Home Blog Page 68

ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ‘ಹೊಂಗಿರಣ’ಯೋಜನೆಗೆ ಅರ್ಜಿ ಆಹ್ವಾನ

0

ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ‘ಹೊಂಗಿರಣ’ಯೋಜನೆಗೆ ಅರ್ಜಿ ಆಹ್ವಾನ

ದ್ವಿತೀಯ ಪಿಯುಸಿ ಹಾಗೂ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಫಲಿತಾಂಶಗಳ ಮೂಲಕ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಉನ್ನತ ವ್ಯವಸ್ಥೆಯಡಿಯಲ್ಲಿ ಹೈಟೆಕ್ ಸೌಲಭ್ಯದೊಂದಿಗೆ ಪಿ. ಯು. ಶಿಕ್ಷಣ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಿಕೊಡಬೇಕೆಂಬ ಮಹಾದಾಸೆಯಿಂದ ‘ಕ್ರಿಯೇಟಿವ್ ಹೊಂಗಿರಣ’ ಯೋಜನೆಯನ್ನು ರೂಪಿಸುತ್ತಿದೆ.

ಈ ಯೋಜನೆಯಡಿಯಲ್ಲಿ 100 ಅರ್ಹ ವಿದ್ಯಾರ್ಥಿಗಳು ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಅಥವಾ ಪ್ರೋತ್ಸಾಹ ಧನದೊಂದಿಗೆ ಪಿ. ಯು ಶಿಕ್ಷಣ ಪಡೆಯುವ ಅವಕಾಶವಿರುತ್ತದೆ. ಈ ಯೋಜನೆಗೆ ವಿಜ್ಞಾನ ವಿಭಾಗ ಸೇರಲಿಚ್ಛಿಸುವ ಯಾವುದೇ ವಿದ್ಯಾರ್ಥಿ www.creativeedu.in ಮುಖಾಂತರ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳ ಸಾಧಿಸುವ ಛಲಕ್ಕೆ ಬೆನ್ನೆಲುಬಾಗಿ ನಿಂತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಾಧನೆ ಮಾಡುವ ಹಂಬಲ ಇರುವ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದೆ. ಪೋಷಕರ ಹಾಗೂ ಪಾಲಕರ ಭರವಸೆಯನ್ನು ಈಡೇರಿಸುವಲ್ಲಿ ನಿರಂತರ ಶ್ರಮಿಸುತ್ತಿರುವ ವಿದ್ಯಾ ಸಂಸ್ಥೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +919606474298

ರಾಜ್ಯಮಟ್ಟದಲ್ಲಿ ಮಿಂಚಿದ ಜ್ಞಾನಸುಧಾ ಕಾಲೇಜು:ಟಾಪ್ 10ನಲ್ಲಿ ಜ್ಞಾನಸುಧಾದ 29 ವಿದ್ಯಾರ್ಥಿಗಳು

0

ಟಾಪ್ 10 ಜ್ಞಾನಸುಧಾದ 29 ವಿದ್ಯಾರ್ಥಿಗಳು
ವಿಜ್ಞಾನ ವಿಭಾಗ : ಆಸ್ತಿ ಎಸ್ ಶೆಟ್ಟಿ ರಾಜ್ಯಕ್ಕೆ 4ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ
ವಾಣಿಜ್ಯ ವಿಭಾಗ : ಸಹನಾ ಮತ್ತು ತನ್ವಿ ರಾಜ್ಯಕ್ಕೆ 6ನೇ ಹಾಗೂ ಜಿಲ್ಲೆಗೆ 2ನೇ ಸ್ಥಾನ

ಜ್ಞಾನಸುಧಾದ 724 ವಿಶಿಷ್ಟ ಶ್ರೇಣಿ
ಗಣಿತನಗರ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 29 ವಿದ್ಯಾರ್ಥಿಗಳು 10ರೊಳಗಿನ ರ‍್ಯಾಂಕ್ ಪಡೆದಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಆಸ್ತಿ ಎಸ್ ಶೆಟ್ಟಿ 596 ಅಂಕಗಳೊAದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು, ಶ್ರೀ ರಕ್ಷಾ ಬಿ ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ ಕುಮಾರ್ 595 ಅಂಕಗಳೊAದಿಗೆ ರಾಜ್ಯಕ್ಕೆ ಐದನೇ ಸ್ಥಾನಿಯಾಗಿ ಹಾಗೂ ಜಿಲ್ಲೆಗೆ 2ನೇ ಸ್ಥಾನವನ್ನು ಪಡೆದಿರುತ್ತಾರೆ.

ಕಾರ್ಕಳ ಜ್ಞಾನಸುಧಾದ ಮಯೂರ್ ಗೌಡ, ಭಾರ್ಗವ್ ಎಚ್ ನಾಯಕ್, ವಿಷ್ಣು ಜಿ ನಾಯಕ್ ಹಾಗೂ ಶ್ರಾವ್ಯ ವಾಗ್ಲೆ 594 ಅಂಕಗಳನ್ನು, ಹರ್ಷಿತ್ ಆರ್ ಎಚ್, ಅನ್ವಿತಾ ನಾಯಕ್, ವಿಶ್ವ ವಿನಾಯಕ್ ಹಾಗೂ ಉಡುಪಿ ಜ್ಞಾನಸುಧಾದ ಸ್ನೇಹ ಎ ಕಾಮತ್ 593 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಉತ್ಸವ್ ಸಿ ಪಾಟೀಲ್, ಸಂಜನಾ ಶೆಣೈ ಮತ್ತು ಉಡುಪಿ ಜ್ಞಾನಸುಧಾದ ರಚಿತ್ ಜೆ.ಬಿ ಹಾಗೂ ಸೃಷ್ಟಿ 592 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಸರ್ವಜಿತ್ ಕೆ.ಆರ್, ಧನ್ಯಶ್ರೀ ಆರ್ 591 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಅನುಷ್ಕಾ ಜಿ, ಪ್ರಣವ್ ಎನ್.ಎಂ, ಶ್ರೇಯಸ್ ಕೆ, ಅನ್ವಿತಾ ಆರ್ ಕಾಮತ್, ಸುಕೃತಿ ಜಿ. ಝೋಷಿ, ತನೀಷಾ ಶೆಟ್ಟಿ ಹಾಗೂ ಉಡುಪಿ ಜ್ಞಾನಸುಧಾದ ಶ್ರೀಹರಿ ಎಸ್.ಜಿ 590 ಅಂಕವನ್ನು ಗಳಿಸಿದ್ದಾರೆ.

ವಾಣಿಜ್ಯ ವಿಭಾಗ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಹನಾ ನಾಯಕ್ ಹಾಗೂ ತನ್ವಿ ರಾವ್ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 2ನೇ ಸ್ಥಾನಿಯಾಗಿ, ರಕ್ಷಾ ರಾಮಚಂದ್ರ 592 ಅಂಕ ಗಳಿಸಿ ರಾಜ್ಯಕ್ಕೆ 9ನೇ ಹಾಗೂ ಜಿಲ್ಲೆಗೆ 5ನೇ ಸ್ಥಾನಿಯಾಗಿ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಾದ ವಿ. ಯಶಸ್ವಿ ನಾಯ್ಕ್ (591 ಅಂಕ), ಸಚಿನ್ ಸುರೇಶ್ ಶೆಣೈ (589 ಅಂಕ) ಹಾಗೂ ಖತಿಜಾತುಲ್ ರಫಿಯಾ (588 ಅಂಕ) ಗಳಿಸಿದ್ದು ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು 88ಕ್ಕಿಂತ ಆಧಿಕ ಪರ್ಸಂಟೇಜ್ ಗಳಿಸಿದ್ದಾರೆ.

ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 521 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 488 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗÀದಲ್ಲಿ ಪರೀಕ್ಷೆಗೆ ಹಾಜರಾದ 49ರಲ್ಲಿ 45 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 4 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿ ಜ್ಞಾನಸುಧಾದ ವಿಜ್ಞಾನ ವಿಭಾಗದಲ್ಲಿ 213 ವಿದ್ಯಾರ್ಥಿಗಳಲ್ಲಿ 191 ವಿಶಿಷ್ಟ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಷಯವಾರು ಪೂರ್ಣಾಂಕದಲ್ಲಿ ಗಣಿತಶಾಸ್ತ್ರದಲ್ಲಿ-144, ಜೀವಶಾಸ್ತ್ರದಲ್ಲಿ 113, ರಸಾಯನಶಾಸ್ತ್ರದಲ್ಲಿ-48, ಭೌತಶಾಸ್ತ್ರದಲ್ಲಿ-27, ಸಂಖ್ಯಾಶಾಸ್ತ್ರ-20, ಗಣಕ ಶಾಸ್ತ್ರ-37, ಮೂಲಗಣಿತ-2,
ಲೆಕ್ಕ ಶಾಸ್ತ್ರ-7, ವ್ಯವಹಾರ ಅಧ್ಯಯನದಲ್ಲಿ 21, ಸಂಸ್ಕೃತ-113 ಮತ್ತು ಕನ್ನಡ-4 ಸೇರಿದಂತೆ 536 ವಿಷಯವಾರು ಪೂರ್ಣಾಂಕ ಬಂದಿರುತ್ತದೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಆಸ್ತಿ ಎಸ್
1. ASTHI S SHETTY 596
2. SHREERAKSHA B N 595
2. SHREERAKSHA B N 595
3. VISHWAS R ATHREYAS 595
3. VISHWAS R ATHREYAS 595
4. APOORV V KUMAR 595
4. APOORV V KUMAR 595
5. BHARGAV H N 594
5. BHARGAV H N 594
4.MAYUR M GOWDA 594
4.MAYUR M GOWDA 594
6. SHRAVYA 594
6. SHRAVYA 594
9. HARSHITHA R H 593
9. HARSHITHA R H 593
7. VISHNU G NAYAK 594
7. VISHNU G NAYAK 594
10. ANVITHA NAYAK 593
10. ANVITHA NAYAK 593
11.VISHWA VINAYAK 593
11.VISHWA VINAYAK 593
12. SNEHA A KAMATH 593
12. SNEHA A KAMATH 593
13. UTSAV C PATEL 592
13. UTSAV C PATEL 592
14. SANJANA SHENOY 592
14. SANJANA SHENOY 592
15. RACHIT J BOLYA 592
15. RACHIT J BOLYA 592
16. SRUSHTI 592
16. SRUSHTI 592
17.SARVAJITH K R 591
17.SARVAJITH K R 591
18. DHANYASHREE R 591
18. DHANYASHREE R 591
19. ANUSHKA R GAJAKOSH 590
19. ANUSHKA R GAJAKOSH 590
20. PRANAV N M 590
20. PRANAV N M 590
21. SHREYAS K 590
21. SHREYAS K 590
23. SUKRUTI G JOSHI 590
23. SUKRUTI G JOSHI 590
22. ANVITHA R KAMATH 590
22. ANVITHA R KAMATH 590
24. TANISHA SHETTY 590
24. TANISHA SHETTY 590
25. SRIHARI S G 590
25. SRIHARI S G 590
Co1 SAHANA NAYAK 594
Co1 SAHANA NAYAK 594
Co3 NAIK RAKSHA RAMACHANDRA 592
Co3 NAIK RAKSHA RAMACHANDRA 592
Co2 TANVI RAO 594
Co2 TANVI RAO 594
Co4 YASHASVI NAYAK 591
Co4 YASHASVI NAYAK 591
Co5 SACHIN SURESH SHENOY 589
Co5 SACHIN SURESH SHENOY 589
Co6. KHATIJATUL RAAFIYA 588
Co6. KHATIJATUL RAAFIYA 588

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ-ಸಾಧಕರಿಗೆ ಪ್ರಾಂಶುಪಾಲರ ಸಂಘದ ಅಭಿನಂದನೆ

0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ-ಸಾಧಕರಿಗೆ ಪ್ರಾಂಶುಪಾಲರ ಸಂಘದ ಅಭಿನಂದನೆ

ಉಡುಪಿ ಜಿಲ್ಲಾ ಸಾಧಕರಿಗೆ ಪ್ರಾಂಶುಪಾಲರ ಸಂಘದ ಅಭಿನಂದನೆ

ಉಡುಪಿ:2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ಶೇ.93.60ರ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ. ಈ ಸಾಧನೆಗೆ ಜಿಲ್ಲಾಡಳಿತದ ಮಾರ್ಗದರ್ಶನ, ಉಪನಿರ್ದೇಶಕರ ನಿರ್ದೇಶನ, ಕಾಲೇಜು ಆಡಳಿತ ಮಂಡಳಿಗಳ ಹಾಗೂ ಪೋಷಕರ ಸಹಕಾರ ಮತ್ತು ಪ್ರಾಂಶುಪಾಲರ ಸಂಘದ ಕಾರ್ಯವೈಖರಿಯು ಕಾರಣೀಭೂತವಾಗಿದೆ. ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾದ ಆಸ್ತಿ ಎಸ್ ಶೆಟ್ಟಿ (596), ವಾಣಿಜ್ಯ ವಿಭಾಗದಲ್ಲಿ ಕ್ರೈಸ್ಟ್ ಕಿಂಗ್ ಕಾಲೇಜಿನ ಸುಧೀಕ್ಷಾ ಶೆಟ್ಟಿ ಮತ್ತು ವಿದ್ಯೋದಯ ಕಾಲೇಜಿನ ಪ್ರಣವಿ ಎಚ್ ಸುವರ್ಣ(595) ಹಾಗೂ ಕಲಾ ವಿಭಾಗದಲ್ಲಿ ಎಂ.ಜಿ.ಎಂ ಕಾಲೇಜಿನ ದಿವ್ಯ (586) ಅಂಕ ಪಡೆದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 596 ಅಂಕಗಳೊಂದಿಗೆ ಎಂ.ಜಿ.ಎಂ ಕಾಲೇಜಿನ ಭೂಮಿಕಾ ಆರ್ ಹೆಗ್ಡೆ, ಕಾರ್ಕಳ ಜ್ಞಾನಸುಧಾದ ಶ್ರೀರಕ್ಷಾ ಬಿ. ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್ ಮತ್ತು ಉಡುಪಿ ಜ್ಞಾನಸುಧಾದ ಅಪೂರ್ವ್ ವಿ ಕುಮಾರ್ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿ, ವಾಣಿಜ್ಯ ವಿಭಾಗದಲ್ಲಿ 594 ಅಂಕಗಳೊಂದಿಗೆ ಕಾರ್ಕಳ ಜ್ಞಾನಸುಧಾ ಕಾಲೇಜಿನ ಸಹನಾ ನಾಯಕ್ ಹಾಗೂ ತನ್ವಿರಾವ್ ಮತ್ತು ತ್ರಿಷಾ ಕಾಲೇಜು ಕಟಪಾಡಿಯ ಪ್ರಣವಿ ಎಚ್ ಸುವರ್ಣ ದ್ವಿತೀಯ ಸ್ಥಾನಿಯಾಗಿ ಹಾಗೂ ಕಲಾ ವಿಭಾಗದಲ್ಲಿ 574 ಅಂಕದೊAದಿಗೆ ವಂಡ್ಸೆ ಸ.ಪ.ಪೂ.ಕಾಲೇಜಿನ ನವ್ಯ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪ್ರಾಂಶುಪಾಲರ ಸಂಘದ ಸದಸ್ಯರ ಹಾಗೂ ಪದಾಧಿಕಾರಿಗಳ ಪರವಾಗಿ ಸಂಘದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರ್ ಇವರು ಅಭಿನಂದಿಸಿ, ಜಿಲ್ಲೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ಸಾಧಕ ವಿದ್ಯಾರ್ಥಿಗಳನ್ನು ಆಗಸ್ಟ್ ತಿಂಗಳಲ್ಲಿ ನಡೆಯುವ ಸಂಘದ ವಾರ್ಷಿಕ ಮಹಾಸಭೆಯಂದು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿರುತ್ತಾರೆ.

ಸಂಘವು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಘಟಿತವಾಗಿ, ಉಪನ್ಯಾಸಕರುಗಳಿಗೆ ವಿಷಯವಾರು ಶೈಕ್ಷಣಿಕ ಕಾರ್ಯಗಾರ, ಜಿಲ್ಲಾ ವಾರ್ಷಿಕ ಕ್ರೀಡಾಕೂಟ ಆಯೋಜನೆ, ವಿವಿಧ ಪ್ರಶ್ನಾಪತ್ರಿಕೆ ತಯಾರಿ ಮತ್ತು ಹಂಚಿಕೆಯ ಜವಾಬ್ದಾರಿ, ಜಿಲ್ಲೆಯ ಪ್ರಾಂಶುಪಾಲರುಗಳಿಗೆ ‘ಪ್ರಸ್ತುತ ಶೈಕ್ಷಣಿಕ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಕುರಿತಂತೆ ತಜ್ಞರಿಂದ ಮಾಹಿತಿ ಕಾರ್ಯಗಾರ, ಜಿಲ್ಲೆಯ ಬೋಧಕೇತರ ಕಛೇರಿ ಸಿಬ್ಬಂದಿ ವರ್ಗಕ್ಕೆ ವ್ಯಕ್ತಿತ್ವ-ವಿಕಸನ ಶಿಬಿರ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಾಂತ್ರಿಕ ಮಾಹಿತಿ ಕಾರ್ಯಗಾರ, ಅಶಕ್ತರಿಗೆ ಆರ್ಥಿಕ ಸಹಾಯ, ವಿಕಲ ಚೇತನ ಮಕ್ಕಳಿಗೆ ಧನ ಸಹಾಯ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರ ಮೂಲಕ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಉತ್ತಮ ಶೈಕ್ಷಣಿಕ ಗುಣಮಟ್ಟ ಕಾಯ್ದು, ಉಡುಪಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮುವಲ್ಲಿ ಮಹತ್ತರವಾದ ಕೊಡುಗೆ ನೀಡಿರುತ್ತದೆ.

ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘವು ಯೋಜನೆಗಳನ್ನು ರೂಪಿಸಿಕೊಂಡು ಒಗ್ಗಟ್ಟಾಗಿ ಕಾರ್ಯಪ್ರವೃತ್ತವಾಗಲಿದೆ ಎಂದು ಅನುದಾನಿತ ಮತ್ತು ಅನುದಾನ ರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದಿನೇಶ್ ಎಂ. ಕೊಡವೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬೈಲೂರು:ಸರಕಾರಿ ಪದವಿಪೂರ್ವ ಕಾಲೇಜು ಶೇಕಡ 100 ಫಲಿತಾಂಶ-ಸುದೀಕ್ಷ ಸಾಧನೆ

0

ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಇಲ್ಲಿಯ ವಿದ್ಯಾರ್ಥಿಗಳು ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಪರೀಕ್ಷೆಗೆ ಹಾಜರಾದ 160 ವಿದ್ಯಾರ್ಥಿಗಳ ಪೈಕಿ 155 ವಿದ್ಯಾರ್ಥಿಗಳು ಉತ್ತೀರ್ಣರಾಗಿ 96.8% ಫಲಿತಾಂಶ ದಾಖಲಿಸಿದ್ದಾರೆ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಾಗಿದೆ

ವಿಜ್ಞಾನ ವಿಭಾಗದ ಕುಮಾರಿ ಸುದೀಕ್ಷ ಇವರು 577 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ
ಒಟ್ಟು 27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 106 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕಾರ್ಕಳ/ಉಡುಪಿ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಕಾರ್ಕಳ ಜ್ಞಾನಸುಧಾ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜುಗಳ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ರಾಜ್ಯಮಟ್ಟದಲ್ಲಿ10ರೊಳಗಿನ ರ‍್ಯಾಂಕ್ ಗಳಿಸಿದ ಸಂಸ್ಥೆಯ ಒಟ್ಟು 96 ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ವಿಜ್ಞಾನ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ 4ನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಕಾರ್ಕಳ ಜ್ಞಾನಸುಧಾದ ಆಸ್ತಿ ಎಸ್. ಶೆಟ್ಟಿ, 595 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ 5ನೇ ಹಾಗೂ ಜಿಲ್ಲೆಗೆ ದ್ವಿತೀಯ ಸ್ತಾನಿಗಳಾದ ಕಾರ್ಕಳ ಜ್ಞಾನಸುಧಾಧದ ಶ್ರೀ ರಕ್ಷಾ ಆರ್ ನಾಯಕ್, ವಿಶ್ವಾಸ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ ಕುಮಾರ್ ಮತ್ತು ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನಿಗಳಾದ ಕಾರ್ಕಳ ಜ್ಞಾನಸುಧಾದ ಕು.ಸಹನಾ ನಾಯಕ್ ಮತ್ತು ತನ್ವಿ ರಾವ್ ಇವರೊಂದಿಗೆ ಇತರ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾದ ಸಿ.ಇ.ಒ ದಿನೇಶ್ ಎಂ ಕೊಡವೂರ್, ಉಡುಪಿ ಜ್ಞಾನಸುಧಾದ ಪ್ರಾಂಶುಪಾಲರಾದ ಶ್ರೀ ಸಂತೋಷ್ ಹಾಗೂ ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ, ಸಾಧಕ ವಿದ್ಯಾರ್ಥಿಗಳ ಹೆತ್ತವರು ಹಾಗೂ ಹಿತೈಷಿಗಳಾದ ತ್ರಿವಿಕ್ರಮ ಕಿಣಿ ಹಾಗೂ ದೇವೇಂದ್ರ ನಾಯಕ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಆಂಗ್ಲಭಾಷಾ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಕಳ:ದ್ವಿತೀಯ ಪಿಯುಸಿ ಫಲಿತಾಂಶ-ಕ್ರೈಸ್ಟ್ ಕಿಂಗ್ ನ ಸುಧೀಕ್ಷಾ ಶೆಟ್ಟಿ ರಾಜ್ಯಕ್ಕೆ ಐದನೇ ರ‍್ಯಾಂಕ್

0

ಕಾರ್ಕಳ:ದ್ವಿತೀಯ ಪಿಯುಸಿ ಫಲಿತಾಂಶ-ಕ್ರೈಸ್ಟ್ ಕಿಂಗ್ ನ ಸುಧೀಕ್ಷಾ ಶೆಟ್ಟಿ ರಾಜ್ಯಕ್ಕೆ ಐದನೇ ರ‍್ಯಾಂಕ್

ಕ್ರೈಸ್ಟ್ ಕಿಂಗ್: ದ್ವಿತೀಯ ಪಿಯುಸಿ ಫಲಿತಾಂಶ – 595 ಅಂಕಗಳನ್ನು ಪಡೆದ ವಾಣಿಜ್ಯ ವಿಭಾಗದ ಸುಧೀಕ್ಷಾ ಶೆಟ್ಟಿ ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್
ರಾಜ್ಯಕ್ಕೆ ಐದನೇ ರ‍್ಯಾಂಕ್

ಕಾರ್ಕಳ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುಧೀಕ್ಷಾ ಎಸ್ ಶೆಟ್ಟಿ 595 ಅಂಕಗಳನ್ನು ಪಡೆದುಕೊಂಡು ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಅಲ್ಲದೆ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ.

ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಹೀಗೆ ನಾಲ್ಕೂ ವಿಷಯಗಳಲ್ಲಿ 100ಕ್ಕೆ 100ಅಂಕಗಳನ್ನು ಪಡೆದುಕೊಂಡಿದ್ದಾಳೆ. ಕಾರ್ಕಳದ ಜೋಡುರಸ್ತೆ ನಿವಾಸಿಗಳಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ಶ್ರೀಮತಿ ಸುದರ್ಶಿನಿ ಶೆಟ್ಟಿ ದಂಪತಿಗಳ ಪುತ್ರಿಯಾದ ಸುಧೀಕ್ಷಾ ಶೆಟ್ಟಿ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಪಟುವೂ ಆಗಿದ್ದಾಳೆ.

ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಬೋಧಕ ವೃಂದದವರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.

ಕಾರ್ಕಳ-ಹೆಬ್ರಿ:ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನ ಹಾಗೂ ಮಂಜುನಾಥ್ ಜೋಗಿ ನೇಮಕ

0

ಕಾರ್ಕಳ-ಹೆಬ್ರಿ:ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನ ಹಾಗೂ ಮಂಜುನಾಥ್ ಜೋಗಿ ನೇಮಕ

ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನ ಹಾಗೂ ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಮಂಜುನಾಥ್ ಜೋಗಿ ಕಾರ್ಕಳ ಇವರನ್ನು ನೇಮಿಸಲಾಗಿದೆ .

ಕಾಪು ಉಸ್ತುವಾರಿಯಾಗಿ ಮಮತ ನಾಯ್ಕ್, ಹಿರಿಯಡ್ಕ ಉಸ್ತುವಾರಿಯಾಗಿ ಲತಿಫ್, ಬೈಂದೂರು ಉಸ್ತುವಾರಿಯಾಗಿ ಪ್ರಮೋದ್ ಪೂಜಾರಿ, ವಂಡ್ಸೆ ಉಸ್ತುವಾರಿಯಾಗಿ ಸಂಜಯ್ ಆಚಾರ್ಯ, ಉಡುಪಿ ಉಸ್ತುವಾರಿಯಾಗಿ ಪ್ರವೀಣ್ ಬಾರ್ಕುರು, ಬ್ರಹ್ಮವರ ಉಸ್ತುವಾರಿಯಾಗಿ ಸ್ಟೀಫನ್ ಪ್ರಖ್ಯಾತ್, ಕುಂದಾಪುರ ಉಸ್ತುವಾರಿಯಾಗಿ ರಕ್ಷಿತ್ ಶೆಟ್ಟಿ ಹಾಗೂ ಕೋಟ ಉಸ್ತುವಾರಿಯಾಗಿ ಮೊಹಮ್ಮದ್ ಆಫ್ರಿದ್ ಇವರು ನೇಮಕಗೊಂಡಿರುತ್ತಾರೆ.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿಗಳ ಆದೇಶದಂತೆ ಪಕ್ಷದ ಬಲವರ್ದನೆಗಾಗಿ ಜಿಲ್ಲೆಯ 5 ವಿಧಾನಸಭೆ ಹಾಗೂ 10 ಬ್ಲಾಕ್ ಹಾಗೂ ಬೂತ್ ಮಟ್ಟದ ಯುವ ಕಾಂಗ್ರೆಸ್ ಕಮಿಟಿಗಳಲ್ಲಿ ಅರ್ಹ ಮತ್ತು ಪಕ್ಷ ಸಿದ್ಧಾಂತಗಳಿಗೆ ಬದ್ಧರಾಗಿರುವ ಈ ಮೇಲ್ಕಂಡ ನೂತನ ಪದಾಧಿಕಾರಿಗಳನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.

ಪಳ್ಳಿ:ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

0

ಪಳ್ಳಿ:ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಬಂಟರ ಸಂಘ ಪಳ್ಳಿ ನಿಂಜೂರು ಹಾಗೂ ಮಹಿಳಾ ಘಟಕ ಪಳ್ಳಿ ನಿಂಜೂರು ಇದರ ಸಹಭಾಗಿತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರಾಮಕೃಷ್ಣ ಸಭಾಭವನ ಪಳ್ಳಿ ಇಲ್ಲಿ ನಡೆಯಿತು.ಪಳ್ಳಿ – ನಿಂಜೂರು ಬಂಟರ ಸಂಘ 10 ವರ್ಷ ಪೂರ್ಣಗೊಳಿಸಿತು. ಈ ವರ್ಷದಿಂದ ಮಹಿಳಾ ಘಟಕವನ್ನು ಸ್ಥಾಪಿಸಲಾಯಿತು.

ವಿಷು ಶೆಟ್ಟಿ ಅಂಬಲಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ,ಫೆಡರೇಷನ್ ಆಫ್ ಕ್ವಾರಿ ಅಸೋಸಿಯೇಷನ್ ನ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿ,ಸಹನಾ ಗ್ರೂಪ್ ಮಾಲಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಂದ್ರ ಶೆಟ್ಟಿ ಕಾರ್ಕಳ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ನಿಕಟ ಪೂರ್ವಕ ಅಧ್ಯಕ್ಷರಾದ ವಿಜಯ ಎಮ್ ಶೆಟ್ಟಿ ಪಳ್ಳಿ ವಹಿಸಿದ್ದರು.ಬಂಟರ ಯಾನೆ ನಾಡವರ ಸಂಘ ಕಾರ್ಕಳ ಸಂಚಾಲಕರಾದ ವಿಜಯ ಶೆಟ್ಟಿ ಕಾರ್ಕಳ,ಉಡುಪಿ ಗ್ರಾಮೀಣ ಬಂಟರ ಸಂಘ, ಕುಂತಲ ನಗರ ಕಾರ್ಯಧ್ಯಕ್ಷ ಪದ್ಮನಾಭ ಹೆಗ್ದೆ ಮರ್ಣೆ,  ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷರಾದ ಪೂರ್ಣಿಮ ಏನ್ ಹೆಗ್ಡೆ ಕುಂಟಾಡಿ, ಪಳ್ಳಿ – ನಿಂಜೂರು ಬಂಟರ ಸಂಘದ ನೂತನ ಅಧ್ಯಕ್ಷರಾದ ಚಂದ್ರ ಶೇಖರ ಶೆಟ್ಟಿ ಹಾಗು ಮಹಿಳಾ ಘಟಕದ ಅಧ್ಯಕ್ಷರಾದ ಕಾಂತಿ ದಿನೇಶ ಶೆಟ್ಟಿ ಪಳ್ಳಿ, ಜಗದೀಶ್ ಹೆಗ್ಡೆ, ಕುಂಟಾಡಿ ಕೃಷ್ಣರಾಜ ರೈ, ಕಾರ್ಕಳ NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ, ಪಳ್ಳಿ ನಿಂಜೂರು ಬಂಟರ ಸಂಘ ಹಾಗು ಪಳ್ಳಿ – ನಿಂಜೂರು ಮಹಿಳಾ ಘಟಕ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಮತ್ತು ಇನ್ನಿತರ ಊರ ಹಾಗು ಪರವೂರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಪಳ್ಳಿ – ನಿಂಜೂರು ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಮನೋಹರ ಶೆಟ್ಟಿ ಪಳ್ಳಿ ಸ್ವಾಗತಿಸಿದರು.ಸುಜಾತ ಮೋಹನ್ ಶೆಟ್ಟಿ ನಿಂಜೂರು ವಂದಿಸಿದರು.ಚಿತ್ರ ವಿನಯ ಶೆಟ್ಟಿ ನಿಂಜೂರು ಕಾರ್ಯಕ್ರಮ ನಿರೂಪಿಸಿದರು.ನೂತನ ಅಧ್ಯಕ್ಷರಾದ ಚಂದ್ರ ಶೇಖರ ಶೆಟ್ಟಿ ನಿಂಜೂರು ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.ಪಳ್ಳಿ – ನಿಂಜೂರು ಗ್ರಾಮದ ಬಂಟ ಸಮಾಜದವರೆಲ್ಲರೂ ಬಾಗವಹಿಸಿದ್ದರು

ಮತ್ತಾವು ಸೇತುವೆಗೆ ಅನುದಾನ ಮಂಜೂರು,ನಿರಂತರ ಹೋರಾಟಕ್ಕೆ ಸಂದ ಜಯ-ಶ್ರೀಧರ ಗೌಡ ಈದು

0

ಮತ್ತಾವು ಸೇತುವೆಗೆ ಅನುದಾನ ಮಂಜೂರು. ನಿರಂತರ ಹೋರಾಟಕ್ಕೆ ಸಂದ ಜಯ-ಶ್ರೀಧರ ಗೌಡ ಈದು

ಕಳೆದ ಎರಡು ದಶಕಗಳಿಂದ ಅರಣ್ಯ ಮೂಲ ಬುಡಕಟ್ಟು ಮಲೆಕುಡಿಯ ಸಮುದಾಯದ ಹಾಡಿಗೆ ಸಂಪರ್ಕ ಕಲ್ಪಿಸಲು ಸೇತುವೆಯ ನಿರ್ಮಾಣಕ್ಕಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ಅರಣ್ಯ ಇಲಾಖೆಯ ಕಾನೂನು ತೊಡಕುಗಳಿದ್ದ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣದ ಕನಸು ನನಸಾಗಲೆ ಇಲ್ಲ.

ಕೆಲವು ವರ್ಷದ ಹಿಂದೆ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಇದೀಗ ಅನುಮತಿ ದೊರೆತ ಕಾರಣದಿಂದ 2 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿರುವುದು ಸಂತಸ ತಂದಿದೆ. ಸಹಕರಿಸಿದ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಅವರಿಗೆ ಹಾಗೂ ಇಲಾಖಾಧಿಕಾರಿಗಳಿಗೆ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಧನ್ಯವಾದ ತಿಳಿಸಿದ್ದಾರೆ.

ಕಾರ್ಕಳ:ಮಹಿಳೆಯ ಕರಿಮಣಿ ಸರಕ್ಕೆ ಕನ್ನ-ಆರೋಪಿ ಬಂಧನ

0

ಕಾರ್ಕಳ:ಮಹಿಳೆಯ ಕರಿಮಣಿ ಸರಕ್ಕೆ ಕನ್ನ-ಆರೋಪಿ ಬಂಧನ

ಕಾರ್ಕಳ:ಬೆಳುವಾಯಿ ಕರಿಯನಂಗಡಿ ನಡೆದುಕೊಂಡು ಹೋಗುತಿದ್ದ ಮಹಿಳೆಯೋರ್ವರಲ್ಲಿ ಬೈಕಿನಲ್ಲಿ ಬಂದ ಅಪರಿಚಿತನೋರ್ವ ‘ಬೆಳುವಾಯಿಗೆ ದಾರಿ ಯಾವುದು’ ಎಂದು ಕೇಳಿ ಆಕೆಯ ಕರಿಮಣಿ ಸರವನ್ನು ಸೆಳೆದುಕೊಂಡು ಪರಾರಿಯಾದ ಘಟನೆ ಸೋಮವಾರ ನಡೆದಿದೆ.

ಬೆಳುವಾಯಿ ಕಾಯಿದೆಮನೆ ಇಂದಿರಾ ಅವರು ಅಳಿಯ ಭಾಸ್ಕರ ಅವರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.ಕರಿಮಣಿ ಸರಕ್ಕೆ ಕೈ ಹಾಕುವಾಗ ಪ್ರತಿಭಟಿಸಿದ ಆಕೆಯನ್ನು ಆತ ದೂಡಿ ಹಾಕಿದ್ದಾನೆ.ದೂಡಿದ ರಭಸಕ್ಕೆ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಕಾರ್ಕಳ ತಾಲೂಕು ಕಾಂತಾವರ ಗ್ರಾಮದ ವ್ಯಕ್ತಿ ಎಂದು ತಿಳಿದುಬಂದಿದೆ.

ಸದ್ಯದಲ್ಲೇ ವಿಸ್ತೃತ ಮಾಹಿತಿ…