನು ಬೆದರಿಸಿ ತೆರಳಿದ್ದಾನೆ.
ಈ ಬಗ್ಗೆ ಬಾರ್ ಮಾಲಕ ಚಂದ್ರಶೇಖರ ಮಾಡ ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ವತಿಯಿಂದ ಗೋಪೂಜೆ ಕಾರ್ಯಕ್ರಮವು ಅ.24 ರಂದು ಕಾರ್ಕಳದ ತೆಳ್ಳಾರು ವೆಂಕಟರಮಣ ಗೋಶಾಲೆಯಲ್ಲಿ ಅಧ್ಯಕ್ಷರಾದ ಶ್ರೀಮತಿ ವಿನಯ ಡಿ ಬಂಗೇರ ಅವರ ನೇತೃತ್ವದಲ್ಲಿ ನಡೆಯಿತು.
ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಗೋವುಗಳಿಗೆ ಪೂಜೆ ಸಲ್ಲಿಸಿ, ತಿನಸುಗಳನ್ನು ನೀಡಿ, ಮಹಿಳಾ ಮೋರ್ಚಾದಿಂದಿರುವ ಗೋಹುಂಡಿಯ ಕಾಣಿಕೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಬಿಜೆಪಿಯ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್, ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ ,ಕಾರ್ಯದರ್ಶಿಗಳಾದ ಕವಿತಾ ಹರೀಶ್, ಮಹಿಳಾ ಮೋರ್ಚಾ ತಾಲೂಕು ಉಪಾಧ್ಯಕ್ಷರುಗಳಾದ ಭಾರತಿ ಅಮೀನ್, ಪಲ್ಲವಿ ಪ್ರವೀಣ್, ಕಾರ್ಯದರ್ಶಿಗಳಾದ ಲಕ್ಷ್ಮೀಶೆಟ್ಟಿ, ಲಕ್ಷ್ಮೀ ಕಿಣಿ, ಕೋಶಾಧಿಕಾರಿ ಸುಚಿತ್ರಾ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶುಭಾ ಪಿ ಶೆಟ್ಟಿ, ಮಮತಾ ಸುವರ್ಣ ಹಾಗೂ ಪ್ರಮೀಳಾ ಪೂಜಾರಿ. ಪುರಸಭೆಯ ಮಾಜಿ ಅಧ್ಯಕ್ಷರಾದ ಸುಮಾಕೇಶವ್, ಪದಾಧಿಕಾರಿಗಳಾದಂತಹ ಜ್ಯೋತಿ ರಮೇಶ್, ಗೀತಾ ದಾನಶಾಲೆ, ದೀಪಾ ನಾಯಕ್, ಜ್ಯೋತಿ ಬಬಿತಾ, ನಿರೀಕ್ಷಾ ರಾಜೇಶ್, ರಜನಿ ಹೆಗ್ಡೆ, ಸ್ವಾತಿ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.