ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ನ ಹತ್ತನೇ ತರಗತಿಯ ಗಣ್ಯ ಪೂಜಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಹತ್ತನೇ ಕ್ರೈಸ್ಟ್ ಕಿಂಗ್ ತರಗತಿಯ ಗಣ್ಯ ಪೂಜಾರಿ ರಾಷ್ಟçಮಟ್ಟಕ್ಕೆ ಆಯ್ಕೆ
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ರಾಮನಗರ ಜಿಲ್ಲಾಡಳಿ, ಜಿಲ್ಲಾ ಪಂಚಾಯತ್ ರಾಮನಗರ ಇವರ ಜಂಟಿ ಆಶ್ರಯದಲ್ಲಿ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮೈಸೂರು ವಿಭಾಗದ ತಂಡವನ್ನು ಪ್ರತಿನಿಧಿಸಿದ್ದ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ಗಣ್ಯ ಪೂಜಾರಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾಳೆ.
ಮುಂದೆ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಗಣ್ಯ ಪೂಜಾರಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಸಾಧಕ ವಿದ್ಯಾರ್ಥಿನಿಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಕಾರ್ಕಳ:ದೀಪಾವಳಿ ಹಬ್ಬದ ಪ್ರಯುಕ್ತ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ವಿಶೇಷ ಕೊಡುಗೆ
ಕಾರ್ಕಳ:ಸದಾಶಿವ ಟವರ್ಸ್ ನಲ್ಲಿರುವ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಆಕರ್ಷಕ ಆಫರ್ ಗಳು ಪ್ರಾರಂಭಗೊಂಡಿದೆ.ದೀಪಾವಳಿಯ ಪ್ರಯುಕ್ತ ಚಿನ್ನ,ಬೆಳ್ಳಿ ವಜ್ರಾಭರಣಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸಿಗಲಿದೆ.
ಬೆಳ್ಳಿಯ ಸಾಮಗ್ರಿ ಪ್ರತೀ ಕೆಜಿಗೆ ರೂ.3,000ರಿಯಾಯಿತಿ,ಚಿನ್ನಾಭರಣಗಳಿಗೆ ಪ್ರತೀ ಗ್ರಾಂ 200ರೂ. ಗೆ ರಿಯಾಯಿತಿ ಮತ್ತು ಪ್ರತೀ ಕ್ಯಾರೆಟ್ ವಜ್ರಾಭರಣಕ್ಕೆ ರೂಪಾಯಿ 7,000 ರಿಯಾಯಿತಿ ಸಿಗಲಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೇಟಿ ನೀಡಿ:ನ್ಯೂ ಪವನ್ ಜ್ಯುವೆಲ್ಲರ್ಸ್ ಸದಾಶಿವ ಟವರ್ಸ್ ಅನಂತಶಯನ ರಸ್ತೆ ಕಾರ್ಕಳ:ಮೊಬೈಲ್-831049199
ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯಕ್ ರವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ವಜಾಗೊಳಿಸಲು ರಾಜ್ಯ ಹೈಕೋಟ್೯ ನಿರಾಕರಿಸಿದೆ.
ಕೃಷ್ಣ ಶೆಟ್ಟಿ ಯವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣದ ವಿರುದ್ಧ ಕೃಷ್ ಆರ್ಟ್ ವರ್ಲ್ಡ್ ನ ಕೃಷ್ಣ ನಾಯಕ್ ರವರು ರಾಜ್ಯ ಹೈಕೋಟ್೯ನಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠ ಇಂದು ತಿರಸ್ಕಾರ ಮಾಡಿ ಆದೇಶ ಹೊರಡಿಸಿದೆ.
ಕೃಷ್ಣ ಶೆಟ್ಟಿ ಯವರ ಪರವಾಗಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಬೆಂಗಳೂರಿನ ವಿ ಕೆ ಶ್ರೀಕಾಂತ್ ರವರು ವಾದ ವನ್ನು ಮಂಡಿಸಿರುತ್ತಾರೆ.ಆರೋಪಿ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ರವರು, ನಿರ್ಮಿತಿ ಕೇಂದ್ರದ ಪರ ದಿನೇಶ್ ಹೆಗ್ಡೆ ಉಳಿಪಾಡಿ ಹಾಗೂ ಸರಕಾರದ ಪರವಾಗಿ ಬಿ ಏನ್ ಜಗದೀಶರವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿರುತ್ತಾರೆ.
ಬಜಗೋಳಿ:ಪವರ್ ಕೇರ್ ಬ್ಯಾಟರಿ ಸೇಲ್ಸ್ & ಸರ್ವಿಸ್ ಸೆಂಟರ್ ಶುಭಾರಂಭ
ಪವರ್ ಕೇರ್ ಬ್ಯಾಟರಿ, ಸೋಲಾರ್, ಇನ್ವರ್ ಟರ್ ಸೇಲ್ಸ್ & ಸರ್ವಿಸ್ ನ ಕೇಂದ್ರವು ಬಜಗೋಳಿ ಕರ್ಮಾರ್ ಕಟ್ಟೆ ಬಳಿ ಅಗ್ನಿಲಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.
ಉದ್ಘಾಟನೆಯನ್ನು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿ ನೆರವೇರಿಸಿದರು.
ಈ ಸಂಧರ್ಭದಲ್ಲಿ ಕೆ.ಎಂ.ಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕುಮಾರ್, ರಜತ್ ರಾಮ್ ಮೋಹನ್ ಹಾಗೂ ರಮಾಕಾಂತ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.
ಕಾರ್ಕಳ:ಪ್ರಕಾಶ್ ಹಾಗೂ ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿ ಆಫರ್
ಚಿನ್ನ ಕೊಳ್ಳುವವರಿಗೆ ಭರ್ಜರಿ ಸಿಹಿ ಸುದ್ದಿಯೊಂದಿದೆ.
ಈ ದೀಪಾವಳಿ ಚಿನ್ನದ ಆಭರಣಗಳನ್ನು ಖರೀದಿಸಲು ಉತ್ತಮ ಸಂದರ್ಭವಾಗಿದೆ.
ಕಾರ್ಕಳ ಪ್ರಕಾಶ್ ಜ್ಯುವೆಲ್ಲರ್ಸ್ ಮತ್ತು ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿ ಆಫರ್ ಪ್ರಾರಂಭಗೊಂಡಿದೆ.ಅಕ್ಟೊಬರ್ 19 ನಿಂದ ನವೆಂಬರ್ 10ರ ವರೆಗೆ ಪ್ರತೀ ಗ್ರಾಂ ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಗೆ 350ರೂಪಾಯಿವರೆಗೆ ರಿಯಾಯಿತಿ ಲಭ್ಯವಿದೆ.
ಅಲ್ಲದೆ ಗ್ರಾಹಕರ ಹಳೆಯ 916 ಚಿನ್ನವನ್ನು ಅತೀ ಹೆಚ್ಚಿನ ದರದಲ್ಲಿಎಕ್ಸ್ ಚೇಂಜ್ ಮಾಡುವ ಅವಕಾಶವಿದೆ.ಇದೀಗ ಕಾರ್ಕಳದ ಪ್ರಕಾಶ್ ಮತ್ತು ಜೋಡುರಸ್ತೆಯ ಸ್ವರ್ಣ ಪ್ರಕಾಶ್ ಈ ಎರಡೂ ಜ್ಯೂವೆಲ್ಲರ್ಸ್ ಗಳಲ್ಲಿ ಲಭ್ಯವಿದೆ .
ಅತ್ಯುತ್ತಮ ಡಿಸೈನ್ಸ್,ಲೈಟ್ ವೈಟ್ ನೆಕ್ಲೆಸ್ , antique ಬಳೆಗಳು, antique ಹಾರಾ, ಮತ್ತು ವಜ್ರದ ಆಭರಣಗಳು ಲಭ್ಯವಿದೆ.
ಆರ್ಡರ್ ಆಧಾರದ ಮೇಲೆ ನಾವು ನಿಮ್ಮ ವಿಶೇಷ ಸಮಾರಂಭಗಳಿಗಾಗಿ 14kt ಮತ್ತು 18kt ವಜ್ರದ ಆಭರಣಗಳನ್ನು ಅತ್ಯಂತ ಕೈಗೆಟುಕುವ ದರದಲ್ಲಿ ನೀಡುತ್ತೇವೆ
ಚಿನ್ನಾಭರಣಗಳನ್ನು ಖರೀದಿಸಲು ಇದೆ ಸುಸಂದರ್ಭವಾಗಿದ್ದು ಇಂದೇ ಭೇಟಿ ನೀಡಿ ಪ್ರಕಾಶ್ ಜೆವೆಲ್ಲರ್ಸ್ ಕಾರ್ಕಳ ಮತ್ತು ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್, ಜೋಡುರಸ್ತೆ ಕಾರ್ಕಳ
ಯಾವುದೇ ವಿಚಾರಣೆಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:
ಪ್ರಕಾಶ್ ಜೆವೆಲ್ಲರ್ಸ್ ಕಾರ್ಕಳ – 8762117314
ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್, ಜೋಡುರಸ್ತೆ ಕಾರ್ಕಳ – 7204429777
ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ನಿಂದಿಸಿದ ಪ್ರಕರಣದ ಕುರಿತು ಬಿಜೆಪಿ ಮೌನವಾಗಿರುವುದು ಮೌನಂ ಸಮ್ಮತಿ ಲಕ್ಷಣಂ ಎಂದಂತೆ: ರಾಘವ ಕುಕ್ಕುಜೆ
ದೇಶದ ಪವಿತ್ರ ಗ್ರಂಥ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನವನ್ನು ಗೌರವಿಸುವ ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಿಸುತ್ತಾನೆ. ಆದರೆ ದೇಶದ ಸಂವಿಧಾನದ ಮೇಲೆ ಗೌರವವೇ ಇಲ್ಲದ ದೇಶದ್ರೋಹಿಗಳು ಮಾತ್ರಾ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ.
ಈ ದೇಶದಲ್ಲಿ ಎಲ್ಲರೂ ಸಮಾನರು, ದಲಿತರೂ ಸೇರಿದಂತೆ ಎಲ್ಲಾ ಜಾತಿ ಮತ ಪಂಥ ಧರ್ಮದ ಜನರಿಗೆ ನಮ್ಮ ದೇಶದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಇದೆ. ಭಾರತದ ಸಂವಿಧಾನವು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ, ಆದರೆ ಸಂವಿಧಾನದ ಮೇಲೆ ಗೌರವ ಇಲ್ಲದ ಉಮೇಶ್ ನಾಯ್ಕ ಸೂಡ ಎನ್ನುವ ಬಿಜೆಪಿ ಮುಖಂಡನು ದಲಿತರನ್ನು ಹಾಗೂ ಅಂಬೇಡ್ಕರ್ ಅವರನ್ನು ಅವಮಾನಿಸಿರುವುದು ಅತ್ಯಂತ ಖಂಡನೀಯ. ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವ ಇಂತಹ ಮನಸ್ಥಿತಿಯುಳ್ಳವರು ದೇಶದ ಏಕತೆಗೆ ಮಾರಕ.
ಎಲ್ಲರಿಗೂ ದೇಶಭಕ್ತಿಯ ಪಾಠವನ್ನು ಬೋಧಿಸುವ ಬಿಜೆಪಿ ಪಕ್ಷವು ತನ್ನ ಪಕ್ಷದ ಮುಖಂಡ ಉಮೇಶ್ ನಾಯ್ಕನ ಈ ದೇಶದ್ರೋಹಿ ಕೃತ್ಯಕ್ಕೆ ಮೌನವಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ಅವಮಾನ ಮಾಡಿದ ತನ್ನದೇ ಪಕ್ಷದ ಮುಖಂಡನ ಈ ದುಷ್ಕೃತ್ಯದ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಲಿ. ಸಮುದಾಯಗಳ ನಡುವೆ ಅಪನಂಬಿಕೆ ದ್ವೇಷವನ್ನು ಹರಡಲು ಪ್ರಯತ್ನಿಸಿದ ಆರೋಪಿಯನ್ನು ಬಂಧಿಸಿದ ಉಡುಪಿ ಜಿಲ್ಲಾ ಪೋಲಿಸರಿಗೆ ಅಭಿನಂದೆನಗಳು ಎಂದು ಕಾರ್ಕಳ ಭೂನ್ಯಾಯ ಮಂಡಳಿ ಸದಸ್ಯರಾದ ರಾಘವ ಕುಕ್ಕುಜೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೇತನಾ ವಿಶೇಷ ಶಾಲೆಯಲ್ಲಿ ಸಿದ್ಧಗೊಳಿಸಿದ ಹಣತೆಗಳು ಮಾರಾಟಕ್ಕೆ ಬಿಡುಗಡೆ.
ಈ ಬಾರಿಯ ದೀಪಾವಳಿಗೆ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹಾಗೂ ವಿವಿಧ ಆಕಾರಗಳೊಂದಿಗೆ ಸಿದ್ಧಗೊಳಿಸಿದ ಮಣ್ಣಿನ ಹಣತೆಗಳನ್ನು ನಮ್ಮ ಶಾಲಾ ದಾನಿಗಳು ಹಾಗೂ ಹಿತೈಷಿಗಳು ಆದ ಕಾರ್ಕಳ್ ಕಮಲಾಕ್ಷ ಕಾಮತ್‌ರವರು ದೀಪ ಬೆಳಗಿಸುವುದರ ಜೊತೆ ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ಇಂತಹ ಒಂದು ಒಳ್ಳೆಯ ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಬದುಕಲು ನಡೆಸುವ ಪ್ರಯತ್ನದಲ್ಲಿ ಇದೀಗ ಕೇವಲ ಹತ್ತು ರೂಪಾಯಿಂದ ಪ್ರಾರಂಭಗೊಳ್ಳುವ ಈ ಬಣ್ಣದ ಹಣತೆಗಳನ್ನು ಶಾಲೆಗೆ ಭೇಟಿ ನೀಡಿ ನಿಮ್ಮ ಆಯ್ಕೆಯ ಹಣತೆಗಳನ್ನು ಖರೀದಿಸಿ ಪ್ರೋತ್ಸಾಹಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವಿನಂತಿ ಮಾಡುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ. ಗಣಪತಿ ಪೈ, ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್ ಅತಿಥಿ ಗಣ್ಯರು, ಶಾಲಾ ಹಿತೈಷಿಗಳು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480531469.
ಕಾರ್ಕಳ:ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 7-00ರ ತನಕ ಕಾರ್ಕಳ ಬಸ್ ನಿಲ್ದಾಣದಲ್ಲಿರತನ್ ಟಾಟಾರವರಿಗೆ ಶೃದ್ದಾಂಜಲಿ ಸಭೆ
ಪದ್ಮವಿಭೂಷಣ, ಮಹಾ ಮಾನವತಾವಾದಿ ಶ್ರೀ ರತನ್ ಟಾಟಾ ಅವರಿಗೆ ಸಾರ್ವಜನಿಕ ಶೃದ್ದಾಂಜಲಿ ಸಭೆಯನ್ನು ಬುಧವಾರ ದಿನಾಂಕ 16 – 10 -2024ರಂದು ಕಾರ್ಕಳ ಬಸ್ ನಿಲ್ದಾಣದಲ್ಲಿ ಅಭಿನವ ಭಾರತ ಸೊಸೈಟಿ ಆಯೋಜಿಸಿದೆ.
ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ,ದೇಶದ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ ದೇಶಭಕ್ತ ಉದ್ಯಮಿ,ದೇಶದ ಜನರ ಸಮಸ್ಯೆಗೆ ಸದಾ ಮಿಡಿದ ಮಹಾ ಮಾನವತಾವಾದಿ,
ದೇಶದ ಸಂಕಷ್ಟಕ್ಕೆ ಅವಿರತ ಸ್ಪಂದಿಸಿದ ಲೋಕೋಪಕಾರಿ,ಭಾರತ ಮಾತೆಯ ಹೆಮ್ಮೆಯ ಸುಪುತ್ರ, ದೇಶ ಭಕ್ತರ ಪ್ರೀತಿಯ ರತನ್ ಟಾಟಾರವರು ಸ್ವರ್ಗಸ್ಥರಾಗಿದ್ದು ಅವರ ಅದ್ವಿತೀಯ ಸಾಧನೆ, ಅಪ್ರತಿಮ ದೇಶಭಕ್ತಿಯನ್ನು ಮೆಲುಕು ಹಾಕುತ್ತಾ ಅವರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆಯಾಗಿದೆ.
ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 7-00ರ ತನಕ ಕಾರ್ಕಳ ಬಸ್ ನಿಲ್ದಾಣದಲ್ಲಿ ಪದ್ಮವಿಭೂಷಣ ಶ್ರೀ ರತನ್ ಟಾಟಾರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಕಾರ್ಕಳದ ದೇಶಭಕ್ತ ನಾಗರೀಕರ ಬಂಧು ಬಗಿನಿಯರಿಗೆ ಅವಕಾಶ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ದಲಿತ ನಿಂದನೆ ಮಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡನನ್ನು ಶ್ರಮಿಕವರ್ಗದವರೇ ಸಮಾಜದಿಂದ ಒದ್ದೋಡಿಸುವ ಕೆಲಸ ಮಾಡಬೇಕಾಗಿದೆ-ಕಿರಣ್ ಹೆಗ್ಡೆ
ಹಿಂದೂ ಜಾಗರಣ ವೇದಿಕೆಯ ನಾಯಕರೊಬ್ಬರು ಮನುವಾದ ಸಂಸ್ಕೃತಿಯನ್ನು ಮುಂದಿಟ್ಟುಕೊಂಡು ದಲಿತರನ್ನು ನಿಂದನೆ ಮಾಡಿರುವುದನ್ನು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ ಕಾರ್ಕಳ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಶ್ರಮಿಕ ವರ್ಗದವರನ್ನು ಸಮಾಜದಲ್ಲಿ ಗೌರವ ಭಾವನೆಯಿಂದ ನೋಡಿಕೊಂಡೇ ಬರಲಾಗಿದೆ ಆ ಕೆಲಸವನ್ನು ಕಾಂಗ್ರೆಸ್ ಪಕ್ಷ ಕೂಡಾ ಮಾಡುತ್ತಲೇ ಬಂದಿದೆ.
ಶ್ರಮಿಕ ವರ್ಗದಲ್ಲಿ ದಲಿತ ಸಮಾಜದವರದ್ದೇ ಬಹು ಸಂಖ್ಯೆಯಾಗಿರುವುದರಿಂದ ಅವರನ್ನು ನಿಂದಿಸಿವುದು ಅಥವಾ ನಾಡು ಬಿಟ್ಟು ತೊಲಗುವಂತೆ ಮಾಡುವುದಕ್ಕೆ ಮನುವಾದಿ ಸಂಸ್ಕೃತಿಯ ನಾಯಕರಿಗೆ ಸಾಧ್ಯವಿಲ್ಲ. ಅಂಥ ಮುಖಂಡರನ್ನು ಶ್ರಮಿಕವರ್ಗದವರೇ ಸಮಾಜದಿಂದ ಒದ್ದೋಡಿಸುವ ಕೆಲಸ ಮಾಡಬೇಕಾಗಿದೆ ಎಂದು ಕಿರಣ್ ಹೆಗ್ಡೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಯೋಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿನ 12ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ‘ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ ಲಿಂಗ ಸಮಾನತೆ ಸಾಧಿಸಿ’ ಹಾಗು ‘ನಮ್ಮ ಭಾರತಕ್ಕಾಗಿ ನಮ್ಮ ಯುವಜನತೆ’ ನಮ್ಮ ಎಂಬ ಶಿರೋನಾಮೆಯ ಅಡಿಯಲ್ಲಿ ಕೂಡ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೇದಿಕೆಯಲ್ಲಿ ಜರುಗಿತು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗು ಬಜಗೋಳಿಯ ಸುಪ್ರಸಿದ್ಧ ವೈದ್ಯರಾದ ಡಾ. ವೆಂಕಟಗಿರಿ ರಾವ್ ಇವರು ತಮ್ಮ ಸಮಾರೋಪ ಭಾಷಣದಲ್ಲಿ ‘ಭ್ರೂಣ ಹತ್ಯೆಯು ವೈದ್ಯಕೀಯ ವಲಯ ತಲೆ ತಗ್ಗಿಸುವ ವಿಚಾರವಾಗಿದ್ದು ಇದರ ಬಗ್ಗೆ ವೈದ್ಯ ಸಮೂದಾಯ ಅಲೋಚನೆ ಮಾಡಬೇಕಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಸುಮಾರು ಏಳು ದಿನಗಳ ಶಿಬಿರದಲ್ಲಿ ಮುನಿರಾಜ ರೇಂಜಾಳ ಇವರಿಂದ ‘ಪರಿಪೂರ್ಣ ಶಿಕ್ಷಣ’, ಡಾ.ಸತ್ಯನಾರಾಯಣ ಭಟ್ ಇವರಿಂದ ‘ನಮ್ಮ ಪರಿಸರ ನಮ್ಮ ಜವಾಬ್ದಾರಿ’ ಡಾ. ಚಂದ್ರಕಾಂತ ಜೋಷಿ ಇವರಿಂದ ‘ಊಟ ಬಲ್ಲವನಿಗೆ ರೋಗವಿಲ್ಲ’, ಬೆನೆಡಿಕ್ಟ್ ಫೆರ್ನಾಂಡಿಸ್ ಇವರಿಂದ ‘ಮಾಹಿತಿ ಹಕ್ಕುಗಳ ಅಧಿನಿಯಮ’ಶ್ರೀಮತಿ ಆರತಿ ಅಶೋಕ್ ಇವರಿಂದ ‘ನಮ್ಮ ನೈಸರ್ಗಿಕ ಸಂಪನ್ಮೂಲಗಳ ಪ್ರಾಮುಖ್ಯತೆ’
ಸಂತೋಷ್ ಮಾಳ ಇವರಿಂದ ‘ಕರಕೌಶಲ್ಯ’, ಸುಜಿತ್ ಮಾಳ ಇವರಿಂದ,’ರಂಗತರಬೇತಿ’
ಮುಂತಾದವುಗಳ ಬಗ್ಗೆ ವಿಚಾರಧಾರೆ ಕಾರ್ಯಕ್ರಮಗಳು ಜರಗಿದವು.
ರೋಟರಿ ಕ್ಲಬ್ ಕಾರ್ಕಳ ಹಾಗು ವನ್ಯ ಜೀವಿ ಉಪವಿಭಾಗ ಕಾರ್ಕಳ ಇವರ ಸಹಯೋಗದೊಂದಿಗೆ ‘ಕುದುರೆಮುಖ ಅರಣ್ಯ ವಲಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹ ಮತ್ತು ವಿಲೇವಾರಿ’ ಕಾರ್ಯಕ್ರಮ ನಡೆಯಿತು.
ಶ್ರೀಮತಿ ಆರತಿ ಅಶೋಕ್ ಇವರ ಸಹಯೋಗದೊಂದಿಗೆ ‘ಸ್ವರ್ಣ ನದಿ ತಟಗಳಲ್ಲಿ ಸುಮಾರು 300 ಗಿಡಗಳನ್ನು ನೆಟ್ಟು ಜಲರಕ್ಷಣೆ’ ಕಾರ್ಯ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ದ್ವಿತೀಯ ಪಿ.ಯು .ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 7 ಜನ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು.
ಉದ್ಯಮಿ ವಿಶ್ವೇಶ್ವರ ಜೋಶಿ, “ಅಮ್ಮನ ನೆರವು” ಟ್ರಸ್ಟ್ ನ ಅವಿನಾಶ್ ಜಿ ಶೆಟ್ಟಿ , ವಿಶ್ರಾಂತ ಮುಖ್ಯೋಪಾಧ್ಯಾಯರಾದ ವಸಂತ್ ಎಂ,
ವಸಂತ್ ಸೇರಿಗಾರ್,ಸುಧಾಕರ್ ಶೆಟ್ಟಿ , ಶ್ರೀಮತಿ ಹರಿಣಿ, ಯೂಟ್ಯೂಬ್ ಚಾನಲನ ಚಂದು , ದಿವಾಕರ್ ಶೇರ್ವೆಗಾರ್ ಉಪಸ್ಥಿತರಿದ್ದರು.
ಸ್ವಯಂಸೇವಕರಾದ ಗುರುಪ್ರಸಾದ್ ಮತ್ತು ಅಶ್ವಿತಾ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು
ಶ್ರೀಮತಿ ಸಂಧ್ಯಾ ಸ್ವಾಗತಿಸಿ,ಕಾರ್ಯಕ್ರಮ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಶಿಬಿರದ ವರದಿ ವಾಚನ ಮಾಡುವುದರೊಂದಿಗೆ ವಂದಿಸಿದರು. ಸ್ವಯಂಸೇವಕಿ ಅನ್ವಿತಾ ಇವರು ಕಾರ್ಯಕ್ರಮ ನಿರೂಪಿಸಿದರು.
ಅತ್ಯುತ್ತಮ ಕಾರ್ಯನಿರ್ವಾಹಣ ತಂಡವಾಗಿ ” ಚಿಗುರು” ತಂಡ ಹಾಗು ಉತ್ತಮ ತಂಡವಾಗಿ ” ನಿಸರ್ಗ ” ತಂಡ ಕ್ರಿಯಾಶೀಲ ತಂಡವಾಗಿ ” ಬೆಳಕು” ತಂಡಗಳು ಪ್ರಶಸ್ತಿಯನ್ನು ಪಡೆದುಕೊಂಡವು.